ಶರಣರ ವೈಭವ ರಥಯಾತ್ರೆಗೆ ನಗರದಲ್ಲಿ ಅದ್ದೂರಿ ಸ್ವಾಗತ

A grand welcome to the city for the glorious Rath Yatra of the devotees

ಶರಣರ ವೈಭವ ರಥಯಾತ್ರೆಗೆ ನಗರದಲ್ಲಿ ಅದ್ದೂರಿ ಸ್ವಾಗತ 

ಬೆಳಗಾವಿ 27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬಾಗಲಕೋಟೆ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ ಬಾಗಲಕೋಟೆ ಇವರ ಸಹಯೋಗದಲ್ಲಿ ಅನುಭವ ಮಂಟಪ- ಬಸವಾದಿ ಶರಣರ ವೈಭವ ರಥಯಾತ್ರೆ ಹಮ್ಮಿಕೊಳ್ಳಲಾಗಿದ್ದು, ರವಿವಾರ ಏ.27ರಂದು ಬೆಳಗಾವಿ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ "ಅನುಭವ ಮಂಟಪ ಬಸವಾದಿ ಶರಣರ ವೈಭವ ರಥಯಾತ್ರೆ"ಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. 

ಕರ್ನಾಟಕ ಸಾಂಸ್ಕೃತಿಕ ನಾಯಕರಾದ ವಿಶ್ವಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನೊಳಗೊಂಡ ಅನುಭವ ಮಂಟಪದಲ್ಲಿ ಭಗವಾನ್ ಗೌತಮ ಬುದ್ಧ, ಗುರುನಾನಕ್ ಹಾಗೂ ಶಿವಶರಣೆ ಅಕ್ಕ ಮಹಾದೇವಿ, ಭಗವಾನ್ ಮಹಾವೀರ, ನಾರಾಯಣ ಗುರು, ಏಸು ಕ್ರಿಸ್ತ, ಡಾ. ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿಗಳು ನೋಡುಗರ ಕಣ್ಣಿಗೆ ಮೆರಗು ನೀಡಿದವು.  

ಮಹಾಪೌರ ಮಂಗೇಶ್ ಪವಾರ್, ಉಪ ಮಹಾಪೌರ ವಾಣಿ ಜೋಶಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸೇರಿದಂತೆ ಗಣ್ಯರು, ಬಸವ ಶರಣರ ಅನುಯಾಯಿಗಳು ಹಾಜರಿದ್ದರು.