ಲೋಕದರ್ಶನ ವರದಿ
ಬೆಳಗಾವಿ, 15: ಕೆಎಲ್ಇ ಸಂಸ್ಥೆಯ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ರಿಲಾಯನ್ಸ್ ಪೌಂಢೇಷನ್ ಇವರ ಸಹಯೋಗದಲ್ಲಿ ಜೋಳ ಮತ್ತು ಗೋವಿನ ಜೋಳದಲ್ಲಿ ಹೊಸ ಪ್ರಬೇಧದ ಲದ್ದಿ ಹುಳುವಿನ ನಿರ್ವಹಣೆಯ ಕುರಿತು ಎರಡು ದಿನಗಳ ಅಭಿಯಾನವನ್ನು ರಾಮದುರ್ಗ, ಬೈಲಹೊಂಗಲ ಹಾಗೂ ಸವದತ್ತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಲದ್ದಿಹುಳುವಿನ ಜೀವನ ಚಕ್ರ, ಬಾಧೆಯ ಲಕ್ಷಣ, ನಿರ್ವಹಣಾ ಕ್ರಮಗಳ ಮತ್ತು ವಿಷ ಪಾಷಾಣ ತಯಾರಿಸುವ ವಿವರಗಳ ಬಗ್ಗೆ ಬಿತ್ತಿ ಪತ್ರ ವಿತರಿಸುವ ಮೂಲಕ ರೈತರಿಗೆ ಈ ಕೀಟದ ಸಂಪೂರ್ಣ ಮಾಹಿತಿಯನ್ನು ನೀಡಲಾಯಿತು.
ಅಭಿಯಾನಕ್ಕೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಶ್ರೀದೇವಿಯವರು ಚಾಲನೆ ನೀಡಿದರು. ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ ಮತ್ತು ರಿಲಾಯನ್ಸ್ ಪೌಂಢೇಷನ್ ಅಧಿಕಾರಿಗಳಾದ ಶ್ರೀ. ಮಂಜುನಾಥ ಇವರು ವಿವಿಧ ಗ್ರಾಮಗಳಲ್ಲಿ ಕೀಟ ನಿರ್ವಹಣೆಯ ಮಾಹಿತಿ ನೀಡಿದರು.
ಕೀಟದ ಜೀವನ ಚಕ್ರ: ಈ ಕೀಟವು 2-7 ದಿನಗಳವರೆಗೆ ಮೊಟ್ಟೆಯಾವಸ್ಥೆಯಲ್ಲಿದ್ದು, ನಂತರ ಹೊರಬಂದ ಕೀಡೆಯು 14-30 ದಿನಗಳವರೆಗೆ ಬೆಳೆದು ಸುಳಿಗಳಲ್ಲಿ ಬಾಧೆ ಉಂಟು ಮಾಡುತ್ತದೆ. ನಂತರ 8-30 ದಿನಗಳವರೆಗೆ ಕೋಶಾವಸ್ಥೆಯಲ್ಲಿದ್ದು, ಪ್ರೌಢಾವಸ್ಥೆಯಲ್ಲಿ 7-21 ದಿನಗಳವರೆಗೆ ವಾಸವಿದ್ದು, ಅಧಿಕ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತದೆ.
ಬಾಧೆಯ ಲಕ್ಷಣಗಳು: ಹೊಸ ಪ್ರಭೇಧದ ಲದ್ದಿ ಹುಳುಗಳು ಮೊದಲು ಎಲೆಯ ಸುಳಿಗರಿಗಳ ಎಲೆಗಳನ್ನು ತಿನ್ನುತ್ತದೆ ಮತ್ತು ಕಾಂಡ ಕೊರೆಯುವ ಕೀಟದಂತೆ ಎಲೆ ಸುಳಿಗರಿಗಳಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಕಾಣಬಹುದು. ಈ ಕೀಟವು ಹಗಲು ಮತ್ತು ರಾತ್ರಿ ಹೊತ್ತಿನಲ್ಲಿ ಎಲೆಗಳನ್ನು ತಿನ್ನುವುದು ಕಂಡುಬಂದರೂ ಕೂಡ ಬಾಧೆಯು ಬೆಳಿಗ್ಗೆ ಹಾಗೂ ಮಧ್ಯಾಹ್ನದ ಸಮಯದಲ್ಲಿ ಹೆಚ್ಚಿರುತ್ತದೆ. ಈ ಕೀಟಗಳು ಸ್ವಲ್ಪ ಸಮಯದಲ್ಲಿ ಹೆಚ್ಚು ಆಹಾರವನ್ನು ತಿಂದು ಹೆಚ್ಚಿನ ಪ್ರಮಾಣದಲ್ಲಿ ಲದ್ದಿಯನ್ನು ಹಾಕುವುದರಿಂದ ಇವುಗಳ ಇರುವಿಕೆಯನ್ನು ಗುರುತಿಸಬಹುದಾಗಿದೆ. ಈ ಹಂತದಲ್ಲಿ ಸರಿಯಾಗಿ ಕೀಟ ನಿರ್ವಹಣೆ ಮಾಡದಿದ್ದಲ್ಲಿ ಹುಳುವಿನ ಗಾತ್ರವು ದೊಡ್ಡದಾದಂತೆ ಗಿಡಗಳ ಸುಳಿಗರಿಗಳನ್ನು ತಿನ್ನುವುದರ ಜೊತೆಗೆ ಎಲೆಗಳಲ್ಲಿ ದೊಡ್ಡ ಗಾತ್ರಗಳ ರಂಧ್ರವನ್ನು ಕೊರೆಯುತ್ತದೆ.
