ಕೊಪ್ಪಳ 17: ಕೊಪ್ಪಳ ನಗರಕ್ಕೆ ಹೊಂದಿಕೊಂಡು ಸ್ಥಾಪನೆಯಾಗುತ್ತಿರುವ ಬಿಎಸ್‌ಪಿಎಲ್ ಕಂಪನಿಯ ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆ ವಿರೋಧಿಸಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಪತ್ರದ ಮೂಲಕ ಕೊಪ್ಪಳ ತಾಲೂಕಿಗೆ ಬಿಎಸ್‌ಪಿಎಲ್ ಬೃಹತ್ ಉಕ್ಕು ಕಾರ್ಖಾನೆ ಬೇಡ ಸರಕಾರದಿಂದ ಕೊಟ್ಟ ಅನುಮತಿಯನ್ನು ಈ ಕೂಡಲೇ ರದ್ದು ಮಾಡಬೇಕೆಂದು ಹಾಗೂ “ಕಾರ್ಖಾನೆ ಓಡಿಸಿ ಕೊಪ್ಪಳ ಉಳಿಸಿ” ಎಂಬ ಶಿರ್ಷಿಕೆಯಡಿ ಪತ್ರ ಚಳುವಳಿಯನ್ನು ಹಮ್ಮಿಕೊಂಡಿದ್ದು ನಗರದ ಪ್ರಧಾನ ಅಂಚೆ ಕಛೇರಿ ಮುಂದೆ 100 ಕ್ಕೂ ಹೆಚ್ಚು ಕಾರ್ಯಕರ್ತರು ಪತ್ರ ಬರೆದು ಮಾನ್ಯ ಮುಖ್ಯ ಮಂತ್ರಿಗಳಿಗೆ ಕಳುಹಿಸಿ ಕೊಡುವುದರ ಮೂಲಕ ಪತ್ರ ಚಳುವಳಿ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ವಿಜಯಕುಮಾರ ಕವಲೂರು, ಗೌರವ ಅಧ್ಯಕ್ಷರಾದ ಜಿಎಸ್ ಗೋನಾಳ, ವಿನೋದ ಕುಮಾರ್ ಜಿ, ಶಿವಕುಮಾರ ಏಣಗಿ, ಚಂದ್ರು ಅಣ್ಣಿಗೇರಿ, ಗವಿಸಿದ್ದಪ್ಪ ಮಂಗಳಾಪುರ, ಮಹ್ಮದ್ ಗರ್ಸಗಲ್, ವಿನೋದ ಕುಮಾರ, ಸೋಹೇಲ್, ದೇವೆಂದ್ರ್ಪ ತೋಂಡಿಹಾಳ, ಶಾಮ್ ಬೇಣಗಿ, ಹನುಮಗೌಡ ಆಟೋ, ಶಕೀಲ್ ಅಹ್ಮದ್ ಬ್ಯಾಗವಾಟ್, ಮಂಜುನಾಥ ಪಾಟೀಲ್, ಮಂಜುನಾಥ ಶಹಾಪುರ, ರಾಮಣ್ಣ ಗಾಣಿಗೇರ ಇನ್ನು ಮುಂತಾದವರು ಉಪಸ್ಥಿತರಿದ್ದರು.