ಲೋಕದರ್ಶನ ವರದಿ
ಕಾಗವಾಡ 16: ವೇದಾಂತ ಕೇಸರಿ ಪ.ಪೂ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಬಹಳ ವರ್ಷಗಳ ಕಾಲ ಜುಗೂಳ ಗ್ರಾಮದಲ್ಲಿ ನೆಲೆಸಿ ಇಲ್ಲಿಯ ಜನರಿಗೆ ಅವರ ಆಮೃತ ವಾಣಿಯಿಂದ ಪಾವನಗೊಳಿಸಿದ್ದಾರೆ. ಅಂತಹ ಮಹಾನ ಪೂಜ್ಯರ 117 ನೇ ಜಯಂತಿ ನಿಮಿತ್ಯ ಜುಗೂಳ ಗ್ರಾಮಸ್ಥರು ಸೇರಿ ಗುರುಸ್ಮರಣೆ ನಿಮಿತ್ಯ ಇಂದು ಮಂಗಳವಾರ ಅವರ ಭಾವಚಿತ್ರದ ಭವ್ಯ ಮರೆವಣಿಗೆಯನ್ನು ಹಮ್ಮಿಕೊಂಡಿದ್ದರು.
ಅ. 11 ರಿಂದ ಪ್ರಾರಂಭವಾಗ ಈ ಗುರುಸ್ಮರಣೆಯಲ್ಲಿ ಅನೇಕ ಮಹಾಸ್ವಾಮಿಗಳು ಆಗಮಿಸಿ ದಿನಾಲೂ ಪ್ರವಚನ ನಡೆಸಿಕೊಟ್ಟರು. ನಿನ್ನೆ ಬೆಳಿಗ್ಗೆ 5.30 ಕ್ಕೆ ಮಹಾ ಜಪಯೋಗ ನೇರವೇರಿತುವಿಂದು ನಡೆದ ಗುರು ಸ್ಮರಣೆಯ ಸಮಾರೋಪದಲ್ಲಿ ಸದಲಗಾ ಗೀತಾಶ್ರಮದ ಡಾ. ಶ್ರದ್ಧಾನಂದ ಮಹಾಸ್ವಾಮಿಗಳು, ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಮಹಾಸ್ವಾಮಿಗಳು, ಟಾಕಳಿ ಗುರುದೇವಾಶ್ರಮದ ಶಿವದೇವ ಮಹಾಸ್ವಾಮಿಗಳು, ಕಕಮರಿಯ ಆತ್ಮಾನಂದ ಮಹಾಸ್ವಾಮಿಗಳು, ಕುಂದಗೋಳದ ಬಸವೇಶ್ವರ ಮಹಾಸ್ವಾಮಿಗಳು, ಪರಮಾನಂದವಾಡಿಯ ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಗಳು ವಿಜಯಪೂರ ಜ್ಷಾನಯೋಗಾಶ್ರಮದ ಷಡಕ್ಷರಿ ಮಹಾಸ್ವಾಮಿಗಳು, ಗುರುಲಿಂಗ ಮಹಾಸ್ವಾಮಿಗಳು ಮತ್ತು ಮಹಾದೇಶ ಶಾಸ್ತ್ರಿಗಳು ಭಾಗವಹಿಸಿದ್ದರು.
5 ದಿನಗಳ ಕಾಲ ನಡೆದ ಈ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಾಸ ಸಂದರ್ಭದಲ್ಲಿ ಜನರಿಗೆ ಆರೋಗ್ಯ ಸೇವೆ ನೀಡಿದ ಡಾ. ಮನೋಜ ಮಿಣಚೆ, ಡಾ. ಅಮೋಲ ಸರಡೆ ಮತ್ತು ಜುಗೂಳ ಗ್ರಾಮದ ಡಾ. ಉಮೇಶ ಪಾಟೀಲ ದಂಪತಿ ಹಾಗೂ ಡಾ. ರಾಜು ಪಾಟೀಲ ದಂಪತಿಗಳನ್ನು ಸನ್ಮಾನಿಸಲಾಯಿತು.
ಜುಗೂಳ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಆವರಣದಲ್ಲಿ ಆಗಮಿಸಿದ ಎಲ್ಲ ಶ್ರೀಗಳಿಂದ ಪೂಜೆ ಸಲ್ಲಿಸಿದ ಬಳಿಕ ಮಲ್ಲಿಕಾರ್ಜುನ ಶ್ರೀಗಳ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ವಾದ್ಯವೃಂದಗಳೊಂದಿಗೆ ಜುಗೂಳ ಗ್ರಾಮದ ಭಕ್ತರು ಮತ್ತು ಮಹಾಸ್ವಾಮಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯು ಜುಗೂಳ ಗ್ರಾಮದ ಓಣೀಗಳಲ್ಲಿ ಸಂಚರಿಸಿ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬಂದ ಸಮಾರೋಪಗೊಂಡಿತು. ಸಂಜೆ ದೇವಸ್ಥಾನದಲ್ಲಿ ಎಲ್ಲ ಭಕ್ತರಿಗಾಗಿ ಮಹಾಪ್ರಸಾದ ಹಮ್ಮಿಕೊಳ್ಳಲಾಗಿದೆ.
ಮೆರವಣಿಗೆಯಲ್ಲಿ ವಿಜಯಕುಮಾರ ಮಿಣಚೆ, ಗುರಗೌಡಾ ಪಾಟೀಲ, ಸಾತಗೌಡಾ ಪಾಟೀಲ, ಬಾಳಗೌಡಾ ಪಾಟೀಲ, ಭೀಮಗೌಡಾ ಪಾಟೀಲ, ಮಲ್ಲಾರಿಪಂತ ಕುಲಕರ್ಣಿ, ಬಾಬಾಸಾಬ ಪಾಟೀಲ, ರಾವಸಾಬ ಕೊಲ್ಲಾಪೂರೆ, ಸದಾಶಿವ ಸಾತಗೊನ್ನವರ, ಮೋಹನ ಜಾಧವ, ಬಾಬಗೌಡಾ ಪಾಟೀಲ ಹಾಗೂ ಗ್ರಾಮದ ಅನೇಕ ಹಿರಿಯ ಮುಖಂಡರು ಭಾಗವಹಿಸಿದ್ದರು.