ಬ್ಯಾಡಗಿಯಲ್ಲಿ ಎಸಿಬಿಯಿಂದ ಜನಸಂಪರ್ಕ ಸಭೆ


ಹಾವೇರಿ08:   ಹಾವೇರಿ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹ ದಳದಿಂದ ಬ್ಯಾಡಗಿ ತಾಲೂಕಾ ಕಛೇರಿಯ ಸಭಾಂಗಣದಲ್ಲಿ ಮಂಗಳವಾರ ಜನಸಂಪರ್ಕ ಸಭೆ ಮತ್ತು ಸಾರ್ವಜನಿಕ ಅಹವಾಲು ಕಾರ್ಯಕ್ರಮ ಜರುಗಿತು.

ಈ ಜನಸಂಪರ್ಕ ಸಭೆಯಲ್ಲಿ ಇಲಾಖೆಯ ಮೇಲಧಿಕಾರಿಗಳು ಹಾಗೂ ಡಿಎಸ್ಪಿ ಎಸಿಬಿ ರವರು ಇಲಾಖೆಯ ಮಹತ್ವದ ಕಾರ್ಯಚಟುವಟಿಕೆಯನ್ನು ವಿವರಿಸಿದರು. 

     ಸಂಸತ್ತಿನಲ್ಲಿ ಅನುಮೋದನೆಗೊಂಡ ಲಂಚ ತೆಗೆದುಕೊಳ್ಳುವುದು ಶಿಕ್ಷಾರ್ಹ ಅಪರಾದ ಇದರ ಬಗ್ಗೆ ಅರಿವನ್ನು ಮೂಡಿಸಿದರು. ಸುಮಾರು 10 ಕ್ಕಿಂತ ಹೆಚ್ಚು ಜನ ರೈತರು ಮೌಖಿಕವಾಗಿ, ಬರವಣಿಗೆಯಲ್ಲಿ ದೂರುಗಳನ್ನು ಸಲ್ಲಿಸಿದರು. ಕೆಲವೊಂದು ಅಹವಾಲುಗಳನ್ನು ಸಭೆಯಲ್ಲಿ ಹಾಜರಿದ್ದ ತಹಶಿಲ್ದಾರ, ಮತ್ತು ಸವರ್ೇ ಇಲಾಖೆಯವರು ರೈತರ ಅಹವಾಲುಗಳಿಗೆ ಉತ್ತರ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

  ಈ ರೀತಿ ಕಾರ್ಯಕ್ರಮವನ್ನು ಎಲ್ಲಾ ತಾಲೂಕುಗಳಲ್ಲಿ ಹಮ್ಮಿಕೊಂಡು ಸಾರ್ವಜನಿಕ ಅಹವಾಲುಗಳನ್ನು ಸ್ವೀಕಾರ ಮಾಡಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಸುವುದಾಗಿ ಡಿಎಸ್ಪಿ ಅವರು ತಿಳಿಸಿದ್ದಾರೆ.