ಫೆ. 12ರಿಂದ 15ರ ವರೆಗೆ ಗುಳೇದಕೊಪ್ಪದಲ್ಲಿ ಅದ್ಧೂರಿ ಜಾತ್ರೆ,
A grand fair will be held in Guledakoppa from Feb. 12 to 15.

* ದಶಕಗಳ ಬಳಿಕ ಮರುಕಳಿಸಿದ ವೈಭವ
* 200 ವರ್ಷಗಳ ಇತಿಹಾಸ ಹೊಂದಿರುವ ಗುಳೇದಕೊಪ್ಪದ ಶ್ರೀ ಈಶ್ವರ ದೇವರ ಪ್ರಥಮ ಶಿವ ರಥೋತ್ಸವ ದಶಕಗಳ ಬಳಿಕ ಮೊದಲ ಬಾರಿ ಶಿವನ ರಥೋತ್ಸವ ನಟ ಶರಣ, ನಟಿ ಮಾಲಾಶ್ರೀ ಭಾಗಿ
* ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪಾರ್ಚನೆ* 7 ದಿನ ನಿರಂತರ ಅನ್ನದಾಸೋಹ
ಧಾರವಾಡ (ಗುಳೇದಕೊಪ್ಪ) 10: ಧಾರವಾಡ ಜಿಲ್ಲೆಯ ಸುಕ್ಷೇತ್ರ ಗುಳೇದಕೊಪ್ಪ ಗ್ರಾಮದಲ್ಲಿ ಫೆಬ್ರವರಿ 12ರಿಂದ 16ರವರೆಗೆ ಅದ್ಧೂರಿ ಜಾತ್ರೆ ಹಾಗೂ ಶಿವ ರಥೋತ್ಸವ ನಡೆಯಲಿದೆ.
ಹೀಗಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ದಶಕಗಳ ನಂತರ ಮೊದಲ ಸಲ ಶಿವ ರಥೋತ್ಸವ ನಡೆಯುತ್ತಿದ್ದು,ಜಾತ್ರೆಗೆ ರಾಜ್ಯದ ವಿವಿಧ ಭಾಗದಲ್ಲಿರುವ ಬಂದು-ಬಳಗ, ಸ್ನೇಹಿತರು ಕುಟುಂಬ ಸಮೇತರಾಗಿ ಗ್ರಾಮಕ್ಕೆ ಲಗ್ಗೆ ಇಡುತ್ತಿದ್ದಾರೆ. ಗ್ರಾಮದ ಪ್ರತಿ ಬೀದಿಗಳನ್ನು ಶುಚಿಗೊಳಿಸಲಾಗಿದ್ದು, ತಳಿರು, ತೋರಣ, ರಂಗೋಲಿ ಬಿಡಿಸಲಾಗುತ್ತಿದೆ. ಗ್ರಾಮ ಸಂಪೂರ್ಣವಾಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಫೆಬ್ರವರಿ 12ರಂದು ಬ್ರಾಹ್ಮಿ ಮುಹೂರ್ತದಲ್ಲಿ ಮಹಾ ಸಂಕಲ್ಪ ಹಾಗೂ ಗೋಮಾತೆ ಪೂಜೆ, ಮಹಾರುದ್ರಾಭಿಷೇಕ ಹಾಗೂ ಧ್ವಜಾರೋಹಣ ಮೂಲಕ ಜಾತ್ರೆಗೆ ಚಾಲನೆ ಸಿಗಲಿದ್ದು, ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೋಳಿ ಜಾತ್ರೆ ಉದ್ಘಾಟಿಸಲಿದ್ದಾರೆ.
ಬೈಲಹೊಂಗಲದ ಶ್ರೀ ಕ್ಷೇತ್ರ ಸುಖದೇವಾನಂದ ಆಶ್ರಮದ ಶ್ರೀ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಗ್ರಾಮದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ರಥ ನಿರ್ಮಿಸಲಾಗಿದ್ದು, ಫೆಬ್ರವರಿ 16ರಂದು ಸಂಜೆ 4 ಗಂಟೆಗೆ ಭಕ್ತರು ತೇರು ಎಳೆಯಲಿದ್ದಾರೆ.ಫೆ. 13ರ ಶುಕ್ರವಾರ ಮಧ್ಯಾಹ್ನ 3ಗಂಟೆಗೆ ಪೂರ್ಣ ಕುಭದೊಂದಿಗೆ ಗ್ರಾಮದಲ್ಲಿ ಶ್ರೀ ಈಶ್ವರ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಈ ವೇಳೆ ಚಂಡಿ ವಾದ್ಯ, ಡೊಳ್ಳು ಕುಣಿತ ಮತ್ತು ಬೊಂಬೆ ಕುಣಿತ ತಂಡಗಳು ಉತ್ಸವಕ್ಕೆ ಮೆರಗು ನೀಡಲಿವೆ. ಗಣಪತಿ ಪುಣ್ಯ ವಾಚನ ನವಗ್ರಹ ಶಾಂತಿ ಮಹಾರುದ್ರ ಹೋಮ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ಕಿತ್ತೂರು ಕಲ್ಮಠದ ಶ್ರೀ ಪರಮಪೂಜ್ಯ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿಗಳು,ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮೀಜಿಗಳು, ಆಶೀರ್ವಚನ ನೀಡಲಿದ್ದಾರೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಶಿವಲೀಲಾ ಕುಲಕರ್ಣಿ, ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ, ಬೆಳಗಾವಿ ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಶಿಂದೆ, ಬೆಳಗಾವಿ ಎಸ್ಪಿ ರಾಮರಾಜನ ಮುಖ್ಯ ಅತಿಥಿಗಳಾಗಿ ಆಗಮಸಾಲಿದ್ದಾರೆ.
