ಬೆಳಗಾವಿ,05:ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪೋಲಿಸ್ ಅಧಿಕಾರಿ ವಿರುದ್ದ ನ್ಯಾಯವಾದಿಗಳು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.
ತಮ್ಮ ಕಕ್ಷಿದಾರ ದಾಖಲಿಸಲು ಬಂದ ದೂರನ್ನು ಪಡೆಯಲು ಹಿಂದೇಟು ಹಾಕಿದ ಪೋಲಿಸರಿಗೆ ಪ್ರಶ್ನೆ ಮಾಡಿದ ನ್ಯಾಯವಾದಿಗೆ ಅಥಣಿಯ ಪಿ ಎಸ್ ಐ ಉಸ್ಮಾನ. ಎಸ್. ಅವಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆಂದು ಆರೋಪಿಸಿ ನ್ಯಾಯವಾದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ನ್ಯಾಯವಾದಿ ಬಿ ಆರ್ ರಾವ್ ಮೇಲೆ ಹಲ್ಲೆಗೆ ಯತ್ನಿಸಿದ ಅಥಣಿ ಪಿ ಎಸ್ ಐ ಉಸ್ಮಾನ್ ಅವಟಿ ವಿರುದ್ದ ನೂರಾರು ನ್ಯಾಯವಾದಿಗಳು ಕೋಟರ್್ ಕಲಾಪದಿಂದ ಬಹಿಷ್ಕರಿಸಿ ಪ್ರತಿಭಟನೆಗೆ ನಡೆಸಿದ್ದಾರೆ.
ಇನ್ನು ಪಿ ಎಸ್ ಐ ಆಗಿರುವ ಯು. ಎಸ್. ಅವಟಿ ವಿರುದ್ದ ದೂರು ದಾಖಲಿಸಲು ಹೋದಾಗ ಹಿರಿಯ ಪೋಲಿಸ್ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿರುವದಾಗಿ ನ್ಯಾಯವಾದಿಗಳು ಆರೋಪಿಸಿದ್ದು; ಜಿಲ್ಲಾ ಪಂಚಾಯತಿ ಅದ್ಯಕ್ಷೆ ಆಶಾ ಐಹೋಳೆ ಮತ್ತು ಅವರ ಪತಿ ವಂಚನೆ ಕುರಿತು ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಪಿ ಎಸ್ ಐ ವಕೀಲರನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ನ್ಯಾಯವಾದಿ ಬಿ ಆರ್ ರಾವ ಆರೋಪಿಸಿದ್ದಾರೆ. ಮತ್ತು ಅರ್ಧಗಂಟೆಗೂ ಹೆಚ್ಚುಕಾಲ ವಿಜಯಪುರ-ಸಂಕೇಶ್ವರ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಇದರಿಂದ ಕೆಲಹೊತ್ತುಗಳ ಕಾಲ ಉದ್ವಿಗ್ನ ವಾತಾವರಣ ನಿಮರ್ಾಣವಾಗಿದ್ದು ಪರಿಸ್ಥಿತಿ ನಿಯಂತ್ರಿಸಲು ಪೋಲಿಸರು ಹರಸಾಹಸ ಪಡಬೇಕಾಯಿತು.