ಶಿಗ್ಗಾವಿ 02: ಇಂದಿನ ಮಕ್ಕಳ ಶೈಕ್ಷಣಿಕ ಶ್ರೆಯೋಭಿವೃದ್ಧಿಗೆ ಸಹಕಾರಿಯಾಗುವ ಲೇಖನ ಸಾಮಗ್ರಿಗಳನ್ನ ಮತ್ತು ಹಣ್ಣು ಹಂಪಲು ವಿತರಿಸಿದ್ದು ಅರ್ಥಪೂರ್ಣ ದತ್ತಿ ಕಾರ್ಯಕ್ರಮವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಪ್ಪ ಬೆಂತೂರ ಹೇಳಿದರು. ತಾಲೂಕಿನ ಕಡಹಳ್ಳಿ ಗ್ರಾಮದ ಶ್ರೀ ಸೇವಾ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ನಡೆದ ವಸಂತ ಕಲ್ಲಪ್ಪ ಹಿತ್ತಲಕೇರಿ ದತ್ತಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಮಕ್ಕಳು ತಮ್ಮಲ್ಲಿಯ ಕೀಳರಿಮೆಯನ್ನು ತೊರೆದು ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಬೇಕು ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು.
ಎಲ್ಲಾ ಮಕ್ಕಳ ಬಾಳು ಬಂಗಾರವಾಗಲಿ ಕಂಡ ಕನಸುಗಳು ನೆರವೇರಲಿ ಎಂದು ಶುಭ ಹಾರೈಸಿದರು.ದಿವಂಗತ ವಸಂತ ಕಲ್ಲಪ್ಪ ಹಿತ್ತಲಕೇರಿ ಇವರ ದತ್ತಿ ಕಾರ್ಯಕ್ರಮದ ನಿಮಿತ್ಯ ಅವರ ಮಗನಾದ ಶಶಿಕಾಂತ ವಸಂತ ಹಿತ್ತಲಕೇರಿ ಅವರು ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಮತ್ತು ಹಣ್ಣು ಹಂಪಲು ವಿತರಿಸಿ ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ನನ್ನ ಸಹಕಾರ ಯಾವಾಗಲೂ ಇರುತ್ತದೆ ಎಂದು ತಿಳಿಸಿದರು.ಮಾಜಿ ನೌಕರರ ಸಂಘದ ಅಧ್ಯಕ್ಷ ಸಿ ಡಿ ಯತ್ನಳ್ಳಿ ಮಾತನಾಡಿ ದಿವಂಗತ ವಸಂತ ಕಲ್ಲಪ್ಪ ಹಿತ್ತಲಕೇರಿ ಅವರ ಜೀವನ, ವಿದ್ಯಾಭ್ಯಾಸ, ವೃತ್ತಿ ಜೀವನ, ಸಾಧನೆಗಳು, ಅವರ ಸಮಾಜಮುಖಿ ಕೆಲಸಗಳು ಇತರರಿಗೆ ಮಾದರಿಯಾಗಲಿ ಎಂದರು. ಗೌರವ ಕಾರ್ಯದರ್ಶಿ ರಮೇಶ ಹರಿಜನ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಸಾಹಿತ್ಯ ಪರಿಷತ್ ತಲುಪುವಂತಾಗಲು ಇಂತಹ ದತ್ತಿ ಕಾರ್ಯಕ್ರಮ ಮತ್ತೊಬ್ಬರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ದತ್ತಿ ಕಾರ್ಯಕ್ರಮದಲ್ಲಿ ದುಂಡಸಿ ಕಸಾಪ ಹೋಬಳಿ ಘಟಕ ಅಧ್ಯಕ್ಷ ಐ ಎಲ್ ಬೋಸ್ಲೆ, ಶಂಕರ ಬಡಿಗೇರ, ಮಹಾಂತೇಶ ನಾಯ್ಕೊಡಿ, ರವಿ ಕಡಕೋಳ, ಅನಾಥಾಶ್ರಮದ ವ್ಯವಸ್ಥಾಪಕ ಕುಮಾರ ಲಮಾಣಿ, ರಾಜು ಲಮಾಣಿ, ಮಲ್ಲಿಕಾರ್ಜುನ ಹಿರೇಮನಿ, ಪರಶುರಾಮ, ನೀಲಪ್ಪ, ಮಾಲಾ, ಅಕ್ಷತಾ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.