ಪಟ್ಟಣದ ಬೀದಿ ಬೀದಿಯಲ್ಲಿ ನಡೆಯಲಿದೆ ಅದ್ದೂರಿ ಮೆರವಣಿಗೆ ಶುಕ್ರವಾರ ಬಾವೈಕ್ಯದ ನಾಡಿನಲ್ಲಿ ಬಣ್ಣದೋಕುಳಿ ನಡೆಯಲಿದೆ

A grand procession will be held through the streets of the town. A colouring ceremony will be held i

ಪಟ್ಟಣದ ಬೀದಿ ಬೀದಿಯಲ್ಲಿ ನಡೆಯಲಿದೆ ಅದ್ದೂರಿ ಮೆರವಣಿಗೆ ಶುಕ್ರವಾರ ಬಾವೈಕ್ಯದ ನಾಡಿನಲ್ಲಿ ಬಣ್ಣದೋಕುಳಿ ನಡೆಯಲಿದೆ

ಶಿರಹಟ್ಟಿ 12 : ಭಾವೈಕ್ಯದ ನಾಡು ಎಂದೇ ಹೆಸರುವಾಸಿಯಾದ ಪಟ್ಟಣದಲ್ಲಿ ಸಂಸ್ಕೃತಿಕ, ಸಂಪ್ರದಾಯ ಪ್ರತಿಕವಾಗಿರುವ ಹೋಳಿ ಹಬ್ಬವನ್ನು ಸೌಹಾರ್ದತೆ ಸಾಮರಸ್ಯದಿಂದ ಜಾತಿ, ಮತ, ಧರ್ಮದ ಕಟ್ಟುಪಾಡುಗಳಿಲ್ಲದೆ ಪ್ರತಿಯೊಬ್ಬರು ಮನಸಾರೆ ಸ್ವಇಚ್ಛೆಯಿಂದ ಪರಸ್ಪರ ಎಲ್ಲ ಜನಾಂಗದವರು ಸೆರಿ 13/3/2025 ರಂದು ಗುರುವಾರ ಕಾಮಣ್ಣನ ಸುಡುವುದು ಹಾಗೂ ಶುಕ್ರವಾರ ಬಣ್ಣದ ಓಕುಳಿ ಆಚರಿಸಲಾಗುತ್ತದೆ ಎಂದು ಪಟ್ಟಣ ಪಂಚಾಯ್ತಿ ಹಾಗೂ ಕಾಮಣ್ಣನ ಕಮಿಟಿಯವರು ತಿಳಿಸಿದ್ದಾರೆ. 

ಸ್ಥಳಿಯ ಪಟ್ಟಣದಲ್ಲಿ ಹೋಳಿ ಹುಣ್ಣಿಮೆಯ ಮುಂಚಿತವಾಗಿ ಪ್ರತಿಯೊಬ್ಬರೂ ಮನೆಯ ಮುಂದೆ ಕಲ್ಲಿನ ಮೂರ್ತಿಯನ್ನು ಕಾಮಣ್ಣ ಎಂದು ಪ್ರತಿಷ್ಠಾಪಿಸಿ ಪೂಜಿಸುವುದು ರೂಢಿಯಲ್ಲಿದೆ. ನಂತರ ಐದನೇ ದಿನಕ್ಕೆ ಅದನ್ನು ಕುಳ್ಳಿನಿಂದ ದಹನ ಮಾಡಿ ಹೋಳಿಗೆಯನ್ನು ನೈವಿದ್ಯ ಮಾಡಿ, ಪ್ರಸಾದವನ್ನು ಹಲಗೆ ಬಡೆಯಲು ಬಂದ ಹುಡುಗರಿಗೆ ಹಂಚುವ ಪದ್ಧತಿ ಇದೆ.ಹುಲ್ಲುಗಾಮನ ಮೂರ್ತಿ: ಹೋಳಿ ಹುಣ್ಣಿಮೆಯ ರಾತ್ರಿ ಪಟ್ಟಣದ ಕುಂಬಾರ ಓಣಿಯಲ್ಲಿ ಹುಲ್ಲಿನಿಂದ ಕಾಮಣ್ಣನ ಮೂರ್ತಿಯನ್ನು ಸಿದ್ಧಪಡಿಸಿ ಎತ್ತಿನ ಬಂಡಿಯಲ್ಲಿ ಪಟ್ಟಣದ ಬೀದಿ ಬೀದಿಯಲ್ಲಿ ನೂರಾರು ಯುವಕರು ಹಲಗೆ ಬಾರಿಸುತ್ತಾ ಕುಳ್ಳಿನ ಪಂಜುಗಳ ಮೆರವಣಿಗೆ ಮಾಡುತ್ತಾ, ಪಂಜುಗಳ ಮೆರವಣಿಗೆಗೆ ಬೇಕಾಗುವ ಕುಳ್ಳನ್ನು ಹುಣ್ಣಿಮೆಯ ಐದು ದಿನಕ್ಕಿಂತ ಮುಂಚೆ ಪಟ್ಟಣದಲ್ಲಿನ ಪ್ರತಿಯೊಂದು ನಗರದಲ್ಲಿ ಸಂಚರಿಸಿ ರೈತರು ಹಚ್ಚುವ ಕುಳ್ಳನ್ನು ಕದ್ದು ಶೇಖರಿಸುವುದು ವಿಶೇಷವಾಗಿದೆ. ಕಾಮಣ್ಣನ ಮೂರ್ತಿಯಲ್ಲಿ ತುಂಬಲಾದ ಬತ್ತದ ಹುಲ್ಲಿನ ಮೂರ್ತಿಯನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಿ ಕಾಮಣ್ಣನನ್ನು ಒಂದೆಡೆ ಅದನ್ನು ದಹಿಸಿದ ನಂತರ ಮರುದಿನ ಓಕಳಿ ಪ್ರಾರಂಭವಾಗುತ್ತದೆ. ಕಾಮಣ್ಣನ್ನು ಮೆರವಣಿಗೆ ಮಾಡಿಕೊಂಡು ಬಂದ ಬಂಡೆಯಲ್ಲಿ ಬಣ್ಣದ ನೀರನ್ನು ಹಾಕಿಕೊಂಡು ಪ್ರಮುಖ ಬೀದಿಗಳಲ್ಲಿ ಎಲ್ಲ ಜನರಿಗೆ ಬಂಡೆಯಲ್ಲಿದ್ದ ಬಣ್ಣದ ನೀರು ಮೈಮೇಲೆ ಎರಚಿದ ನಂತರ ಜನರು ಮನೆಗೆ ಹೋಗಿ ಜಳಕ ಮಾಡುವುದು ನಮ್ಮ ಉರಿನ ಪದ್ದತಿಯಾಗಿದೆ.  

