ಮಾನವೀಯತೆ ಮೆರೆದ ಪತ್ರಕರ್ತ ಹಾಗೂ ಸಮಾಜಸೇವಕ. ಅನಾರೋಗ್ಯದಿಂದ ನೆರಳುತ್ತಿದ್ದ ಅನಾಥ ವೃದ್ದೆ ಮಹಿಳೆಯನ್ನು ತುರ್ತು ಚಿಕಿತ್ಸೆಗಾಗಿ ಬೀಮ್ಸ್ ಆಸ್ಪತ್ರೆಗೆ
A humanitarian journalist and social worker. An orphaned old woman who was suffering from illness wa
ಬಳ್ಳಾರಿ 14: ಬೀಮ್ಸ್ ಆಸ್ಪತ್ರೆ ಮುಂದೆ ಬಸ್ ನಿಲ್ದಾಣದಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಆನಾಥ ವೃದ್ಧೆ ಮಹಿಳೆಯನ್ನು ಗಮನಿಸಿದ ಸ್ಥಳೀಯ ಪತ್ರಕರ್ತ ಹಾಗೂ ಸಮಾಜಸೇವಕ ಎಂ .ಜಂಬುನಾಥ ಮಾನವೀಯತೆ ಮೆರೆದ ಘಟನೆ ಇಂದು ನಡೆದಿದೆ. ಗಮನಿಸಿದ ಪತ್ರಕರ್ತ 112 ವಾಹನಕ್ಕೆ ಕರೆ ಮಾಡಿ ಘಟನೆ ಸ್ಥಳಕ್ಕೆ ಕರೆಸಿ , ಆನಂತರ ಸರ್ಕಾರಿ 108 ವಾಹನಕ್ಕೆ ಕರೆ ಮಾಡಿ ಅವರನ್ನು ಸಹಕರಿಸಿದ್ದಾರೆ.
ತದನಂತರ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆ ಹಾಗೂ ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರಿಗೆ ಅನಾರೋಗ್ಯದಿಂದ ನೆರಳುತ್ತಿದ್ದ ಮಹಿಳೆಯ ಸಮಸ್ಯ ಬಗ್ಗೆ ತಿಳಿಸಿ ಅವರು ಸಹ ಘಟನಾ ಸ್ಥಳಕ್ಕೆ ಬಂದರು. ತುರ್ತು ಚಿಕಿತ್ಸೆಗಾಗಿ ಬೀಮ್ಸ್ ಆಸ್ಪತ್ರೆಯ ಎಮರ್ಜೆನ್ಸ್ ವಾರ್ಡಿನಲ್ಲಿ ಸಂಬಂಧಪಟ್ಟ ವೈದ್ಯರಿಗೆ ಮಹಾನಗರ ಪಾಲಿಕೆ ಸದಸ್ಯರು ಅನಾಥ ವೃದ್ಧೆ ಮಹಿಳೆ ಎಂದು ತಿಳಿಸಿ ಸೇರಿಸಿದ್ದಾರೆ. ಕಳೆದ ಒಂದು ವಾರದಿಂದ ಈ ಅನಾಥ ವೃದ್ಧೆ ಮಹಿಳೆ ಆಸ್ಪತ್ರೆ ಮುಂಭಾಗದ ಬಸ್ಸು ನಿಲ್ದಾಣದಲ್ಲಿ ಅನಾರೋಗ್ಯದಿಂದ ನೆರಳುತ್ತಿದ್ದು. ಯಾವುದು ಗುರುತು ಇಲ್ಲದ ವಾಹನ ಎರಡು ಕಾಲು ಹಾಗೂ ಸೊಂಟಕ್ಕೆ ತಗುಲಿಸಿ ಹೋಗಿದೆ ಎಂದು ತಿಳಿದುಬಂದಿದೆ.
ಆ ಮಹಿಳೆಯನ್ನು ಪೊಲೀಸ್ ಸಿಬ್ಬಂದಿ ವಿಚಾರಿಸಿದಾಗ ಅವರದ್ದು ಕೊಳಗಲ್ಲು ಗ್ರಾಮ ಎಂದು ತಿಳಿದು ಬಂದಿದೆ. ಅವರಿಗೆ ಯಾರು ಇಲ್ಲ ಉಪ್ಪಾರ ಸಮಾಜ ಎಂದು ಆ ಮಹಿಳೆ ಹೆಸರು ಲಕ್ಷ್ಮೀದೇವಿ ಎಂದು ತಿಳಿದು ಬಂದಿದೆ. ಆ ವೃದ್ಧೆ ಮಹಿಳೆ ಮೇಲೆ ಬಟ್ಟೆ ಇಲ್ಲದೆ ಈ ಬಿಸಿಲಿಗೆ ನೆರಳುತ್ತಿದ್ದು. ಯಾರು ಸಹ ಮಾನವೀಯತೆ ಗೆ ಮುಂದೆ ಬಂದಿಲ್ಲ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ನೆರಳುತ್ತಿದ್ದ ಮಹಿಳೆಯ ಮುಂದೇನೆ ಆಸ್ಪತ್ರೆಗೆ ಮತ್ತು ಬಸ್ಸ್ ಗಾಗಿ ಆ ನಿಲ್ದಾಣದಲ್ಲಿ ಕಾಯ್ತಾ ನೋಡುತ್ತಾ ಮುಂದೆ ಹೋಗುವ ಘಟನೆಗಳು ಕಂಡುಬಂದಿದ್ದಾವೆ.
ಮತ್ತು ಮುಖ್ಯವಾಗಿ ಅನಾರೋಗ್ಯದಿಂದ ನೆರಳುತ್ತಿದ್ದ ಮಹಿಳೆಯ ಮುಂದೇನೆ ಅನೇಕ ವ್ಯಾಪಾರ ವಹಿವಾಟಿಕಗಳು ನಡೆಯುವ ಅಂಗಡಿಗಳು ಇದ್ದು ಅದಕ್ಕೆ ಸಂಬಂಧಪಟ್ಟ ಮಾಲೀಕರು ಕೆಲಸ ಮಾಡುವ ಸಿಬ್ಬಂದಿಗಳು ನೋಡುತ್ತಾ ಕಣ್ಣು ಮುಚ್ಚಿಕೊಂಡು ಹೋಗುವ ಘಟನೆಗಳು ಕಂಡುಬಂದಿದ್ದಾವೆ. ಈ ಎಲ್ಲಾದರಕಂತೆ ಇನ್ನೂ ಮುಖ್ಯವಾಗಿ ಬಸ್ಸು ನಿಲ್ದಾಣದಲ್ಲಿ ಕಂಡಕ್ಟರ್ ಡ್ರೈವರ್ ಗಳು ಸಹ ನೋಡುತ್ತಾ ಮುಂದಕ್ಕೆ ಹೋಗುವವರು ಇದ್ದಾರೆ. ಇಂದು ಮುಂಜಾನೆ ಸ್ಥಳೀಯ ಪತ್ರಕರ್ತ ಗಮನಿಸಿ ಮಾನವೀಯತೆ ಮೆರೆದಿದ್ದಾನೆ.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 