ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಗೆ ಭವ್ಯ ಸ್ವಾಗತ
ಚಿಕ್ಕೋಡಿ 09: ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅವರ ಭವ್ಯ ಜ್ಯೋತಿಯನ್ನು ಇಲ್ಲಿನ ತಾಲೂಕಾಡಳಿತ ಮತ್ತು ಹಾಲುಮತ ಸಮಾಜ ಬಾಂಧವರು ಅದ್ದೂರಿಯಾಗಿ ಭರಮಾಡಿಕೊಂಡರು.
ನಿಪ್ಪಾಣಿ ತಾಲೂಕಿನಿಂದ ಚಿಕ್ಕೋಡಿ ತಾಲೂಕಿಗೆ ಆಗಮೀಸಿದ ರಾಯಣ್ಣನ ಭವ್ಯ ಜ್ಯೋತಿಯು ಬಸವ ಸರ್ಕಲದಲ್ಲಿ ಸ್ವಾಗತಿಸಲಾಯಿತು. ತಹಶೀಲ್ದಾರ ಸಿ.ಎಸ್.ಕುಲಕರ್ಣಿ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಖ್ಯಾತ ನ್ಯಾಯವಾದಿ ಎಚ್.ಎಸ್.ನಸಲಾಪೂರೆ, ಲಕ್ಷ್ಮಣ ಡಂಗೇರ ಅವರು ಭವ್ಯ ಜ್ಯೋತಿ ರಥಕ್ಕೆ ಪೂಜೆ ಸಲ್ಲಿಸಿ ಮಾಲಾರೆ್ಣ ಮಾಡಿದರು.
ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ ದೇಶ ಪ್ರೇಮ ಉಳಿಯಬೇಕು. ನಾಡಿನ ನೆಲ-ಜಲವನ್ನು ಸುರಕ್ಷಿತವಾಗಿ ಇಡಬೇಕು. ರಾಯಣ್ಣನ ದೇಶಪ್ರೇಮ ಉಳಿಯಬೇಕು. ತ್ಯಾಗ ಬಲಿದಾನ ಸ್ಮರಿಸುವ ಕೆಲಸ ಆಗಬೇಕು ಎನ್ನುವ ದಿಸೆಯಲ್ಲಿ ರಾಯಣ್ಣನ ಉತ್ಸವ ನಡೆಯಲಿದೆ ಎಂದರು.
ಹಾಲುಮತ ಸಮಾಜದ ಮುಖಂಡರಾದ ನ್ಯಾಯವಾದಿ ಎಚ್.ಎಸ್.ನಸಲಾಪೂರೆ, ಸಮಾಜದ ಅಧ್ಯಕ್ಷರಾದ ಲಕ್ಷ್ಮಣ ಡಂಗೇರ, ಸುರೇಶ ಹೆಗಡೆ, ಮಹಾದೇವ ಕವಲಾಪೂರೆ, ರಾಮಣ್ಣಾ ಬನ್ನಟ್ಟಿ, ನ್ಯಾಯವಾದಿ ಪೂಜೇರಿ,ನ್ಯಾಯವಾದಿ ಎಸ್.ಎಲ್.ಹರಕೆ, ಹಣಬರ ಸಮಾಜದ ಮುಖಂಡರಾದ ಶೀತಲ ಮುಂಡೆ, ಸೇರಿದಂತೆ ಮುಂತಾದವರು ಇದ್ದರು.