ಯೋಧ ಮಚ್ಚೆಂದ್ರ ಮಾನೆಗೆ ಅದ್ದೂರಿ ಸ್ವಾಗತ

A grand welcome to soldier Machendra Mane

ಮಾಂಜರಿ 04: ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ನಿವಾಸಿಯಾದ ಮಚ್ಚೆಂದ್ರ ಗುಂಡು ಮಾನೆ ಇವರು ಕಳದ 28 ವರ್ಷಗಳ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿದ್ದರಿಂದ ಅವರನ್ನು ಶನಿವಾರರಂದು  ಗ್ರಾಮದ ಸಮಸ್ತ ನಾಗರಿಕರು ಮತ್ತು ಮಾನೆ ಕುಟುಂಬಸ್ಥರು ಅದ್ದೂರಿಯಾಗಿ  ಸ್ವಾಗತಿಸಿದರು. 

ಮಚ್ಚೀಂದ್ರ ಮಾನೆ ಇವರು 28 ವರ್ಷಗಳ ದೇಶ ಸೇವೆಯಲ್ಲಿ ದೇಶದ ಹಲವಾರು ಪ್ರದೇಶಗಳಲ್ಲಿ ತಮ್ಮ ಸೇವೆ ಸಂದಿಸುವ ಜೊತೆಗೆ ಪರದೇಶದಲ್ಲಿ ಕೂಡ ಭಾರತೀಯ ಸೇನೆಯ ಮುಖಾಂತರ ಸೇವೆಯನ್ನು ಸಲ್ಲಿಸಿದ್ದಾರೆ. ಸೇವೆಯಿಂದ ನಿವೃತ್ ಆದಬಳಿಕ ತಮ್ಮ ಸ್ವಗ್ರಾಮಕ್ಕೆ  ಆಗಮಸಿದ ಇವರನ್ನು ಗ್ರಾಮದ ಎಲ್ಲ ಗ್ರಾಮಸ್ಥರು ಹಾಗೂ ಕುಟುಂಬಸ್ಥರಿಂದ ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಮಾಜಿ ಸೈನಿಕರ ಸಂಘಟನೆಯ ಪದಾಧಿಕಾರಿಗಳು ಹಾಜರಿದ್ದರು.