ಸಂಗೀತ ನೃತ್ಯ ಸಾಹಿತ್ಯ ಜಾನಪದ ಚಿತ್ರಕಲೆ ಎಲ್ಲವನ್ನು ಅಡಗಿಸಿಕೊಂಡ ನಾಡು: ರಮೇಶ ಪಚಪಾಂಡೆ
A land that has hidden everything: music, dance, literature, folklore, painting: Ramesh Pachapande
ಧಾರವಾಡ 17: ಧಾರವಾಡಕ್ಕೆ ಬರುವುದು ಅಂದರೆ ಒಂದು ಸಂತಸದ ಸಂಗತಿ ಮತ್ತು ಅಭಿಮಾನದ ವಿಷಯ. ಸಂಗೀತ ನೃತ್ಯ ಸಾಹಿತ್ಯ ಜಾನಪದ ಚಿತ್ರಕಲೆ ಎಲ್ಲವನ್ನು ಅಡಗಿಸಿಕೊಂಡ ನಾಡು ಧಾರವಾಡ ಎಂದು ಮುಂಬಯಿಯ ಚಿತ್ರಕಲಾವಿದ ರಮೇಶ ಪಚಪಾಂಡೆ ಹೆಮ್ಮೆಯಿಂದ ಹೇಳಿದರು ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಚಿತ್ರಕಲಾ ಪ್ರದರ್ಶನ ಸಭಾಭವನದಲ್ಲಿ ನಡೆದ ಕಲಾವಿದ ಶ್ರೀ ಸುಧೀರ ಪಡ್ನಿಸ್ ಅವರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು ಮತ್ತು ಅತ್ಯಂತ ಅದ್ಭುತವಾದಂತಹ ಚಿತ್ರಗಳನ್ನ ಬಿಡಿಸುವುದರ ಮೂಲಕ ಪ್ರಾತ್ಯಕ್ಷಿಕೆಯನ್ನು ಯುವಕರಿಗೆ ತೋರಿಸಿದರು.
ಹಿರಿಯ ಸಾಹಿತಿ, ರಂಗ ಕಲಾವಿದ ಡಾ. ಶಶಿಧರ ನರೇಂದ್ರ ಮಾತನಾಡುತ್ತಾ, ಚಿತ್ರಕಲೆಗೆ ಕಾಲ, ದೇಶ, ಭಾಷೆ ಇಲ್ಲ. ಇಂದು ಬರೆದ ಚಿತ್ರ ಮುಂಬರುವ ದಿನಗಳಲ್ಲಿ ಬದಲಾದ ದೃಷ್ಟಿಯಲ್ಲಿ ಕಾಣುತ್ತಾ ಹೋಗುವುದು ಅದರ ವೈಶಿಷ್ಟ್ಯ. ವೈವಿಧ್ಯಮಯವಾದ ಕಲೆಗಳನ್ನು ಕಲಾವಿದರನ್ನು ಬೆಳೆಸಿ ಉಳಿಸಿದ ನಾಡು ಧಾರವಾಡ. ಇಂದು ಯುವಜನ ಈ ಚಿತ್ರಕಲೆಗೆ ಮುಖಾಮುಖಿಯಾಗಬೇಕಿದೆ.
ಇಂದು ವಿಶಿಷ್ಟವಾದ ಕಲಾಕೃತಿಗಳನ್ನು ಅವರಿಗೆ ಪರಿಚಯಿಸುತ್ತಿರುವುದು ಅಭಿನಂದನೀಯ. ದೇಶದ ಹೆಸರಾಂತ ಚಿತ್ರಕಲಾವಿದರು ಧಾರವಾಡಕ್ಕೆ ಬಂದು ಚಿತ್ರಕಲಾ ಪ್ರದರ್ಶನವನ್ನ ಮಾಡಿಸುವಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಯುವಕರಿಗೆ ಸಂಸ್ಕೃತಿಯನ್ನು ಹುಟ್ಟುಹಾಕುವ ಮೂಲಕ ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಿರುವುದು ಅಭಿನಂದನೀಯ. ಚಿತ್ರಕಲೆ ಸೃಜನಶೀಲವಾದದ್ದು. ಭಾವನೆಗಳಿಂದ ಅಭಿವ್ಯಕ್ತಿಗೊಂಡದ್ದನ್ನು ನಾವು ಆಸ್ವಾದಿಸುತ್ತೇವೆ. ಕಲೆಯ ಮೂಲಕ ನಾವು ಬೆಳೆಯಬೇಕು. ಇಂದು ಅನೇಕ ಸವಾಲುಗಳು ಚಿತ್ರಕಲೆಯ ಮುಂದೆ ಇದ್ದು ಮುಂಬರುವ ದಿನಗಳಲ್ಲಿ ಯುವಕರು ಅವುಗಳನ್ನು ಸ್ಪರ್ಧಾ ಮನೋಭಾವದಿಂದ ಸ್ವೀಕರಿಸಿ, ಕಲೆಯನ್ನು ಬೆಳೆಸಬೇಕಿದೆ ಎಂದರು.
