ಮಹಾಲಿಂಗಪುರ : ನನ್ನ ಗಮನಕ್ಕೆ ತಾರದೆ ನನ್ನ ವಾಡರ್ಿನಲ್ಲಿ ಕೆಲಸ ಪ್ರಾರಂಬಿಸಿದ್ದಾರೆ ಎಂದು ಆರೋಪಿಸಿ ತನ್ನವಾಡರ್ಿನಲ್ಲೆ ನಡೆದಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಒತ್ತಡ ಹಾಕಿ ವಾರ್ಡ ಸದಸ್ಯ ಚನಬಸು ಯರಗಟ್ಟಿ ನಡೆದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
2019-20 ನೇ ಸಾಲೀನ 14 ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಲ್ಲಿ 16 ನೇ ವಾಡರ್ಿನ ಗುರು ಬಾವಿಕಟ್ಟಿ ಮನೆಯಿಂದ ಪುರಸಭೆ ಉದ್ಯಾನವನದ ವರೆಗೆ ಮಂಜೂರಿಯಾದ 4 ಲಕ್ಷ ವೆಚ್ಚದ ರಸ್ತೆ ಡಾಂಬರಿಕರಣ ಕಾಮಗಾರಿಯನ್ನು ಗುತ್ತಿಗೆದಾರ ಪಿ.ಟಿ ಪಾತ್ರೋಟ ಅವರು ಮಾಡುತ್ತಿದ್ದರು. ಆದರೆ ಈ ಕೆಲಸ ನನ್ನ ಗಮನಕ್ಕೆ ಬಂದಿಲ್ಲ, ನಾನು ಈ ರಸ್ತೆಯನ್ನು ಹಾಕಿಲ್ಲ. ಇಲ್ಲಿ ಯಾವುದೇ ಕೆಲಸ ಮಾಡಬಾರದು ಎಂದು ಪುರಸಭೆಯಲ್ಲಿ ಮುಖ್ಯಾಧಿಕಾರಿಗಳಿಗೆ ದಭಾಯಿಸಿ, ಅಲ್ಲಿಯೇ ಗುತ್ತಿಗೆದಾರನನ್ನು ಕರೆಸಿ ತಾಕೀತು ಮಾಡಿ ಕೆಲಸ ನಿಲ್ಲಿಸಿದ್ದಾರೆ.
ನನ್ನ ಗಮನಕ್ಕೆ ಬಂದಿಲ್ಲ ಎಂಬ ಸಿಲ್ಲಿಕಾರಣಕ್ಕಾಗಿ ತನ್ನ ವಾಡರ್ಿನಲ್ಲಿಯೇ ನಡೆದ ಅಭಿವೃದ್ದಿಯ ಕಾರ್ಯಕ್ಕೆ ಅಡ್ಡಿಯಾದ ಪುರಸಭೆ ಸದಸ್ಯನ ಕಾರ್ಯವೈಖರಿ ಕಂಡು ಇಂಥ ಸದಸ್ಯರಿಂದ ವಾರ್ಡ ಅಭಿವೃದ್ದಿ ಹೇಗೆ ಸಾಧ್ಯ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ನಾಲ್ಕು ಲಕ್ಷ ವೆಚ್ಚದ ಡಾಂಬರಿಕರಣದ ಕಾಮಗಾರಿ ಮಂಜೂರಿಯಾಗಿ ಗುತ್ತಿಗೆದಾರ ಕೆಲಸ ಪ್ರಾರಂಬಿಸಿದರು ಸಹ ವಾರ್ಡ ಸದಸ್ಯನ ಗಮನಕ್ಕೆ ಬಂದಿಲ್ಲ ಎಂದರೆ ವಾರ್ಡ ಸದಸ್ಯನಿಗೆ ತನ್ನ ವಾಡರ್ಿನ ಮೇಲೆ ಎಷ್ಟೊಂದು ಕಾಳಜಿ ಇದೆ ಎಂಬುದಕ್ಕೆ ನಿದರ್ಶನವಾಗಿದೆ.
ರಸ್ತೆಯ ಡಾಂಬರೀಕರಣಕ್ಕಾಗಿ ಜೆಸಿಬಿಯಿಂದ ರಸ್ತೆಯನ್ನು ಅಗೆದು ಹಾಗೆ ಬಿಟ್ಟಿರುವುದರಿಂದ ಅಲ್ಲಿನ ಸಾರ್ವಜನಿಕರಿಗೆ ಸಂಚರಿಸಲು,ವಾಹನ ಚಾಲನೆಗೆ ತೊಂದರೆಯಾಗಿದ್ದು. ಈ ಕುರಿತು ಮುಖ್ಯಾಧಿಕಾರಿಗಳನ್ನು ಕೆಳಲಾಗಿ ಶಾಸಕರು ಈ ರಸ್ತೆಗೆ ಭೂಮಿ ಪೂಜೆ ಮಾಡಿಲ್ಲ. ಅವರು ಪೂಜೆ ಮಾಡಿದ ನಂತರ ಈ ಕಾಮಗಾರಿಯನ್ನು ಪ್ರಾರಂಭಿಸುತೇವೆ ಎಂದರು.