90 ರ ದಶಕದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಅಭ್ಯೋದಯದ ಕನಸುಗಾರ
ಗದಗ 15 : ಮೂಲತ: ಗದಗ ಶಹರದ ನೂರಾನಿ ಬಿಲ್ಡಿಂಗನಲ್ಲಿ ರಹವಾಸಿಯಾಗಿದ್ದು ಮಹಾನ್ ದೈವಜ್ಞ ಬ್ರಾಹ್ಮಣ ಸಮಾಜ ಸೇವಕರು ಹಾಗೂ , ದೈವಜ್ಞ ದೀಪ ಮಾಸ ಪತ್ರಿಕೆಯ ಸಂಪಾದಕರಾದ ಮುರಳಿ ರಾಯ್ಕರ ರವರು ತಮ್ಮ 68 ನೇ ವಯಸ್ಸಿನಲ್ಲಿ ಇಂದು ದಿ. 15 /03/2025 ರಂದು ಬೆಳಗ್ಗೆ ತಮ್ಮ ಹುಬ್ಬಳ್ಳಿಯ ವಿದ್ಯಾನಗರ ನಿವಾಸದಲ್ಲಿ ದೈವಾಧೀನರಾಗಿರುತ್ತಾರೆ.
ದಿವಂಗತ ಮುರಳಿ ರಾಯ್ಕರರವರು 90 ರ ದಶಕದಲ್ಲಿ ಸಮಸ್ತ ರಾಜ್ಯವ್ಯಾಪಿ ರಹವಾಸಿಯಾಗಿರುವ ದೈವಜ್ಞ ಬ್ರಾಹ್ಮಣ ಸಮಾಜದ ಸಾಮಾಜಿಕ, ಆರ್ಥಿಕ, ರಾಜಕೀಯ, ಸೈಕ್ಷಣಿಕ ಹಾಗೂ ಹಾಗೂ ನೈತಿಕ ಉನ್ನತಿಗಾಗಿ ಹಲವಾರು ಸಂಘಟನಾತ್ಮಕ ಹೋರಾಟವನ್ನು ಕೈಗೊಂಡ ಧೀಮಂತ ನಾಯಕರಾಗಿದ್ದರು. ಅವರು ವಿಶೇಷವಾಗಿ ದೈವಜ್ಞ ಬ್ರಾಹ್ಮಣ ಹಾಗೂ ವಿಶ್ವಕರ್ಮ ಸಮಾಜದ ಮೂಲ ಹಾಗೂ ಸಾಂಪ್ರದಾಯಿಕ ವೃತ್ತಿಯಾದ ಚಿನ್ನಾಭರಣಗಳ ವೃತ್ತಿಕುಶಾಲಗಾರರ ಕುಂದುಕೋರತೆಗಳಿಗೆ ಸದಾ ಸ್ಪಂದನೆಯನ್ನು ನೀಡುತ್ತಾ ಬಂದಿರುವರು ಅವರು ಅಂದಿನ ದಿನಗಳಲ್ಲಿ ಅಖಿಲ ಕರ್ನಾಟಕ ಚಿನ್ನ ಬೆಳ್ಳಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘವನ್ನು ಹುಟ್ಟುಹಾಕುವ ಮೂಲಕ ಸಮಸ್ತ ರಾಜ್ಯಾದ್ಯೇಠ ರಹವಾಸಿಯಾಗಿರುವ ಚಿನ್ನ ಬೆಳ್ಳಿ ಕೆಲಸಗಾರರಿಗೆ ಹಾಗೂ ವರ್ತಕರಿಗೆ ಉಂಟಾಗುತ್ತಿದ್ದ ಪೊಲೀಸ್ ಕಿರುಕುಳ, ಹಾಗೂ ಚಿನ್ನಾಭರಣಗಳ ಕಳ್ಳತನ ಪ್ರಕರಣಗಳಲ್ಲಿ ಚಿನ್ನ ಬೆಳ್ಳಿ ವರ್ತಕರಿಗೆ ಉಂಟಾಗುತ್ತಿದ್ದ ಪೊಲೀಸ್ ಕಿರುಕುಳದಿಂದ ನೋವಿಗೆ ಸದಾ ಬೆನ್ನೆಲುಬು ಆಗಿ ಅವರಿಗೆ ಕಾನೂನಿನ, ಹಾಗೂ ನೈತಿಕ ಮತ್ತು ಸಂಘಟನಾತ್ಮಕ ಬೆಂಬಲವನ್ನು ನೀಡುವ ಮೂಲಕ ಸಮಸ್ತ ರಾಜ್ಯವ್ಯಾಪಿ ದೈವಜ್ಞ ಬ್ರಾಹ್ಮಣ ಸಮಾಜದ ಸಂಘಟನೆಗೆ ಮಹತ್ವದ ಕೊಡುಗೆಯನ್ನು ನೀಡಿದ ದಿವಂಗತ ಮುರಳಿ ರಾಯ್ಕರ ರವರು ಇಂದು ಸದೃಢ ಮತ್ತು ವಿಶಾಲ ದೈವಜ್ಞ ಬ್ರಾಹ್ಮಣ ಸಮಾಜದ ಸಂಘಟನೆಗೆ ಮಹಾನ್ ಸ್ಫೂರ್ತಿಯನ್ನು ಒದಗಿಸಿಕೊಟ್ಟಿರುವರು. ಅವರ ಮುಂದಾಳತ್ವದಲ್ಲಿ ಉದಯಿಸಿದ ಅಖಿಲ ಕರ್ನಾಟಕ ಚಿನ್ನ ಬೆಳ್ಳಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘವು ರಾಜ್ಯದ ಪ್ರತಿಯೊಂದು ಜಿಲ್ಲಾ ತಾಲೂಕಾ ಹಾಗೂ ಗ್ರಾಮ ಮಟ್ಟದಲ್ಲಿಯೂ ಸಮಿತಿ ಹಾಗೂ ಘಟಕಗಳನ್ನು ಹೊಂದಿ ಕಾರ್ಯಪ್ರವೃತ್ತವಾಗಿತ್ತು.
