ಕೃಷಿ ಭೂಮಿ 'ಅಭಿವೃದ್ಧಿ'ಗೆ ಮುಂದಾದ ಹೊಸ ಚಿಗುರು ಸಂಸ್ಥೆ

 

ಬೆಂಗಳೂರು, ಆಗಸ್ಟ್ 23 :  ಕೃಷಿ ಭೂಮಿ ನಿರ್ವಹಣೆಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೊಸ ಚಿಗುರು ಸಂಸ್ಥೆ  ಶುಕ್ರವಾರ ಕೃಷಿ ಕ್ಷೇತ್ರದ ಅನುಭವ ನೀಡುವ ಹೊಸ ಕೃಷಿ ಭೂಮಿ (ಫಾವಾ್ಲ್ಯರ್ುಂಡ್) 'ಅಭಿವೃದ್ಧಿ' ಯೋಜನೆಗೆ ಚಾಲನೆ ನೀಡಿತು 

ಕೃಷಿ ಭೂಮಿ ಅಭಿವೃದ್ಧಿ ವಲಯದಲ್ಲಿ ಈ ಸಂಸ್ಥೆ ನವೋದ್ಯಮವಾಗಿ ಕಾರ್ಯನಿರ್ವಹಿಸಲಿದ್ದು, ಕೃಷಿ ಮಾಡುವವರ ಕನಸನ್ನು ನನಸು ಮಾಡುವ ಕಾಯಕದಲ್ಲಿ ಈ ಸಂಸ್ಥೆ ತೊಡಗಲಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹೊರವಲಯದಲ್ಲಿ ಸಣ್ಣ ಪ್ರಮಾಣದಲ್ಲಿ ಕೃಷಿ ಭೂಮಿ ಖರೀದಿಸುವ ಪರಿಪಾಠ ಹೆಚ್ಚಾಗಿದೆ. ಬಹುತೇಕ ಮಂದಿ ಇಂತಹ ಭೂಮಿಯನ್ನು ಯಾವುದೇ ಚಟುವಟಿಕೆ ನಡೆಸದೇ ಪಾಳು ಬಿಟ್ಟಿರುವುದು ಕಂಡು ಬಂದಿದೆ. ಇಂತಹ ಭೂಮಾಲೀಕರ ಭೂಮಿಯನ್ನು ಅಭಿವೃದ್ಧಿ ಪಡಿಸಿ ಹಸಿರು ನಳನಳಿಸುವಂತೆ ಮಾಡುವ ಕಾರ್ಯದಲ್ಲಿ ಈ ಸಂಸ್ಥೆ ತೊಡಗಲಿದೆ.  

ಇದಲ್ಲದೇ, ಸಂಸ್ಥೆಯ ಮಾದರಿ 'ಅಭಿವೃದ್ಧಿ ಫಾರ್ಮ' ನಗರದಿಂದ 136 ಕಿ.ಮೀ ದೂರದ ಆಂಧ್ರಪ್ರದೇಶದ ಹಿಂದೂಪುರ ರಾಜ್ಯ ಹೆದ್ದಾರಿಯಲಿದೆ. ಇದು 108 ಎಕರೆ ಪ್ರದೇಶಗಳಷ್ಟು ವಿಸ್ತಾರವಾಗಿದೆ. ಆಲ್ಫಾನ್ಸ್, ಬಾದಾಮಿ ಮತ್ತು ಮಲ್ಲಿಕಾದಂತಹ ಅಪರೂಪದ ಮಾವಿನ ತಳಿಗಳ ಸುಮಾರು 5 ಸಾವಿರ ಮರಗಳನ್ನು ಗ್ರಾಹಕರ ಪರವಾಗಿ ಈ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. 

ಕೃಷಿ ಭೂಮಿಯ ಅಭಿವೃದ್ಧಿ ಮೌಲ್ಯ ಪ್ರತಿ ಚದರ ಅಡಿಗೆ ಕೇವಲ 59 ರೂಪಾಯಿಗಳಾಗಿದ್ದು, 0.25 ಎಕರೆಯಿಂದ 1 ಎಕರೆಯವರೆಗಿನ ಭೂಮಿ ಗ್ರಾಹಕರಿಗೆ ಇಲ್ಲಿ ದೊರೆಯುತ್ತದೆ. ಅಲ್ಲದೇ, ಕೃಷಿ ಸೇವೆ ಮತ್ತು ಒಂದು ವರ್ಷದ ಉಚಿತ ನಿರ್ವಹಣೆಯನ್ನೂ ಕೂಡ ಒಳಗೊಂಡಿದೆ. ಒಂದು ವರ್ಷದ ನಂತರ ನಿರ್ವಹಣಾ ವೆಚ್ಚ ಪಾವತಿಸಬೇಕಾಗುತ್ತದೆ.  ಮರಗಳ ಜೊತೆಗೆ ಹಣ್ಣು ತರಕಾರಿಗಳನ್ನೂ ಇಲ್ಲಿ ಬೆಳೆಸಲಾಗುತ್ತಿದೆ. 

