ತ್ಯಾಗ ಸ್ವಾಭಿಮಾನದ ಬದುಕಿನ ಶ್ರೇಷ್ಠ ಚಲನಚಿತ್ರ : ನೀಲಗಂಗಾ ಚರಂತಿಮಠ
A great film about a life of sacrifice and self-respect: Neelganga Charantimath
ಬೆಳಗಾವಿ 11: ಸುಪ್ರಿಯಾ ನಿಪ್ಪಾಣಿ ಅವರು ನಿರ್ದೇಶಿಸಿದ ಚುರುಮುರಿಯಾ ಕಲಾತ್ಮಕ ಚಲನಚಿತ್ರ ದಿ. 13ರಂದು ಇಲ್ಲಿನ ಸಂತೋಷ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹಿರಿಯ ಸಾಹಿತಿ ನೀಲಗಂಗಾ ಚರಂತಿ ಮಠ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ಮಹಾದೇವ ಹಡಪದ ಮತ್ತು ಶಾರದಾ ಮುಳ್ಳೂರ ಅಭಿನಯಿಸಿದ್ದಾರೆ. ಚಿತ್ರಕಥೆ ಸಾಹಿತಿ ನೀಲಗಂಗಾ ಚರಂತಿ ಮಠ ಅಂದರೆ ನಾನೇ ಬರೆದ ಕಥೆ ಆಧಾರಿತ ಚಲನಚಿತ್ರ ಇದಾಗಿದೆ. ನೆಲಪುಸ್ತಕದಲ್ಲಿಯ ಚುರುಮುರಿ ಮಾರುವ ಸಾಮಾನ್ಯ ಮುನುಷ್ಯನ ಬದುಕಿನ ಆಧಾರದ ವಾಸ್ತವಿಕ ಘಟನೆಗಳನ್ನು ಎಳೆಎಳೆಯಾಗಿ ಚಿತ್ರಿಸಿರುವ ಪ್ರಸ್ತುತ ಕಥಾನಾಯಕ ಬದುಕಿನಲ್ಲಿ ತನ್ನವರಿಂದಲೇ ತಾತ್ಸಾರ, ಅವಮಾನಕ್ಕೊಳಗಾಗಿಯೂ ತನ್ನ ಜೀವಮಾನದ ಸರ್ವಸ್ವವನ್ನು ಅವರಿಗೆ ನೀಡಿ ಚುರುಮುರಿ ಮಾರುತ್ತ ಸ್ವಾಭಿಮಾನದಿಂದ ಬದುಕುತ್ತ ಬಿಸಿಲು ಬೇಗೆಯಲ್ಲಿ ಬೆಂದಾಗ ಮರದ ಆಸರೆಗೆ ಕುಳಿತು ನೆರಳಿಗಾಗಿ ಹಂಬಲಿಸುತ್ತಿರುತ್ತಾನೆ. ಬದುಕಿನಲ್ಲಿ ಆ ಮರದನೆರಳು ಗಾಳಿ ಕೊಷ್ಟಷ್ಟು ತಂಪು ಇನ್ನೆಲ್ಲಿಯೂ ಪಡೆಯದೆ ಪ್ರಕೃತಿ ಕೊಡುವುದನ್ನು ಯಾರು ಕೊಡಬಲ್ಲರು? ಎನ್ನುವ ಪ್ರಶ್ನೆ ಅವನದು. ಮರವನ್ನು ಅಪ್ಪುತ್ತಾನೆ. ಅದರೊಡನೆ ಮಾತನಾಡುತ್ತಾನೆ. ಅವನ ಮೌನ ಮಾತೇ ಚುರುಮುರಿಯಾ ಕಥಾವಸ್ತು. ಚುರುಮುರಿ ಮಾರುವ ಅಸಾಮಾನ್ಯ ಮನುಷ್ಯ ಬದುಕಿನ ಸಂಧ್ಯಾಕಾಲದ ತ್ಯಾಗ ಹಾಗೂ ಸ್ವಾಭಿಮಾನದ ಕಥಾ ವಸ್ತುವನ್ನು ಒಳಗೊಂಡ ಕಲಾತ್ಮಕ ಚಿತ್ರ ಇದಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದ ಅವರು ಮಧ್ಯಾಹ್ನ 12, 3 ಮತ್ತು ಸಂಜೆ 6 ರಾತ್ರಿ 9 ಘಂಟೆಗೆ ಹೇಗೆ ನಾಲ್ಕು ಆಟಗಳು ನಡೆಯಲಿವೆ ಎಲ್ಲರೂ ನೋಡಬೇಕೆಂದು ನೀಲಗಂಗಾ ಚರಂತಿ ಮಠ ಅವರು ಮನವಿ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ದೀಪೀಕಾ ಚಾಟೆ, ಸಾಹಿತಿ ನೀಲಗಂಗಾ ಚರಂತಿಮಠ, ಸುಪ್ರಿಯಾ ನಿಪ್ಪಾಣಿ,ಸುನಂದಾ ಎಮ್ಮಿ ಮೊದಲಾದವರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 