ಲೋಕದರ್ಶನವರದಿ
ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪಪೂ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ರಮೇಶ ಪಟ್ಟಣಶೆಟ್ಟಿ ಅವರು ತಮ್ಮ ಬಡ ಪ್ರತಿಭಾವಂತ ವಿದ್ಯಾಥರ್ಿ ರಿಯಾಜ್ ಅಹಮ್ಮದ ಪಾರಸ್ ಗೆ ಬಿಎಸ್ಸಿ ಕಲಿಯಲು ಮೊದಲ ವರ್ಷದ ಶುಲ್ಕ ಭತರ್ಿ ಮಾಡುವ ಮೂಲಕ 15 ಸಾವಿರ ರೂ. ನೆರವು ನೀಡಿ ಔದಾರ್ಯ ತೋರಿದ್ದಾರೆ.
ರಿಯಾಜ್ ಪಾರಸ್ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುವಾಗಲೇ ತಂದೆ-ತಾಯಿಯನ್ನು ಕಳೆದುಕೊಂಡ ದುಃಖದಲ್ಲೂ ಓದಿ 2017-18ನೇ ಸಾಲಿನ ಪರೀಕ್ಷೆಯಲ್ಲಿ ಶೇ.94 ಅಂಕ ಪಡೆದು ಕಾಲೇಜಿಗೆ ಪ್ರಥಮ ರ್ಯಾಂಕ್ ಪಡೆದಿದ್ದ. ಧಾರವಾಡದಲ್ಲಿ ಇದ್ದುಕೊಂಡು ಕೆಲಸ ಮಾಡುತ್ತ ಕೆಒಸಿ ಮೂಲಕ ಬಾಹ್ಯ ವಿದ್ಯಾಥರ್ಿಯಾಗಿ ಪದವಿ ಓದಬೇಕೆಂದು ಸುತ್ತಾಡಿ ಕೊನೆಗೆ ಎಲ್ಲಾ ಬಿಟ್ಟು ವಾಪಸ್ಸಾಗಿದ್ದರಿಂದ ಒಂದು ವರ್ಷ ವ್ಯರ್ಥವಾಗಿತ್ತು.
ಇದನ್ನು ಮನಗಂಡ ಆತನ ಗುರು ರಮೇಶ ಪಟ್ಟಣಶೆಟ್ಟಿ ಅವರು ವಿದ್ಯಾಥರ್ಿಗೆ ತಿಳಿ ಹೇಳಿ ಕೆಎಲ್ಇ ಪದವಿ ಮಹಾವಿದ್ಯಾಲಯದಲ್ಲಿ 15 ಸಾವಿರ ರೂ ಶುಲ್ಕ ಪಾವತಿಸಿ ಬಿಎಸ್ಸಿಗೆ ಪ್ರವೇಶ ಕೊಡಿಸಿದ್ದಾರೆ.
ಪ್ರಾಚಾರ್ಯ ಡಾ. ಬಿ.ಎಂ ಪಾಟೀಲ ಅವರು ಕೂಡ ವಿದ್ಯಾಥರ್ಿಯ ಮುಂದಿನ ವರ್ಷದ ಶುಲ್ಕ ವಿನಾಯಿತಿ ನೀಡುವ ಭರವಸೆ ನೀಡಿದ್ದಾರೆ.
ರಮೇಶ ಪಟ್ಟಣಶೆಟ್ಟಿ ಅವರು ಹಿಂದೊಮ್ಮೆ ರನ್ನಬೆಳಗಲಿಯ ವಿದ್ಯಾಥರ್ಿಯ ತಾಂತ್ರಿಕ ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡಿ ಆತನಿಗೆ ಲೈಫ್ ನೀಡಿದ್ದರು. ಕಲಿಸುವುದರೊಂದಿಗೆ ಕೈಲಾದ ಸೇವೆ ಮಾಡುವ ಇವರ ಗುಣ ಇತರರಿಗೆ ಮಾದರಿಯಾಗಲಿ.