'ಕಡಿಮೆ ಮಾಡಿ, ಮರುಬಳಕೆ ಮಾಡಿ, ಮರು ತಯಾರಿಸಿ' ಪರಿಕಲ್ಪನೆಯಡಿ ಹೊಸಚಿಗುರು ಸಂಸ್ಥೆ ಕೃಷಿ ಚಟುವಟಿಕೆಗಳನ್ನು ನಡೆಸಲಿದೆ. ವಾರಾಂತ್ಯದಲ್ಲಿ ಕೃಷಿ ಭೂಮಿಗೆ ಭೇಟಿ ನೀಡುವ ಗ್ರಾಹಕರಿಗೆ ಮನೆಗಳು, ಕಾಟೇಜ್ಗಳು, ಸೈಕ್ಲಿಂಗ್ ಪಥಗಳು, ರೀಡಿಂಗ್ ಪಾಡ್, ವೀಕ್ಷಣಾ ತಾಣಗಳು ಮತ್ತು ಬಹುಹಂತದ ಕ್ಯಾಂಪಿಂಗ್ ಸೌಲಭ್ಯಗಳ ಜೊತೆಗೆ ಗ್ರಾಹಕರಿಗೆ ಪ್ರಕೃತಿಯೊಂದಿಗೆ ಬೆರೆಯುವ ಅವಕಾಶ ಕಲ್ಪಿಸುವ ಹೊಸ ಯೋಜನೆ ಜಾರಿಗೆ ತಂದಿದೆ. 

ಈಗಾಗಲೇ 'ಅಭಿವೃದ್ಧಿ' ಕೃಷಿ ಭೂಮಿ ಪ್ರದೇಶದಲ್ಲಿ ಅತಿಥಿ ಗೃಹವಿದ್ದು, ವಾರಾಂತ್ಯವನ್ನು ಇಲ್ಲಿ ಕಳೆಯಬಹುದಾಗಿದೆ. 

ಹೊಸ ಚಿಗುರು ಅಧ್ಯಕ್ಷ ಅಶೋಕ್ ಮಾತನಾಡಿ,  ಕೃಷಿ ಸಂಪತ್ತು ಸುಸ್ಥಿರ ರೂಪದಲ್ಲಿ ಬಳಕೆಯಾಗಬೇಕು ಎಂಬುದು ಸಂಸ್ಥೆಯ ಆಶಯ. ಎಲ್ಲ ಬಗೆಯ ಪರಿಪೂರ್ಣವಾದ ಕೃಷಿ ಸೇವೆಗಳನ್ನು ಇಲ್ಲಿ ಒದಗಿಸಲಾಗುತ್ತಿದ್ದು, ಗ್ರಾಹಕರಿಗೆ ಕೃಷಿಯ ಕುರಿತು ಅನುಭವ ನೀಡುತ್ತೇವೆ ಎಂದರು. 

 ಹೊಸ ಚಿಗುರು ನಿದರ್ೆಶಕ ಶ್ರೀನಾಥ್ ಮಾತನಾಡಿ, ಹೊಸ ಕೃಷಿಭೂಮಿ ಚದರ ಅಡಿಗೆ ಕೇವಲ 59 ರೂ.ಗಳನ್ನು ಪಾವತಿಸಿದರೆ, ಕೃಷಿ ಭೂಮಿಯ ಒಡೆತನ ಮಾತ್ರವಲ್ಲದೇ, ಅಲ್ಲಿರುವ ಎಲ್ಲಾ ಸೌಲಭ್ಯಗಳನ್ನೂ ಪಡೆಯಬಹುದು. ಕಾಲು ಎಕರೆ ಕೃಷಿ ಭೂಮಿಯ ಈ ಒಡೆತನ ಪರಿಸರ ಸ್ನೇಹಿಯಾಗಿರುವ ಪ್ರತಿಯೊಬ್ಬರಿಗೂ ಕೈಗೆಟಕುವಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಐಯೋಥಮರ್್ ಕೈಗಾರಿಕೆಯ ನಿದರ್ೆಶಕ ಎಂಡಿ ವಿ ರಂಗನಾಥನ್, ಎಂಬಸಿ ಆಫೀಸ್ ಪಾಕ್ರ್ಸ ಆ್ಯಂಡ್ ಸ್ಪೇಸಸ್ ನ ಹಣಕಾಸು ವಿಭಾಗದ ಉಪಾಧ್ಯಕ್ಷ ಅನೂಪ್ ಜೈನ್, ಹೊಸ ಚಿಗುರು ಸಂಸ್ಥೆಯ ಸಹ ಸ್ಥಾಪಕರಾದ ಅಶೋಕ್ ಜೆ ಮತ್ತು ಶ್ರೀರಾಮ್ ಚಿತ್ಲೂರ್ ಉಪಸ್ಥಿತರಿದ್ದರು.