ವಿವಾಹಿತ ಮಹಿಳೆ ನೇಣಿಗೆ ಶರಣು

A married woman commits suicide

ಕಾಗವಾಡ 10: ಅತ್ತೆ, ಗಂಡನ ಮಾನಸಿಕ ಹಿಂಸೆಯಿಂದ ಧನಶ್ರೀ ಚೇತನ ಮಹಲದಾರ (23) ವಿವಾಹಿತ  ಮಹಿಳೆ ನೇಣಿಗೆ ಶರಣಾಗಿರುವ ಘಟನೆ ತಾಲ್ಲೂಕಿನ ವ್ಯಾಪ್ತಿಯ ಮಂಗಸೂಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ.  

ಧನಶ್ರೀ ತವರು ಮನೆ ನೆರೆಯ ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಕೌಟೆಸಾರ ಗ್ರಾಮವಾಗಿದ್ದು ಕಳೆದ ಮೂರು ವರ್ಷಗಳ ಹಿಂದೆ ಚೇತನ ಮಹಲದಾರ ಇತನಿಗೆ ಮದುವೆ ಮಾಡಿ ಕೊಡಲಾಗಿದ್ದು ಒಂದು ವರೆ ವರ್ಷ ವಯಸ್ಸಿನ ಮಗನಿದ್ದಾನೆ. ಪತಿ ಚೇತನ ಹಾಗೂ ಅತ್ತೆ ಪದೆ ಪದೇ ಮಾನಸಿಕ ಹಿಂಸೆ ನೀಡುತ್ತಿದ್ದರು. ನನ್ನ ಮಗಳು ಎಂಎಸ್ಸಿ ಪದವೀಧರೆಯಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಅಂತಹವಳು ಅಲ್ಲಾ ನಮಗೆ ನ್ಯಾಯ ಬೇಕು ಎಂದು ಧನಶ್ರೀ ತಾಯಿ ಶೋಭಾ ಸಿದ್ದಗೌಡ ಪಾಟೀಲ, ತಂದೆ ಸಿದಗೌಡ ಪಾಟೀಲ ಹಾಗೂ ತಮ್ಮ ಧೀರಜ ಪಾಟೀಲ, ಆರೋಪಿಸಿದ್ದಾರೆ. 

ಈ ಕುರಿತು ಕಾಗವಾಡ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಜಿ ಜಿ ಬಿರಾದರ ತನಿಖೆ ಕೈಗೊಂಡಿದ್ದಾರೆ.