ಗ್ರಾಮ ಸಹಾಯಕ ಪದಾಧಿಕಾರಿಗಳ ಸಭೆ

ಲೋಕದರ್ಶನ ವರದಿ

ಬೈಲಹೊಂಗಲ 04: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು 'ಡಿ' ದರ್ಜೆ  ನೌಕರರನ್ನಾಗಿ ಪರಿಗಣಿಸಲು ಸರಕಾರವನ್ನು ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಮ ಸಹಾಯಕರ ಸಂಘದ ವತಿಯಿಂದ ಉಗ್ರವಾದ ಹೋರಾಟವನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಮಹಾದೇವಪ್ಪ ಇಂಗಳಗಿ ಹೇಳಿದರು. 

       ಅವರು ಸಮೀಪದ ಸೊಗಲಕ್ಷೇತ್ರದಲ್ಲಿ ಭಾನುವಾರ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆದ ಸವದತ್ತಿ ತಾಲೂಕಿನ ಗ್ರಾಮ ಸಹಾಯಕರ ಪದಾಧಿಕಾರಿಗಳ ಆಯ್ಕೆ ಮಾಡಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಗ್ರಾಮ ಸಹಾಯಕ ಹುದ್ದೆಯನ್ನು 'ಡಿ' ದರ್ಜೆ ಮಾಡುವರೆಗೆ ಹೋರಾಟ ಮಾಡುವುದೇ ನಮ್ಮ ಗುರಿ ಎಂದರು.

   ರಾಜ್ಯ ಸಂಘದ ಉಪಾಧ್ಯಕ್ಷ ಮಡಿವಾಳಪ್ಪ ವಣ್ಣೂರ ಮಾತನಾಡಿ, ಈ ಹೋರಾಟಕ್ಕೆ ರಾಜ್ಯ ಪೂರ್ವಭಾವಿ ಸಭೆಯಲ್ಲಿ ಕೈಕೊಂಡ ನಿರ್ಣಯದಂತೆ ರಾಜ್ಯದ ಸುಮಾರು 10450 ಗ್ರಾಮ ಸಹಾಯಕರು ಭಾಗವಹಿಸಲಿದ್ದಾರೆ ಎಂದರು. ಸವದತ್ತಿ ತಾಲೂಕಿನ ಗ್ರಾಮ ಸಹಾಯಕರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಡಿವಾಳಪ್ಪ ವಣ್ಣೂರ ಸ್ವಾಗತಿಸಿ, ನಿರೂಪಿಸಿದರು. ಹಜರತಶೇಖ ಸನದಿ ವಂದಿಸಿದರು.