ನವದೆಹಲಿ, ಜ 12: ಒಮಾನ್ ನ ದೊರೆ ಸುಲ್ತಾನ್ ಖಬೂಸ್ ಬಿನ್ ಸೈದ್ ಅವರ ನಿಧನದ ಗೌರವಾರ್ಥ ಕೇಂದ್ರ ಸರಕಾರ ಸೋಮವಾರ (ನಾಳೆ ) ಒಂದು ದಿನದ ಶೋಕಾಚರಣೆ ಘೋಷಿಸಿದೆ.
ಒಮಾನ್ ನ ದೊರೆ ಜನವರಿ 10ರಂದು ತಮ್ಮ 79ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು.
ಅವರ ಗೌರವಾರ್ಥವಾಗಿ ಜನವರಿ 13ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ಮಾಡಲಾಗುವುದು ಭಾರತದಾದ್ಯಂತ ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಹಾರಿಸಲಾಗುವುದು ಆ ದಿನ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಗೃಹ ಸಚಿವಾಲ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಸಚಿವಾಲಯ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಸಹ ಕಳುಹಿಸಿದೆ.
ಒಮಾನ್ ದೊರೆ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ದೊರೆ ನಿಜವಾಗಿ ಶಾಂತಿಯ ದ್ಯೋತಕವಾಗಿದ್ದರು ಎಂದೂ ಬಣ್ಣಿಸಿದ್ದಾರೆ.