ಲೋಕದರ್ಶನವರದಿ
ಗುಳೇದಗುಡ್ಡ: ದೇಶಕಂಡ ಮಹಾನ್ ಮಾನವತಾವಾದಿಗಳಲ್ಲಿ ಪೇಜಾವರ ಶ್ರೀಗಳೂ ಒಬ್ಬರು. ಜಾತಿ, ಧರ್ಮಗಳ ಭೇದವಿಲ್ಲದೇ ಇಡೀ ಮಾನವ ಕುಲವನ್ನು ಬೆಸೆಯಲು ಹಾಗೂ ವಿಶ್ವ ಬಾಂಧವ್ಯಕ್ಕೆ ಶೃಮಿಸಿದ ಮಹಾನ್ ಮಾನವತಾವಾದಿಗಳೆಂದು ಇಲ್ಲಿನ ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಅವರು ರವಿವಾರ ಪಟ್ಟಣದ ಅಗ್ರಹಾರದ ಹಣಮಂತ ದೇವಸ್ಥಾನದ ಆವರಣದಲ್ಲಿ ಜರುಗಿದ ಪೇಜಾವರ ಶ್ರೀಗಳು ಅಸ್ತಂಗತರಾದ ನಿಮಿತ್ಯ ಇಲ್ಲಿನ ವಿಪ್ರಸಮಾಜ ಹಾಗೂ ಶ್ರೀಗಳ ಭಕ್ತಾಧಿಗಳು ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಹಿಂದು ಧರ್ಮದ ಜಾಗೃತಿಗಾಗಿ ಅಷ್ಟೇ ಹೋರಾಡದೇ, ಎಲ್ಲ ಧರ್ಮಗಳ ಸಮಾನತೆ, ಸಮಭಾವಕ್ಕಾಗಿ ಹಗಲಿರುಳು ಶ್ರಮಿಸಿದರು. ಗುಳೇದಗುಡ್ಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.
ನಮ್ಮ ಲಕ್ಷ್ಮೀ ಸಹಕಾರಿ ಬ್ಯಾಂಕಿನ ಶತಮನೋತ್ಸವ ಕಾರ್ಯಕ್ರಮದಲ್ಲಿ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಶ್ರೀಗಳೂ ಪಾಲ್ಗೊಂಡಿದ್ದರು. ಬ್ಯಾಂಕಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಬ್ಯಾಂಕಿಗೆ ಶ್ರೀಕೃಷ್ಣನ ಆಶೀವರ್ಾದವಿದೆ ಎಂದು ಆಶೀರ್ವದಿಸಿದ್ದರು.
ಅವರ ಸಾಮಾಜಿಕ ಕಳಕಳಿ, ಭಾವೈಕ್ಯತೆಯ ಮಾತೃಹೃದಯ ಅನನ್ಯವಾದುದು. ದೇಶದ ಸರ್ವಧರ್ಮಗಳ ಶಕ್ತಿಯಾಗಿ ಕಂಡು ಬಂದ ಶ್ರೀಗಳು ರಾಮಜನ್ಮ ಭೂಮಿ ವಿಷಯದಲ್ಲಿ ಮಾತನಾಡಿದ ಸಮಭಾವದ ತೂಕಬದ್ಧ ಮಾತುಗಳು ಅನುಕರಣೀಯವಾಗಿವೆ ಎಂದರು.
ವಿಪ್ರ ಸಮಾಜದ ಮುಖಂಡ ಶ್ರೀಧರ ನರೇಗಲ್ ಮಾತನಾಡಿ, ಪೇಜಾವರ ಶ್ರೀಪಾಂದಂಗಳವರು ಅಖಿಲ ಭಾರತೀಯ ಮಧ್ವ ಮಹಾಮಂಡಳದ ಸಂಸ್ಥಾಪಕರಾಗಿ ದೇಶದ ತುಂಬೆಲ್ಲ ಸಂಚರಿಸಿ ಧರ್ಮ ಪ್ರಚಾರದ ಜೊತೆಗೆ ಮಾನವೀಯ ಅಂಶಗಳನ್ನು ಎಲ್ಲರಲ್ಲಿ ಬಿತ್ತಿದರು. ಗುಳೇದಗುಡ್ಡದ ಜೊತೆಗೆ ಸುಮಾರು ಆರು ದಶಕಗಳಿಂದ ಸಂಪರ್ಕದಲ್ಲಿದ್ದರು.