ನಿರ್ವಹಣೆ:
ಹೊಲದಲ್ಲಿ ಮತ್ತು ಬದುಗಳ ಮೇಲೆ ಇರುವ ಕಳೆಗಳನ್ನು ನಾಶ ಮಾಡಬೇಕು
ಬೆಳೆಯು ಎತ್ತರದಲ್ಲಿ ಕಡಿಮೆಯಿದ್ದರೆ: ರಾಸಾಯನಿಕಗಳಾದ ಎಮಾಮೆಕ್ಷಿನ್ ಬೆಂಜೋಯೇಟ್ 5 ಎಸ್.ಜಿ. ಯನ್ನು 0.2 ಗ್ರಾಂ ಅಥವಾ ಸ್ಪೈನೊಸ್ಯಾಡ್ 45 ಎಸ್.ಸಿ ಯನ್ನು 0.2 ಮಿ.ಲೀ ಅಥವಾ ಲ್ಯಾಮ್ಡಾಸೈಲೊಥ್ರಿನ್ 2.5 ಇಸಿ ಯನ್ನು 1 ಮಿ.ಲೀ ಅಥವಾ ಕ್ಲೋರ್ಪೈರಿಫಾಸ್ 20 ಇಸಿಯನ್ನು 2 ಮಿ.ಲೀ. ಅಥವಾ ಕ್ವಿನಾಲ್ ಫಾಸ್ 25 ಇಸಿಯನ್ನು 2 ಮಿ.ಲೀ. ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿ ಹಾಗೂ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು
ಜೈವಿಕ ಕ್ರಮವಾಗಿ 1 ಗ್ರಾಂ ನ್ಯುಮೋರಿಯಾ ರಿಲೈ ಅಥವಾ 1 ಗ್ರಾಂ ಬಿಟಿ ದುಂಡಾಣು ಅಥವಾ 2 ಗ್ರಾಂ ಮೆಟರೈಝಿಂ ಅನಿಸೊಪ್ಲೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು
ಬೆಳೆಯು ಎತ್ತರವಾಗಿದ್ದಲ್ಲಿ ಕಳಿತ ವಿಷ ಪಾಷಾಣದ ಬಳಕೆಯಿಂದ ಈ ಕೀಟಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಒಂದು ಎಕರೆಗೆ 20 ಕೆಜಿಯಂತೆ ವಿಷ ಪಾಷಾಣ ತಯಾರಿಸಿ ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಸಾಯಂಕಾಲದ ಸಮಯದಲ್ಲಿ ಎರಚಬೇಕು. ಕೀಡೆಗಳು ಈ ವಿಷ ಪಾಷಾಣಕ್ಕೆ ಬೇಗನೆ ಆಕಷರ್ಿತಗೊಂಡು ತಿನ್ನುವುದರಿಂದ ಬಹು ಬೇಗನೆ ಹತೋಟಿ ಸಾಧ್ಯವಾಗುತ್ತದೆ. ಬೆಳೆಗಳ ಸಂಖ್ಯೆ ದಟ್ಟವಾಗಿದ್ದಲ್ಲಿ 2 ಸಾಲಿಗೊಂದರಂಗೆ 2 ಮೀಟರ್ ಅಂತರದಲ್ಲಿ ಒಂದೊಂದು ಹಿಡಿ ಪಾಷಾಣವನ್ನು ಹೊಲದಲ್ಲಿ ಇಟ್ಟು ಹುಳುಗಳನ್ನು ಆಕಷರ್ಿಸಿ ನಾಶ ಮಾಡಬಹುದು