ತಾಲೂಕು ವ್ಯಾಪ್ತಿಯಲ್ಲಿ ಕರ ವಸೂಲಾತಿ ಮಹಾ ಅಂದೋಲನ: ಇಒ ಭಾರತಿ ಚೆಲುವಯ್ಯ

A great agitation for debt collection in the taluk area: EO Bharti Cheluvaiah
ದೇವರಹಿಪ್ಪರಗಿ 02: ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕರ ವಸೂಲಾತಿ ವಿಶೇಷ ಅಭಿಯಾನದ ಜೋತೆ ಮನೆಮನೆಗೆ ಕರ ವಸೂಲಾತಿ ಮಹಾ ಅಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಇಒ ಭಾರತಿ ಚೆಲುವಯ್ಯ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಸೋಮವಾರದಂದು ಮಾತನಾಡಿದ ಅವರು,ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿಯ ಆದೇಶದ ಅನ್ವಯ ದೇವರಹಿಪ್ಪರಗಿ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 26ರಿಂದ ಡಿಸೆಂಬರ್ 2ರ ವರೆಗೆ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ ನಾಲ್ಕು ತಂಡಗಳನ್ನು ರಚಿಸಿ ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾ ಅಧಿಕಾರಿ ನಿಂಗಪ್ಪ ಗೋಠೆ ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿ ವಾರು ತಂಡಗಳನ್ನು ರಚಿಸಿ ಸಾರ್ವಜನಿಕರ ಮನ ಒಲಿಸಿ ಗ್ರಾಮಸ್ಥರಿಂದ ಕರ ಸಂಗ್ರಹಿಸಲಾಗಿದೆ ಎಂದು ಮಾಹಿತಿ ಒದಗಿಸಿದರು. ಇಒ ಭಾರತಿ ಚೆಲುವಯ್ಯ ಅವರನ್ನು ಒಳಗೊಂಡ ಒಂದು ತಂಡ, ಸಹಾಯಕ ನಿರ್ದೇಶಕರು (ಪಂ.ರಾ) ಶಿವಾನಂದ ಮೂಲಿಮನಿ ಅವರನ್ನು ಒಳಗೊಂಡ ಒಂದು ತಂಡ, ಸಹಾಯಕ ನಿರ್ದೇಶಕರು(ನರೇಗಾ) ಶಾಂತಗೌಡ ನ್ಯಾಮಣ್ಣವರ, ಅವರನ್ನು ಒಳಗೊಂಡ, ತಾಲೂಕ ಯೋಜನಾಧಿಕಾರಿ ಶ್ರೀನಿವಾಸ್ ಪವಾರ ಅವರನ್ನು ಒಳಗೊಂಡ ಒಂದು ತಂಡ ರಚಿಸಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು ಇಂದು ಡಿಸೆಂಬರ್ 2 ಕರ ವಸೂಲಾತಿ ಮಹಾ ಆಂದೋಲನ ಹಮ್ಮಿಕೊಳ್ಳಲಾಯಿತು. ಅದರಂತೆ ಸಾತಿಹಾಳ ಗ್ರಾಮ ಪಂಚಾಯತಿಯ ಕರ ವಸುಲಾತಿ ಮಹಾ ಆಂದೋಲನದಲ್ಲಿ ಭಾಗಿಯಾಗಿ ಮಾತನಾಡಿದ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ಶಿವಾನಂದ ಮೂಲಿಮನಿ ಜಿಲ್ಲಾ ಪಂಚಾಯಿತಿ ಆದೇಶದ ಅನ್ವಯ ತಾಲೂಕಿನಲ್ಲಿ ಅತಿ ಹೆಚ್ಚು ಕರ ವಸೂಲಾತಿ ಮಾಡಲು ಸಿಬ್ಬಂದಿ ವರ್ಗ ಗುರಿ ಸಾಧಿಸಲು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಸಹ ಕರ ವಸೂಲಾತಿ ಅಭಿಯಾನಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡರು.ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.