ಅಭಿಮಾನಶೂನ್ಯರಾಗುತ್ತಿರುವುದು ಖೇದಕರ: ಯಲ್ಲನಗೌಡ ಪಾಟೀಲ

ಅಭಿಮಾನಶೂನ್ಯರಾಗುತ್ತಿರುವುದು ಖೇದಕರ: ಯಲ್ಲನಗೌಡ ಪಾಟೀಲ A grand independence celebration was held all over the city, including the municipality

ಪುರಸಭೆ ಸೇರಿದಂತೆ ನಗರದೆಲ್ಲೆಡೆ ಅದ್ದೂರಿ ಸ್ವಾತಂತ್ರ್ಯೋತ್ಸವ 

ಮಹಾಲಿಂಗಪುರ 16: ವೀರರ ಭೂಮಿಯಾದ ಭರತ ಖಂಡದ ಜನರು ನಿರಭಿಮಾನಿಗಳು ಮತ್ತು ಅಭಿಮಾನಶೂನ್ಯರಾಗುತ್ತಿರುವುದು ಖೇದಕರ.ಇಂದಿನ ಮಕ್ಕಳು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸುಖದೇವ್, ರಾಜಗುರು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ದೇಶಕ್ಕಾಗಿ ದುಡಿಯುವಂತದಾಗ ಸ್ವಾತಂತ್ರೋತ್ಸವ ಸಾರ್ಥಕವಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು. 

ಪುರಸಭೆಯಲ್ಲಿ ಹಮ್ಮಿಕೊಂಡ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಲಕ್ಷಾಂತರ ಜನರು ಸರ್ವಸ್ವವನ್ನು ತ್ಯಾಗ ಮಾಡಿ ಗಳಿಸಿಕೊಟ್ಟ ಸ್ವಾತಂತ್ರ್ಯ ಅತ್ಯಮೂಲ್ಯ ಇದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. 

ಪುರಸಭೆ ಸದಸ್ಯ ರಾಜು ಚಮಕೇರಿ ಮಾತನಾಡಿ, ಭಾರತ ಇಂದು ವಿಶ್ವಗುರುವಾಗುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ ಪ್ರಾಚೀನ ಕಾಲದಿಂದಲೂ ಭಾರತ ವಿಶ್ವಗುರುವಾಗಿತ್ತು,ನಳಂದ ವಿಶ್ವವಿದ್ಯಾಲಯ ಅದಕ್ಕೆ ಸಾಕ್ಷಿ. ಇಂತಹ ಶ್ರೇಷ್ಠ ಜ್ಞಾನದ ಸಿರಿ ಸಂಪತ್ತಿನ, ವೀರ ಪರಂಪರೆಯ ಪುಣ್ಯಭೂಮಿ ಭರತಖಂಡ ಎಷ್ಟೋ ಶತಮಾನಗಳವರೆಗೆ ಪರಕೀಯರ ಗುಲಾಮಗಿರಿಯಲ್ಲಿತ್ತು ಎಂದರೆ ಅದಕ್ಕೆ ನಮ್ಮೊಳಗಿನವರ ಒಡಕೆ ಕಾರಣ ಹಾಗಾಗಿ ನಾವೆಲ್ಲರೂ ದೇಶದ ವಿಷಯದಲ್ಲಿ ಒಂದಾಗಿ ಭಾರತವನ್ನು ಮತ್ತೆ ವಿಶ್ವಗುರುವಾಗುವತ್ತ ಮುನ್ನಡೆಸುವ ಎಂದರು. 

ನಂತರ ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿ ಸ್ವತಂತ್ರಕ್ಕಾಗಿ ಹುತಾತ್ಮರಾದವರ ತ್ಯಾಗ ಬಲಿದಾನಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಆಧ್ಯ ಕರ್ತವ್ಯ ಎಂದರು. 

ಆರಕ್ಷಕರು ಗಾಳಿಯಲ್ಲಿ ಗುಂಡು ಹಾರಿಸುವುದರೊಂದಿಗೆ ಧ್ವಜಾರೋಹಣ ನೆರವೇರಿತು. ನಂತರ ಮಕ್ಕಳಿಂದ ಪಥಸಂಚಲನ, ದೇಶ ಭಕ್ತಿಗೀತೆ ನೃತ್ಯ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ, ವಿಜೇತ ಮಕ್ಕಳಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಣೆ ಮಾಡಿದರು. ಪುರಸಭಾ ಸ್ವಚ್ಛತಾ ಕಾರ್ಮಿಕರಿಗೆ ಉಚಿತ ಸಮವಸ್ತ್ರ ವಿತರಿಸಿದರು.ಪುರಸಭೆ ಉಪಾಧ್ಯಕ್ಷೆ ಶೀಲಾ ರಾಜೇಶ ಭಾವಿಕಟ್ಟಿ,ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಾಗವಾನ,ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಬಸವರಾಜ ಹಿಟ್ಟಿನಮಠ, ಬಲವಂತಗೌಡ ಪಾಟೀಲ,ಮುಸ್ತಾಕ ಚಿಕ್ಕೋಡಿ, ಸ್ನೇಹಲ ಅಂಗಡಿ,ಡಾ! ಸವಿತಾ ಕೊಳ್ಳಿಗುಡ್ಡ, ಚಾಂದನಿ ನಾಯಕ, ಸವಿತಾ ಹುರಕಡ್ಲಿ, ಸುಜಾತಾ ಮಾಂಗ ,ಬಸವರಾಜ ಬುರುಡ, ರಾಜು ಗೌಡಪ್ಪಗೊಳ, ವಿನೋದ ಸಿಂಪಿ, ಲಕ್ಕಪ್ಪ ಭಜಂತ್ರಿ, ಬಸವರಾಜ ಕರೆಹೊನ್ನ, ಅಪ್ಪಾಸಾಬ ನಾಲಬಂದ, ಮುಖಂಡರಾದ ಜಿ .ಎಸ್ .ಗೊಂಬಿ, ಸಂಗಪ್ಪ ಹಲ್ಲಿ,ಸುನೀಲಗೌಡ ಪಾಟೀಲ,ಶಿವಾನಂದ ಅಂಗಡಿ, ಲಕ್ಷ್ಮಣ ಮಾಂಗ, ಮುಖ್ಯಾಧಿಕಾರಿ ನಾಮದೇವ ಲಮಾಣಿ, ಪಿ. ವೈ.ಸೊನ್ನದ, ಎಸ್‌.ಜಿ.ಕತ್ತಿ, ಎಂ.ಕೆ.ದಳವಾಯಿ, ಎಸ್ ಡಿ ಚೌದ್ರಿ, ಎಂ.ಎಸ್‌.ಮುಲ್ಲಾ, ಎಂ.ಎಂ ಮುಗಳಖೋಡ, ರಾಜೇಶ್ವರಿ ಸೊರಗಾಂವಿ,ಮಹಾಲಿಂಗ ಗಸ್ತಿ,ಮಹಾಲಿಂಗ ಮಾಂಗ,ರಾಮು ಮಾಂಗ,ಎಸ್ .ಎನ.ಪಾಟೀಲ ಸ್ವಾಗತಿಸಿದರು ರವಿ ಹಲಸಪ್ಪಗೊಳ,ನಿರೂಪಿಸಿದರು, ಸಿ.ಎಸ್‌.ಮಠಪತಿ ವಂದಿಸಿದರು.  