ಶ್ರೀಯುತರು ತಮ್ಮದೇ ಸಂಪಾದಕತ್ವದಲ್ಲಿ ದೈವಜ್ಞ ದೀಪ ಎಂಬ ಮಾಸ ಪತ್ರಿಕೆಯನ್ನು ಹುಟ್ಟು ಹಾಕಿ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ವಿವಿಧ ವೃತ್ತಿಕುಶಾಲಗಾರರ, ಬಡವರ, ವಿದ್ಯಾರ್ಥಿಗಳ, ಮತ್ತು ವಿಶೇಷವಾಗಿ ಮಹಿಳೆಯರ ಅಭ್ಯೋದಯಕ್ಕೆ ವಿಶೇಷ ಬೆಳಕನ್ನು ನೀಡಿದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ.
ಮುರಳಿ ರಾಯ್ಕರರವರು ತಮ್ಮ ಕೊನೆಗಾಲದವರೆಗೂ ಚಿನ್ನ ಬೆಳ್ಳಿ ವೃತ್ತಿಕುಶಾಲಗಾರರ ಹಾಗೂ ಸರಾಫ್ ವರ್ತಕರಿಗೆ ಒಬ್ಬ ಸಂಘಟನಾತ್ನಕ ಶಕ್ತಿಯಾಗಿ ಹಲವಾರು ಬಾರಿ ತಮ್ಮ ಸ್ವಂತ ಖರ್ಚಿನಲ್ಲಿಯೇ ಹಲವರ ಸಮಸ್ಯೆಗಳಿಗೆ ಸೂಕ್ತವಾದ ನ್ಯಾಯಿಕ ಬೆಂಬಲವನ್ನು ನೀಡಿ ಚಿನ್ನ ಬೆಳ್ಳಿ ಕಳ್ಳತನ ಪ್ರಕರಣಗಳಲ್ಲಿ ಸರಾಫ್ ವರ್ತಕರಿಗೆ, ಹಾಗೂ ಚಿನ್ನ ಬೆಳ್ಳಿ ವೃತ್ತಿ ಕುಶಾಲಗಾರರಿಗೆ ಪೊಲೀಸ್ ತನಿಖೆಯ ನೆಪದಲ್ಲಿ ಉಂಟಾಗುತ್ತಿದ್ದ ಕಿರುಕುಳದಿಂದ ರಕ್ಷಣೆಯನ್ನು ನೀಡುವ ಮೂಲಕ ಮಹಾನ್ ಸಮಾಜ ಸೇವಕ ಮುರಳಿ ರಾಯ್ಕರರವರು ಜನಮನದಲ್ಲಿ ಅಜರಾಮರರಾಗಿರುವರು.
ಇಂತಹದೊಂದು ಮಹಾನ್ ಸಮಾಜ್ಯೋನ್ಮುಖಿ ವ್ಯಕ್ತಿತ್ವವನ್ನು ಹೊಂದಿರುವ ಮುರಳಿ ರಾಯ್ಕರರವರು ಇಂದು ನಮ್ಮೆಲ್ಲರನ್ನು ಅಗಲಿರುವದು ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ, ವಿಶ್ವಕರ್ಮ ಸಮಾಜದ ಚಿನ್ನ ಬೆಳ್ಳಿ ವೃತ್ತಿಕುಶಾಲಗಾರರು ಸರಾಫ್ ವರ್ತಕರು, ಹಾಗೂ ಸಮಸ್ತ ಜಿಲ್ಲಾ, ತಾಲೂಕಾ ಮತ್ತು ಗ್ರಾಮ ಮಟ್ಟದಲ್ಲಿ ರಹವಾಸಿಯಾಗಿರುವ ಸಮಾಜ ಭಾಂದವರು. ಮತ್ತು ಅಖಿಲ ಕರ್ನಾಟಕ ದೈವಜ್ಞ ಮಹಾಸಭಾ (ರಿ ) ಗದಗ. ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿ (ರಿ ) ಗದಗ. ದೈವಜ್ಞ ಜನಶಕ್ತಿ ಮಾಸ ಪತ್ರಿಕೆ ಹಾಗೂ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರು ಭಾವಪೂರ್ಣ ಶ್ರದಾಂಜಲಿ ಸಲ್ಲಿಸುವ ಮೂಲಕ ಸಂತಾಪವನ್ನು ವ್ಯಕ್ತಪಡಿಸಿರುತ್ತಾರೆ.