ಮುಂಡಗೋಡ 15: ಮುಂಡಗೋಡು ತಾಲೂಕಿನಲ್ಲಿ ಮಂಗಗಳ ಉಪಟಳ ಜಾಸ್ತಿಯಾಗಿದೆ, ಅದು ಯಾವ ಮಟ್ಟಿಗೆಂದರೆ ಇವತ್ತು ಹಾಡುಹಗಲೇ ಮನೆಗೆ ನುಗ್ಗಿ ಮನೆಯ ಸದಸ್ಯರನ್ನು ಘಾಸಿಗೊಳಿಸಿವೆ. ಹೌದು, ಮುಂಡಗೋಡಿನ ಗಾಂಧಿನಗರದಲ್ಲಿ ಒಂದು ಭಯಾನಕ ಘಟನೆ 3-30 4.00 -ಸುಮಾರಿಗೆ ಜರುಗಿದ್ದು ನಗರದ ಜನ ಬೆಚ್ಚಿ ಬಿದ್ದಿದ್ದಾರೆ.
ಇವತ್ತು ಮಧ್ಯಾಹ್ನ ಊಟ ಮುಗಿಸಿ ವಿಷ್ಣು ಕಡಗೋಡು ಮತ್ತೆ ವಿಜಯ ಕಡಗೋಡು ಎಂಬ ದಂಪತಿ ಟಿವಿ ನೋಡುತ್ತಾ ಕುಳಿತಿದ್ದರು. ಎರಡು ಮಂಗಗಳು ಕಿತ್ತಾಡುತ್ತಾ ಮನೆಗೆ ನುಗ್ಗಿ ವಿಜಯಾ ವಿಷ್ಣು ಕಡಗೋಡು ಎಂಬ 45 ವರ್ಷ ವಯಸ್ಸಿನ ಮಹಿಳೆಯನ್ನು ಭೀಕರವಾಗಿ ಕಚ್ಚಿ ಗಾಯಗೊಳಿಸಿದೆ. ಮಹಿಳೆಗೆ 9 ಹೊಲಿಗೆಗಳನ್ನು ಕೈತೋಳಿನ ಭಾಗಕ್ಕೆ ಹಾಕಲಾಗಿದೆ.
ಮನೆಯಲ್ಲಿ ಜನ ಇರುವಾಗಲೇ ಈ ಮಂಗಗಳು ನುಗ್ಗಿ ಯಾರಿಗೂ ಹೆದರದೇ ದಾಂಧಲೆ ನಡಿಸಿ ಹೋಗಿದ್ದು ನಿಜಕ್ಕೂ ವಿದ್ರಾವಕವಾಗಿದೆ. ಅರಣ್ಯ ಇಲಾಖೆ ಕೂಡಲೇ ಸ್ಪಂದಿಸಿ ಉಪವಲಯ ಅರಣ್ಯಧಿಕಾರಿ ಅರುಣ ಕಾಶಿ ಸ್ಥಳಕ್ಕೆ ಭೇಟಿ ನೀಡಿ, ಮಂಗಗಳನ್ನು ಹಿಡಿಯಲು ಸರ್ಕಾರದ ಅನುಮತಿಯ ಅಗತ್ಯವಿದೆ. ಒಮ್ಮೆಲೇ ಬಲೆ ತಂದು ಹಿಡಿಯಲು ಆಗುವುದಿಲ್ಲ ಆದರೂ ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಎಂದು ಇಲಾಖೆಯವರು ತಿಳಿಸಿದ್ದಾರೆ.