ಪಿಕೆಪಿಎಸ್‌:ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು.ಉಪಾಧ್ಯಕ್ಷ ಮಹಾಲಿಂಗ ಪೂಜಾರಿ ನಿರ್ದೇಶಕರಾದ ಅಶೋಕಗೌಡ ಪಾಟೀಲ,ಮಲ್ಲಿಕಾರ್ಜುನ ಕುಳ್ಳೋಳಿ, ವಿಷ್ಣುಗೌಡ ಪಾಟೀಲ, ಶಿವಪ್ಪ ನಾಗನೂರ, ಬಸವರಾಜ ಅರಳಿಕಟ್ಟಿ, ಈರ​‍್ಪ ದಿನ್ನಿಮನಿ, ಶೈಲಾ ಪವಾರ, ಸುರೇಖಾ ಸೈದಾಪುರ,ಶಿವಲಿಂಗ ಘಂಟಿ, ಹಣಮಂತ ಬರುಡ, ಸಂಗಪ್ಪ ಡೋಣಿ, ಮುಖಂಡರಾದ ಮಹಾಂತೇಶ ಹಿಟ್ಟಿನಮಠ,ಯಲ್ಲಪ್ಪ ಹಟ್ಟಿ, ಭೀಮಶಿ ಗೌಂಡಿ, ಜಮೀರ್ ಯಕ್ಷಂಬಿ,ಹಣಮಂತಗೌಡ ಪಾಟೀಲ,ಮಹಾಲಿಂಗಪ್ಪ ಕುಳ್ಳೋಳಿ,ಮಹಾಲಿಂಗಪ್ಪ ಕೌಜಲಗಿ,ಚನ್ನಪ್ಪ ಪಟ್ಟಣಶೆಟ್ಟಿ, ಹಣಮಂತ ಬಡಿಗೇರ,ಮುಖ್ಯ ಕಾರ್ಯನಿರ್ವಾಹಕ ಈರ​‍್ಪ ಬೆಟಗೇರಿ ಸೇರಿದಂತೆ ಇತರರಿದ್ದರು. 

ಅರ್ಬನ್ ಬ್ಯಾಂಕ :ಬ್ಯಾಂಕಿನ ಅಧ್ಯಕ್ಷ ಶೇಖರ ಅಂಗಡಿ,ಧ್ವಜಾರೋಹಣ ನೆರವೇರಿಸಿದರು, ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಗಿರಿಮಲ್ಲಪ್ಪ ಕಬಾಡಿ, ಶ್ರೀಶೈಲ ಹಿಪ್ಪರಗಿ, ಫಕ್ರುದಿನ ಕುಂಟೋಜಿ,ಮಹಾದೇವ ಮಾರಪೂರ,ಮಹೇಶ ಮುಕುಂದ, ಅಶೋಕ ಅಂಗಡಿ,ಸಿಂಬ್ಬದಿಗಳಾದ ಶಿವಲಿಂಗ ಗುಣದಾಳ, ಶಂಕರ ಹಿಕಡಿ, ಮಹಾಲಿಂಗಪ್ಪ ಗುಜ್ಜರ, ಈರಪಯ್ಯ ಮಠದ, ಸುನೀತಾ ಹುಬ್ಬಳ್ಳಿ, ರಾಜು ಕಾಗಿ,ಅಪ್ಪು ದಂಡಿನ, ಇತರರಿದ್ದರು. 

ಶ್ರೀ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರಭುಲಿಂಗೇಶ್ವರ ಬ್ಯಾಂಕ್, ದಾನಮ್ಮ ದೇವಿ ಮಹಿಳಾ ಸೊಸೈಟಿ, ಸೇರಿದಂತೆ, ನಗರದ ವಿವಿಧಡೆಗಳಲ್ಲಿ ವಿಜೃಂಭಣೆಯಿಂದ ಸ್ವತಂತ್ರೋತ್ಸವ ದಿನಾಚರಣೆ ಜರಗಿತು.