ತಾಯಿ ಬದುಕಿನ ಜೀವನಾಡಿ ಅವಳದು ಯಾವುದೇ ದುರಾಸೆಯಿಲ್ಲದ ಪ್ರೀತಿ. ತಾಯಿಯ ಪ್ರೀತಿ- ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕವಿ. ಕಲಾವಿದಡಾ. ದಿವಾಕರ ಹೆಗಡೆ ಅಭಿಪ್ರಾಯಪಟ್ಟರು

A mother's way of life is her love without any greed. The poet says that mother's love cannot be val

ತಾಯಿ ಬದುಕಿನ ಜೀವನಾಡಿ  ಅವಳದು ಯಾವುದೇ ದುರಾಸೆಯಿಲ್ಲದ ಪ್ರೀತಿ. ತಾಯಿಯ ಪ್ರೀತಿ- ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕವಿ. ಕಲಾವಿದಡಾ. ದಿವಾಕರ ಹೆಗಡೆ ಅಭಿಪ್ರಾಯಪಟ್ಟರು  

ಧಾರವಾಡ 28 :  ತಾಯಿ ಬದುಕಿನ ಜೀವನಾಡಿ  ಅವಳದು ಯಾವುದೇ ದುರಾಸೆಯಿಲ್ಲದ ಪ್ರೀತಿ. ತಾಯಿಯ ಪ್ರೀತಿ- ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕವಿ. ಕಲಾವಿದಡಾ. ದಿವಾಕರ ಹೆಗಡೆ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ಕುಸುಮ ವಿಠ್ಠಲರಾವ್‌ದೇಶಪಾಂಡೆ ಸ್ಮರಣಾರ್ಥದತ್ತಿ ಅಂಗವಾಗಿ ಆಯೋಜಿಸಿದ್ದ ‘ಉಪನ್ಯಾಸ ಹಾಗೂ ಶ್ರೇಷ್ಠ ತಾಯಿ ಸನ್ಮಾನಕಾರ್ಯಕ್ರಮದಲ್ಲಿ ಅಮ್ಮನೆಂಬ ಅಂತರಂಗ ವಿಷಯಕುರಿತು ಮಾತನಾಡುತ್ತಿದ್ದರು. 

ಮುಂದುವರೆದು ಮಾತನಾಡಿದಅವರು ಭೂಮಿಯ ಮೇಲೆ ತಾಯಿ ಮಕ್ಕಳ ಸಂಬಂಧ ಸೃಷ್ಟಿ ಪರಂಪರೆಯ ಸಂಕೇತ. ಭೂಮಿ ಭಾಷೆ ಹಾಗೂ ನೀರನ್ನು ಸಹ ತಾಯಿಎಂದು ಪೂಜ್ಯ ಭಾವನೆಯಿಂದ ಕಾಣುತ್ತೇವೆ. ದೇವರಿಗೆ ಎಲ್ಲಾ ಕಡೆ ಇರಲು ಸಾಧ್ಯ ಆಗದ್ದಕ್ಕೆ ತಾಯಿಯನ್ನು ಸೃಷ್ಟಿಸಿದ. ದೇವರ ಮತ್ತೊಂದುರೂಪವೇಅಮ್ಮ.ತನಗಾಗಿಏನನ್ನು ಬಯಸದತಾಯಿ ನಿಜವಾಗಿತ್ಯಾಗಮಯಿ. ಇಂದಿನ ಆಧುನಿಕತೆಯ ಭರಾಟೆಯಲ್ಲಿ ತಾಯ್ತನವನ್ನೇ ತಿರಸ್ಕರಿಸುತ್ತಿರುವುದು ವಿಪರ್ಯಾಸ. ಇದೊಂದುದುರಂತವೇ ಸರಿ. ಅಂಥತಾಯಿಯ ಬೆಲೆ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ರಾಜನ್‌ದೇಶಪಾಂಡೆದತ್ತಿ ಮೂಲಕ ತಾಯಿಯನ್ನು ಸ್ಮರಿಸುವುದು ಪುಣ್ಯದಕಾರ್ಯ. ನಿಜವಾಗಿತಾಯಿ ಆ ದೇವರು ನಮಗೆ ನೀಡಿದದೊಡ್ಡ ಆಸ್ತಿ.ತಾಯಿಇಲ್ಲದಜೀವನಜೀವನವೇಅಲ್ಲಎಂದು ಹೇಳಿದರು. 

ದತ್ತಿದಾನಿ ಮಕ್ಕಳ ತಜ್ಞ ವೈದ್ಯಡಾ. ರಾಜಣ್ಣ ದೇಶ ಪಾಂಡೆ ದತ್ತಿ ಆಶಯ ಕುರಿತು ಮಾತನಾಡಿತಮ್ಮತಾಯಿಯನ್ನು ಸ್ಮರಿಸಿಕೊಂಡರು. ಶ್ರೀಮತಿ ಅನುರಾಧ ವೆಂಕಟೇಶ್ ಪ್ರಭುಅವರಿಗೆ ಶ್ರೇಷ್ಠ ತಾಯಿ ಪ್ರಶಸ್ತಿ ಪುರಸ್ಕಾರ ನೀಡಿಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. 

ಡಾ. ಸಂಜೀವಕುಲಕರ್ಣಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಂಕರ ಕುಂಬಿ ನಿರೂಪಿಸಿದರು.ವೀರಣ್ಣಒಡ್ಡೀನ ವಂದಿಸಿದರು.ಕಾರ್ಯಕ್ರಮದಲ್ಲಿಗುರು ಹಿರೇಮಠ ಡಾ.ಮಹೇಶ ಧ. ಹೊರಕೇರಿ ಡಾ. ಜಿನದತ್ತ ಹಡಗಲಿ ಎಂ.ಎಂ. ಚಿಕ್ಕಮಠ ಶಾಂತವೀರ ಬೆಟಗೇರಿ ಎಸ್,ಜಿ. ನಾಡಿಗೇರ, ಶಿವಾನಂದ ಹೂಗಾರ ಸೇರಿದಂತೆ ಮುಂತಾದವರಿದ್ದರು.