ಹಾವೇರಿ: ಫೆ.26: ಮೀನು ಸಾಗಾಣಿಕೆಯನ್ನು ವ್ಯವಸ್ಥಿತಗೊಳಿಸಲು, ರಾಜ್ಯದಲ್ಲಿರುವ ಕೆರೆಗಳು, ಜಲಾಶಯಗಳ ಗುತ್ತಿಗೆ, ಹರಾಜು ಮೂಲಕ ವಿಲೇವಾರಿಮಾಡುವ ಪದ್ಧತಿಯಲ್ಲಿ ಬದಲಾವಣೆ ತರಲಾಗುವುದು. ಮೀನುಗಾರಿಕೆಗಾಗಿ ಜಲಮೂಲಗಳ ವಿಲೇವಾರಿಗೆ ರಾಜ್ಯದಲ್ಲಿ ಹೊಸ ಸೂತ್ರ ಅಳವಡಿಸಿಕೊಳ್ಳಲು ಚಿಂತನೆ ನಡೆದಿದೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೀನುಗಾರಿಕೆಗೆ ಒಳಪಡುವ ಕೆರೆಗಳು ಸೇರಿದಂತೆ ಜಲಮೂಲಗಳ ಹಂಚಿಕೆ ಕ್ರಮದಲ್ಲಿ ಬದಲಾವಣೆ ತರಲು ಸಲಹೆಗಳನ್ನು ಪಡೆಯಲಾಗತ್ತದೆ. ಅತ್ಯಂತ ಪಾರದರ್ಶಕವಾಗಿ ವಿತರಣೆಯಾಗಬೇಕಾಗಿದೆ. ಆನ್ಲೈನ್ ಮೂಲಕ ಅಜರ್ಿ ಆಹ್ವಾನಿಸಿ ಟೆಂಡರ್ ವಿಲೇಗೊಳಿಸಬೇಕೇ ಅಥವಾ ಪಂಚಾಯತ್ವಾರು ಹರಾಜು ಮೂಲಕ ವಿಲೇಗೊಳಿಸಬೇಕೇ ಎಂಬುದನ್ನು ಚಚರ್ಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಕೆರೆಗಳ ವಗರ್ೀಕರಣಕ್ಕೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವರ್ಾಹಣಾಧಿಕಾರಿಗಳನ್ನು ಮುಖಸ್ಥರನ್ನಾಗಿ ಮಾಡಿ ಎ, ಬಿ ಹಾಗೂ ಸಿ ದಜರ್ೆಯ ಕೆರೆಗಳನ್ನಾಗಿ ವಗರ್ೀಕರಿಸಲಾಗುವುದು. ಮೀನುಗಾರರ ಸಂಘ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಆಥರ್ಿಕ ದುರ್ಬಲರಿಗೂ ಇಂತಿಷ್ಟು ಕೆರೆಗಳೆಂದು ಮೀಸಲಿರಿಸಿ ಗುತ್ತಿಗೆ ನೀಡಲಾಗುವುದು. ಮೀನು ಸಾಕಾಣಿಕೆಗೆ ಹಣಕಾಸಿನ ತೊಂದರೆ ಇದ್ದರೆ ಆಥರ್ಿಕ ನೆರವು ನೀಡಲು ಚಿಂತನೆ ನಡೆಸಲಾಗುವುದು. ಕೆರೆಗಳ ವಗರ್ೀಕರಣ ಕಾರ್ಯವನ್ನು ಹಾವೇರಿಯಿಂದಲೇ ಆರಂಭಿಸಲಾಗುವುದು. ಇಲ್ಲಿ ಯಶ್ಸಸಾದರೆ ರಾಜ್ಯದಲ್ಲೇ ಮಾದರಿಯನ್ನಾಗಿ ಈ ಸೂತ್ರವನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.
ಮೀನುಗಾರರಿಗೆ ಸಕರ್ಾರದಿಂದ ಸಿಗುವ ಮೀನಿನ ಬಲೆ, ಹುಟ್ಟು ಇತರ ಪರಿಕರಗಳನ್ನು ಮಾನ್ಯ ಶಾಸಕರ ಮೂಲಕವೇ ಸಾರ್ವಜನಿಕ ಸಮಾರಂಭಮಾಡಿ ವಿತರಣೆಗೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಬಜೆಟ್ನಲ್ಲಿ ಮಹಿಳಾ ಮೀನುಗಾರರಿಗೆ ದ್ವಿಚಕ್ರವಾಹನ ವಿತರಿಸುವ ಯೋಜನೆಯನ್ನು ಅಳವಡಿಸಲು ಚಿಂತನೆ ನಡೆಸಿದೆ. ಸಕರ್ಾರಕ್ಕೆ ಈ ಕುರಿತಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಮೂಲಕ ಮಹಿಳಾ ಮೀನುಗಾರರ ಆಥರ್ಿಕ ಸ್ವಾವಲಂಬನೆಗೆ ಸಕರ್ಾರ ಒತ್ತು ನೀಡಲು ಚಿಂತನೆ ಮಾಡಿದೆ ಎಂದು ಹೇಳಿದರು.
ಮತ್ಸದಶರ್ಿನಿ ಯೋಜನೆಯಡಿ ರಾಜ್ಯದಲ್ಲೇಡೆ ಹೋಟೆಲ್ಗಳನ್ನು ಮೀನುಗಾರಿಕೆ ಇಲಾಖೆಯಿಂದ ತೆರೆಯಲಾಗುವುದು. ಜನತೆಗೆ ಮೀನು ಖಾದ್ಯಗಳ ವಿತರಣೆಗೆ ಚಿಂತನೆ ನಡೆದಿದೆ ಎಂದು ಹೇಳಿದರು.
ಮೀನುಗಾರಿಕೆ ಕಡಿಮೆ ಇರುವ ಪ್ರದೇಶದಲ್ಲಿ ಮೀನು ಸಾಗಾಣಿಕೆಗೆ ಉತ್ತೇಜನ ನೀಡಲು ಇಲಾಖೆಯಿಂದ ಕೆರೆಗಳ ಪುನಶ್ಚೇತನ ಕೇಂದ್ರ, ಮೀನು ಮರಿಗಳ ಉತ್ಪಾದನೆ ಕೇಂದ್ರ ತೆರೆದು ವಿತರಣೆಗೆ ಚಿಂತನೆ ನಡೆದಿದೆ. ಮೀನುಗಾರಿಕೆ ಬಗ್ಗೆ ರೈತರಿಗೆ ಮೀನು ಕೃಷಿಕರಿಗೆ ಮಾಹಿತಿ ಒದಗಿಸಲು ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲೂ ವಿಚಾರ ಸಂಕಿರಣಗಳನ್ನು ನಡೆಸಿ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಮೀನುಗಾರಿಕೆಯನ್ನು ಲಾಭದಾಯಕವಾಗಿಸಲು ಸರ್ವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಹಾನಗಲ್ ಶಾಸಕರಾದ ಸಿ.ಎಂ.ಉದಾಸಿ, ಹಾವೇರಿ ಶಾಸಕರಾದ ನೆಹರು ಓಲೇಕಾರ, ಬ್ಯಾಡಗಿ ಶಾಸಕರದ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಸಿದ್ಧರಾಜ ಕಲಕೋಟಿ , ವಿರುಪಾಕ್ಷಪ್ಪ ಕಡ್ಲಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ರಮೇಶ ದೇಸಾಯಿ ಉಪಸ್ಥಿತರಿದ್ದರು.