ವಿಶ್ವ ಮಾನವ ಕುವೆಂಪು ಸರ್ವರಿಗೂ ಮಾದರಿ: ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

ಗದಗ 18 :  ಕುವೆಂಪು ಒಬ್ಬ ಶ್ರೇಷ್ಟ ಕವಿ.   ರಾಷ್ಟ್ರಕವಿಯಾಗಿ, ವಿಶ್ವಮಾನವರಾಗಿ ಬೆಳೆದ ಅವರ ಜೀವನ ಎಲ್ಲರಿಗೂ ಮಾದರಿ.  ಅವರ ಸಾಹಿತ್ಯವನ್ನು ಎಲ್ಲರೂ ಓದಿ  ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡಾಗ ಅವರ ದಿನಾಚರಣೆ ಹೆಚ್ಚು ಅರ್ಥಪೂರ್ಣವಾಗುತ್ತದೆ  ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ನುಡಿದರು.

          ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಆಯೋಜಿಸಿದ  ರಾಷ್ಟ್ರ ಕವಿ ಕುವೆಂಪು ಜನ್ಮದಿನದ ನಿಮಿತ್ಯ ವಿಶ್ವ ಮಾನವ ದಿನಾಚರಣೆ ಸಮಾರಂಭದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು. 

        ಡಾ. ರಾಮಚಂದ್ರ ಹಂಸನೂರ ಅವರು ಉಪನ್ಯಾಸ ನೀಡಿ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ  ರಾಷ್ಟ್ರಕವಿ  ಕುವೆಂಪು  ಅವರು   1904  ಡಿಸೆಂಬರ್ 29 ರಂದು  ಕುಪ್ಪಳ್ಳಿಯಲ್ಲಿ ಜನಿಸಿದರು.  ಕನ್ನಡ ಕಾವ್ಯ, ಮಹಾಕಾವ್ಯ  ಗದ್ಯ,  ಕಥನ ಕವನ, ಮಕ್ಕಳ ಸಾಹಿತ್ಯ, ಕಾದಂಬರಿ , ಸಣ್ಣ ಕತೆ , ನಾಟಕ, ವಿಮರ್ಶ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ   ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.   ಅವರ    ಜೀವನ ಸಂದೇಶವನ್ನು ರೂಢಿಸಿಕೊಂಡಲ್ಲಿ ಅದುವೇ ನಾವು ಅವರಿಗೆ ಸಲ್ಲಿಸುವ ಅತ್ಯುನ್ನತ ಗೌರವವಾಗಿದೆ  ಎಂದರು. 

        ಹಿರಿಯ ಸಾಹಿತಿ  ಡಿ.ವಿ. ಬಡಿಗೇರ ಕಾವ್ಯವಾಚನ ಮಾಡಿದರು.  ವೆಂಕಟೇಶ ಕುಲಕರ್ಣಿ   ಸುಗಮಸಂಗೀತ ಪ್ರಸ್ತುತಪಡಿಸಿದರು.  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ,  ಅಪರ  ಜಿಲ್ಲಾಧಿಕಾರಿ  ಸತೀಶಕುಮಾರ್ ಎಂ,  ಐ.ಕೆ, ಕಮ್ಮಾರ್ , ಮೌನೇಶ ಬಡಿಗೇರ,    ಸಾಹಿತಿಗಳು, ಕವಿಗಳು  ವಿವಿಧ ಇಲಾಖೆಯ ಅಧಿಕಾರಿಗಳು  ಸಮಾರಂಭದಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೇಶಕ  ವೀರಯ್ಯಸ್ವಾಮಿ ಬಿ ಸರ್ವರನ್ನು ಸ್ವಾಗತಿಸಿದರು.      ಕುಮಾರಿ ಮಂಜರಿ ಹೊಂಬಾಳಿ  ನಿರೂಪಿಸಿದರು.