ಕಾಮನ ಹಿನ್ನೆಲೆ: ಶಿವನ ತಪಸ್ಸನ್ನು ಭಂಗ ಮಾಡಿದ್ದಕ್ಕಾಗಿ ಕಾಮದೇವನನ್ನು ತನ್ನ ಮೂರನೇ ಕಣ್ಣಿಂದ ಬಸ್ಮ ಮಾಡುತ್ತಾನೆ. ದೇವಿ ಭಕ್ತೆಯಾದ ರತಿಯು ತನ್ನ ಪತಿಗೆ ಮರಳಿ ಜೀವದಾನ ನೀಡಬೇಕೆಂದು ಕೇಳುತ್ತಾಳೆ ಆಗ ಶಿವ ರತಿಗೆ ಮಾತ್ರ ಕಾಣುವ ಕಾಮದೇವ ( ಮನ್ಮಥ) ಹಾಗೆ ವರ ಕೋಡುತ್ತಾನೆ. ಕಾಮದೇವನು ಶಿವನ ಮೂರನೇ ಕಣ್ಣಿಗೆ ಗುರಿಯಾಗಿ ಸುಟ್ಟಿದ್ದರಿಂದ ಈ ದಿನವನ್ನೆ ಕಾಮಣ್ಣನ ಹಬ್ಬವೆಂದು ಆರಂಭ ಮಾಡಲಾಗಿದೆ ಎಂಬ ಇತಿಹಾಸವಿದೆ. 

ಹೋಳಿ ಹಿಂದೂಗಳ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಭಾರತದಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವ ಹಬ್ಬವಾಗಿದೆ. ಪ್ರತಿ ವರ್ಷ ಹೋಳಿ ಹಬ್ಬವು ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾರ್ಚ್‌ ಆರಂಭದಲ್ಲಿ ಬರುತ್ತದೆ. ಈ ಹಿಂದೂ ಹಬ್ಬವು ಸಾಮಾನ್ಯವಾಗಿ ಹಿಂದೂ ತಿಂಗಳ ಫಾಲ್ಗುಣ ಮಾಸದ ಹುಣ್ಣಿಮೆಯೊಂದಿಗೆ ಸೇರಿಕೊಳ್ಳುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ಬಣ್ಣಗಳನ್ನು ಹಚ್ಚುತ್ತಾರೆ, ನಿರ್ದಿಷ್ಟ ಆಚರಣೆಗಳು ಮತ್ತು ಪೂಜೆಗಳನ್ನು ಮಾಡಿ  ಸಿಹಿ ಹಂಚಿ ಸಂಭ್ರಮಿಸುತ್ತಾರೆ. 

ಬಾಕ್ಸಲ್ಲಿಚಂದ್ರಶೇಖರ ಜೋಗೇರಪಟ್ಟಣದ ಯುವಕಶಿರಹಟ್ಟಿಯಲ್ಲಿ ಹಿಂದಿನ ಕಾಲದಿಂದಲು ಹೋಳಿ ಹಬ್ಬವನ್ನು ಜಾತಿ, ಮತ, ಪಂಥ ಧರ್ಮದ ಕಟ್ಟುಪಾಡುಗಳಿಲ್ಲದೆ ಪ್ರತಿಯೊಬ್ಬರು ಆಚರಿಸುವುದು ವಿಶೇಷವಾಗಿದೆ. ಏಕತೆಯನ್ನು ಪ್ರತಿಬಿಂಬಿಸುವ ಈ ಹಬ್ಬವು ಜೀವನದಲ್ಲಿ ಹೊಸತನದ ಬೆಳಕನ್ನು ತಂದುಕೊಡುವುದೆ ಹೋಳಿ ಹಬ್ಬ ಎಂದು ಸಂಭ್ರಮಿಸುತ್ತಾರೆ.