ಚಿತ್ರ ಕಲಾವಿದರಾದ ಸುಧೀರ ಪಡ್ನಿಸ್ ಅವರು ಇದೊಂದು ಅವಕಾಶವನ್ನ ತಮಗೆ ನೀಡಿದ್ದು ಸಂತಸದ ಸಂಗತಿ ಹಾಗೂ ಅವರು ಪ್ರದರ್ಶಿಸಿದ ಪ್ರದರ್ಶನದೊಳಗಿನ ಚಿತ್ರಗಳೆಲ್ಲ ಆಧ್ಯಾತ್ಮಿಕ ರೂಪದ ಚಿತ್ರಗಳು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಿ. ವ್ಹಿ. ಹಾಲಭಾವಿ ಟ್ರಸ್ಟ್‌ನ ಅಧ್ಯಕ್ಷರಾದ ಬಿ. ಮಾರುತಿ ಅವರು ಮಾತನಾಡಿ, ಪ್ರತಿ ತಿಂಗಳು ಬೇರೆ ಬೇರೆ ಭಾಗದಿಂದ ಕಲಾವಿದರನ್ನು ಕರೆಸಿ, ಈ ರೀತಿಯ ಕಲಾಪ್ರದರ್ಶನಗಳನ್ನು ನೆರವೇರಿಸುವ ಮೂಲಕ ಇಂದಿನ ಯುವಕರನ್ನ ಚಿತ್ರಕಲೆಯತ್ತ ಆಸಕ್ತಿ ಮೂಡಿಸುವಲ್ಲಿ ಅವರನ್ನು ಪ್ರೋತ್ಸಾಹಿಸುವಲ್ಲಿ ನಮ್ಮ ಕಾರ್ಯ ಮಾಡುತ್ತಿದ್ದೇವೆ. ಎಲ್ಲ ಕಲೆಗಳಿಗೂ ಆಕರಗಳು ಸಂಬಂಧಪಟ್ಟ ಸಂಗಾತಿಗಳು ಬೇಕಾಗುತ್ತದೆ. ಆದರೆ ಚಿತ್ರಕಲೆ ಏಕವ್ಯಕ್ತಿ. ಮೌನವಾಗಿ ತನ್ನ ಅಭಿವ್ಯಕ್ತಿಯನ್ನು ಏಕಾಂಗಿಯಾಗಿ ಕುಳಿತು ಚಿತ್ರಿಸುವ ಸಂದರ್ಭವಿರುತ್ತದೆ. ಕಲಾವಿದರಿಗೆ ಪ್ರಾಮಾಣಿಕ ಪ್ರಯತ್ನ ಹಾಗೂ ಶ್ರದ್ಧೆ ಬಹಳ ಮುಖ್ಯ ಎಂದರು.
ಆರಂಭದಲ್ಲಿ ಡಿ. ಹೆಚ್. ಕುರಿಯವರ ಸ್ವಾಗತಿಸಿದರು. ಡಾ ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಫ್. ವಿ. ಚಿಕ್ಕಮಠ ವಂದಿಸಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಿ. ಎಂ. ಬಡಿಗೇರ, ಎಸ್. ಕೆ. ಪತ್ತಾರ, ಸುದರ್ಶನ್ ಪಡ್ನಿಸ್, ಸಮೀರ ಜೋಶಿ, ದ್ವಾರಪಾಲಕ, ಲೋಹಾರ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 