ಗುಳೇದಗುಡ್ಡಕ್ಕೆ ಬಂದಾಗೊಮ್ಮೆ ಅವರ ಭಕ್ತೆ ಪರಿಮಳಾ ಪರ್ವತೀಕರ ಅವರ ಮನೆಯಲ್ಲಿ ಪೂಜೆಯ ವ್ಯವಸ್ಥೆ ನಡೆಯುತ್ತಿತ್ತು. ಬಾಲಸನ್ಯಾಸಿಯಾಗಿ ಐದು ಬಾರಿ ಪಯರ್ಾಯ ಪೀಠ ಏರಿದ ದಾಖಲೆ ಅವರದ್ದಾಗಿದೆ. ದೀನ-ದಲಿತರ ಬಗ್ಗೆ ಅಪಾರ ಕಾಳಜಿ ಹೊದಿದ್ದ ಶ್ರೀಪಾಂದಂಗಳವರು ಈ ಶತಮಾನ ಕಂಡ ಶ್ರೇಷ್ಠ ಸಂತ, ವಿಶ್ವಕೋಶ, ಕ್ರಾಂತಿಕಾರಿ ಯತಿ ಎಂದು ಬಣ್ಣಿಸಿದರು.
ಮೂರು ತಿಂಗಳ ಮಗುವಿಗೆ ಆಶೀವರ್ಾದ : ಗುಳೇದಗುಡ್ಡಕ್ಕೆ ಪೇಜಾವರ ಶ್ರೀಗಳು ಇದೇ ಅಗ್ರಹಾರದ ಹಣಮಂತ ದೇವಸ್ಥಾನದಲ್ಲಿ ಬಂದಿದ್ದ ಸಂದರ್ಭದಲ್ಲಿ ನಾನು ಕೇವಲ ಮೂರು ತಿಂಗಳ ಮಗು. ನಮ್ಮ ತಾಯಿ ನನ್ನನ್ನು ಎತ್ತಕೊಂಡು ಶ್ರೀಗಳ ಪಾದಗಳ ಹತ್ತಿರ ಒಯ್ದಾಗ ಶ್ರೀಗಳು ಆಶೀರ್ವದಿಸಿದರಂತೆ. ಅಂದಿನಿಂದ ಶ್ರೀಗಳಂತೆಯೇ ಅವರ ಗುಣಗಳನ್ನು ನಾನು ಅನುಕರಿಸಿಕೊಂಡು ಬಂದಿರುವೆ ಎಂದು 64 ವಯಸ್ಸಿನ ವಿಶ್ರಾಂತ ಶಿಕ್ಷಕಿ ಪ್ರಮೀಳಾ ಮುದ್ದಾಪೂರ ತಮ್ಮ 1955 ನೇ ಸಾಲಿನ ರೋಮಾಂಚಕ ಸಂದರ್ಭದ ಅನುಭವವನ್ನು ಹಂಚಿಕೊಂಡರು.
ಶ್ರೀಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಗೋಪಾಲರಾವ್ ಕಾರಕೂನ್, ಡಾ. ರವೀಂದ್ರ ಪರ್ವತೀಕರ್, ಗೋವಿಂದ ಕುಲಕಣರ್ಿ, ರಾಘವೇಂದ್ರ ಕುಲಕಣರ್ಿ, ಆನಂದ ನರೇಗಲ್, ರವೀಂದ್ರ ನರೇಗಲ್, ಶ್ರೀಧರ ನರೇಗಲ್, ಸಿದ್ದು ಅರಕಾಲಚಿಟ್ಟಿ, ರಾಘವೇಂದ್ರ ಕಾರಕೂನ್, ರಾಜ್ಯ ನಾಟಕ ಅಕಡೆಮಿ ಸದಸ್ಯ ವಿನೋದ ಅಂಬೇಕರ್, ಶ್ರೀಕಾಂತ ಭಾವಿ, ವಾದಿರಾಜ ಕುಲಕಣರ್ಿ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಎಂ.ಜೋಶಿ, ಡಿ.ಕೆ.ಕುಲಕಣರ್ಿ, ವಿನಾಯಕ ನಾನಾವಟೆ, ಪರಿಮಳಾ ಪರ್ವತೀಕರ್, ಪ್ರಮೀಳಾ ಮುದ್ದಾಪೂರ ಸೇರಿದಂತೆ ಪಟ್ಟಣದ ಭಕ್ತ ಮಂಡಳಿ ಹಾಗೂ ವಿಪ್ರ ಸಮಾಜದ ಗುರು, ಹಿರಿಯರು ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.