ನಿವೃತ್ತರಾದ ವನ್ನುರ' ಶಿಕ್ಷಕರಿಗೆ ಆತ್ಮೀಯವಾಗಿ ಬೀಳ್ಕೊಡುಗೆ

   ನಿವೃತ್ತರಾದ ವನ್ನುರ' ಶಿಕ್ಷಕರಿಗೆ ಆತ್ಮೀಯವಾಗಿ ಬೀಳ್ಕೊಡುಗೆ A heartfelt farewell to the retiring teachers of 'Vanna'

ಲೋಕದರ್ಶನ ವರದಿ 

ಬೆಳಗಾವಿ 01:  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತ ಶಿಕ್ಷಕರಾದ  ಎಸ್‌.ಎಸ್‌. ವನ್ನುರ  ಅವರನ್ನು ಸರ್ಕಾರಿ ಶಾಲಾ ಶಿಕ್ಷಕರ ಬಳಗದ ವತಿಯಿಂದ ನಗರದ ಬಿಕೆ ಕಂಗ್ರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರಿ​‍್ಡಸಿದ್ದ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. 

ಈ ವೇಳೆ  ಶಿಕ್ಷಕಿ ಆಷ್ಮಾ ನಾಯ್ಕ  ಮಾತನಾಡಿ,  ನಿವೃತ್ತ ಶಿಕ್ಷಕರನ್ನು ಆತ್ಮೀಯವಾಗಿ ಬೀಳ್ಕೊಡುತ್ತಿರುವುದು ಉತ್ತಮ ಕಾರ್ಯ. ಮಕ್ಕಳಿಗೆ ಪಾಠ ಹೇಳಿ, ಮಕ್ಕಳ ಬದುಕಿಗೆ ಬೆಳಕಾದ ಶಾಲೆ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಜೀವನದ ಕೊನೆ ಕ್ಷಣದವರೆಗೂ ಅವರಿಗೆ ಋಣಿಗಳಾಗಬೇಕು ಎಂದರು. 

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು, ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ಶಿಕ್ಷಿಸದೇ ಪಾಠ ಮಾಡಬೇಕು ಎಂದು ಪಾಲಕರು ತಾಕೀತು ಮಾಡುತ್ತಿರುವುದು ಮಕ್ಕಳಿಗೆ ಪಾಠ ಮಾಡುವುದೇ ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಎಲ್ಲಾ ಒತ್ತಡಗಳ ನಡೆವೆ ಹಲವಾರು ಸವಾಲುಗಳನ್ನು ಎದುರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು. 

ಶಾಹು ನಗರದ ಸರಕಾರಿ ಪ್ರೌಢಶಾಲೆ ಶಿಕ್ಷಕ ವೃಂದ,  ಮರಾಠಿ ಶಾಲೆ ಗುರುವೃಂದ ಮತ್ತು ಅಡುಗೆ ಸಿಬ್ಬಂದಿ ಶೋಭಾ ತಳವಾರ ರವರಿಂದ ನಿವೃತ್ತ ಶಿಕ್ಷಕರಾದ  ಎಸ್‌.ಎಸ್‌. ವನ್ನುರ  ಸನ್ಮಾನ ಮಾಡಲಾಯಿತು. ನಾಲ್ಕನೇ ವರ್ಗದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. 

ಕಾರ್ಯಕ್ರಮದ ಅಧ್ಯಕ್ಷತೆ ಎಸ್‌.ಡಿ.ಎಂ.ಸಿಅಧ್ಯಕ್ಷ ರುದ್ರ​‍್ಪ ಬಳಕುಂದಿ ವಹಿಸಿದ್ದರು. ನಗರ ಅಧ್ಯಕ್ಷ ಅರುಣ ಪಾಟೀಲ,  ನಮಿತಾ ಕಾಂಬಳೆ,   ಬಿ. ವೈ. ಹಿತಾರಗೌಡರ್ , ಕರ್ನಾಟಕ ರಾಜ್ಯ ಬರಹಗಾರರ ಸಂಘದ ಗ್ರಾಮೀಣ ಅಧ್ಯಕ್ಷೆ ಎಸ್ . ಎನ್ . ಉಪ್ಪಿನ,  ಸಾವಿತ್ರಿ ಬಾಯಿ ಫುಲೆ ಸಂಘದ  ಪದಾಧಿ ಕಾರಿಗಳಾದ ಶಾಬಾಷ್ ಖಾನ್ , ಮರಾಠಿ ಶಾಲೆಯ  ಬಾಂದುರ್ಗೆ,   ಭಾರತಿ ಸೊಪ್ಪಿಮಠ, ಎಸ್ . ಎಂ. ಅಂಗಡಿ,  ಮೇಡಂ ಎಸ್ ಡಿ ಎಂ ಸಿ ಸದಸ್ಯರು  ಟಕ್ಕೇಕರ್ ಬಾಳಿಗಟ್ಟಿ ಹಳೆಯ  ವಿದ್ಯಾರ್ಥಿನಿಯರು ಆಗಮಿಸಿದ್ದರು. 

ಕಾರ್ಯಕ್ರಮದಲ್ಲಿ ಆರ್ ಜೆ ಭಜಂತ್ರಿ ಎಲ್ಲರನ್ನು ಸ್ವಾಗತಿಸಿದರು. ಎಸ್ ಎಸ್ ವಗ್ಗರ , ಶೈಲಶ್ರೀ ಸಿ. ಕೋಲಕಾರ,  ಎಸ್‌. ಎಸ್ ಕೋಲಕಾರ , ಪ್ರಭಾವತಿ ಪತ್ತಾರ, ಅತಿಥಿ ಶಿಕ್ಷಕಿಯರು ಅಮೃತಾ ಕಮ್ಮಾರ, ಶಿವಲೀಲಾ ಗೀತಾ ಬಡಿಗೇರ ಮತ್ತು ವಿವಿಧ ಶಾಲಾ ಶಿಕ್ಷಕವೃಂದ ಹಾಜರಿದ್ದರು.   ಕರ್ನಾಟಕ ರಾಜ್ಯ ಬರಹಗಾರರ ಸಂಘದ ಜಿಲ್ಲಾಧ್ಯಕ್ಷರು ಸುರೇಶ ಸಕ್ರೆಣ್ಣವರ   ನಿರೂಪಿಸಿದರು. ಸಿ.ಕೆ. ಕೋಲಕಾರ ವಂದಿಸಿದರು.