ಲೋಕದರ್ಶನ ವರದಿ
ಬೈಲಹೊಂಗಲ 04: 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ನಿವೃತ್ತಿಯಾಗಿ ತವರಿಗೆ ಮರಳಿದ ಯೋಧರಿಗೆ ಭವ್ಯ ಸ್ವಾಗತ ಕೋರಲಾಯಿತು.
ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ಪಂಜಾಬ ಹಾಗೂ ಜಮ್ಮುವಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇಬ್ಬರು ಯೋಧರು ರಾಜ್ಯಕ್ಕೆ ವಾಪಸ್ ಆದರು. ಪಟ್ಟಣದ ಪ್ರವೀಣ ಭಾವಿಹಾಳ, ಇಂಚಲ ಗ್ರಾಮದ ಶಿವಪ್ಪ ದಿನ್ನಿಮನಿ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.
ಕೇಂದ್ತ ಬಸ್ ನಿಲ್ದಾಣದ ಕರೇಮ್ಮ ದೇವಿ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ನಿವೃತ್ತ ಯೋಧರನ್ನು ಮೆರವಣಿಗೆ ಮಾಡಲಾಯಿತು. ನೂರಾರು ದೇಶಭಕ್ತ ಯುವಕರು ಬೋಲೋ ಭಾರತ ಮಾತಾ ಕೀ ಜೈ ಎಂದು ಜಯಘೋಷ ಕೂಗಿದರು.
ಈ ಸಂದರ್ಭದಲ್ಲಿ ಸಿದ್ದಪ್ಪ ಲೋಕುರ, ಪ್ರಶಾಂತ ತುಕ್ಕಪ್ಪನವರ, ಡಿ.ಜೆ.ಬೇವಿನಕೊಪ್ಪ, ವಿವೇಕ ಭಾಂವಿಹಾಳ ಆನಂದ ಶೆಟಗಾರ, ಉಮೇಶ ಗಂಗಪ್ಪನವರ, ಅಜ್ಜಪ್ಪ ಪರುಶೆಟ್ಟಿ, ಮಲ್ಲಿಕಾಜರ್ುನ ಇಂಗಳಗಿ, ಅರುಣ ಕೊಟೆನ್ನವವರ, ಬಸು ಗಂಗಪ್ಪನವರ, ಶಿವಾನಂದ ಶೆಟಗಾರ ಮತ್ತಿತರರು ಇದ್ದರು.