ನಟ ಶರಣ, ಕನಸಿನ ರಾಣಿ ಮಾಲಾಶ್ರೀ ಭಾಗಿ ಫೆಬ್ರವರಿ 13ರಂದು ಚಲನಚಿತ್ರ ನಟ ಶರಣ ಕಾರ್ಯಕ್ರಮದಲ್ಲಿ ಭಾಗಿ ಅಗಲಿದ್ದು, ನೋಡು ಬಾ ಗುಳೇದಕೊಪ್ಪದ ಶಿವರಥೋತ್ಸವ ಭಕ್ತಿಗೀತೆ ಬಿಡುಗಡೆ ಮಾಡಲಿದ್ದಾರೆ. ಫೆಬ್ರವರಿ 13ರಂದು ನಟಿ ಮಾಲಾಶ್ರೀ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದು, ‘ಹರ ಹರ ಈಶ್ವರ’ ಹಾಡು ಬಿಡುಗಡೆ ಮಾಡಲಿದ್ದಾರೆ. ಫೆಬ್ರವರಿ 14ರಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಸಂಸದ ಗೋವಿಂದ ಕಾರಜೋಳ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ ಎನ್. ಶಶಿಕುಮಾರ, ಅಪರ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ, ಹು-ಧಾ ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಗಾಳಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಸಂಜೆ 5 ಗಂಟೆಗೆ ಶಿಕ್ಷಣ ಇಲಾಖೆ ಹಾಗೂ ಈಶ್ವರ ದೇವರ ಟ್ರಸ್ಟ್ ಸಹಯೋಗದಲ್ಲಿ ಶಿಕ್ಷಣ ಜಾಗೃತಿ ಕಾರ್ಯಕ್ರಮ ಇದೆ. ವಿವಿಧ ಮನರಂಜನ, ಸಾಂಸ್ಕೃತಿಕ ಹಾಗೂ ಹಾಸ್ಯ ಕಾರ್ಯಕ್ರಮ ಫೆ. 12ರಿಂದ 16ರ ವರೆಗೂ ಪ್ರತಿದಿನ ವಿವಿಧ ಮನರಂಜನ, ಸಾಂಸ್ಕೃತಿಕ ಹಾಗೂ ಹಾಸ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಚಲನಚಿತ್ರ ನಟ ಶರಣ, ನಟಿ ಮಾಲಾಶ್ರೀ, ಸರಿಗಮಪ, ಇಂಡಿಯನ್ ಐಡಲ್ ಖ್ಯಾತಿಯ ದಿಯಾ ಹೆಗಡೆ, ಬಾಳು ಬೆಳಗುಂದಿ, ಬಿಗ್ ಬಾಸ್ ವಿಜೇತ ಹನುಮಂತ ಲಮಾಣಿ, ಕಾಮಿಡಿ ಕಿಲಾಡಿ ತಂಡದ ಕೇ.ಆರ್ ಪೇಟೆ, ನಯನಾ, ಪ್ರವೀಣ ಗಸ್ತಿ ಸೇರಿ ಅನೇಕರು ಬರಲಿದ್ದಾರೆ. ಫೆಬ್ರವರಿ 15ರಂದು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ,ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ, ಹು-ಧಾ ಉಪ ಪೊಲೀಸ್ ಆಯುಕ್ತ ಮಹಾನಿಂಗ ನಂದಗಾವಿ ಬರಲಿದ್ದು, ರಾತ್ರಿ ಸವಾಲು ಭಜನಾ ಪದಗಳು ನಡೆಯಲಿವೆ. ಕೊನೆಯ ದಿನ ಸಂಜೆ 4ಕ್ಕೆ ಶಿವರಥೋತ್ಸವ ಇರಲಿದೆ. ನೂರಾರು ವರ್ಷಗಳ ಇತಿಹಾಸ ಇರುವ ಈಶ್ವರ ದೇವಸ್ಥಾನ ಆನೇಕ ಪವಾಡಗಳ ನೆಲೆಯಾಗಿದೆ.
ಪ್ರತಿ ವರ್ಷದಂತೆ ಈ ಸಲವೋ ಅದ್ಧೂರಿ ಜಾತ್ರಾ ಮಹೋತ್ಸವ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ವಿಶೇಷವಾಗಿ ಈಶ್ವರ ದೇವರ ನೂತನ ತೇರು ನಿರ್ಮಾಣ ಮಾಡಲಾಗಿದ್ದು, ಫೆಬ್ರವರಿ 16ರಂದು ್ರ್ರಥಮವಾಗಿ ತೇರು ಎಳೆಯಲೂ ನಿರ್ಧರಿಸಲಾಗಿದೆ. ಸತತ 5 ದಿನಗಳ ಕಾಲ ಮಹಾ ಗಣಪತಿ ಹೋಮ, ಮಹಾ ರುದ್ರಾಭಿಷೇಕ, ಗಣ ಹೋಮ ಸೇರಿದಂತೆ ನಿರಂತರ ಪೂಜೆ ಪುನಸ್ಕಾರ ನಡೆಯಲಿದೆ. ನಿರಂತರ ಅನ್ನ ದಾಸೋಹ ಕೈಗೊಳ್ಳಲಾಗಿದೆ. ಪ್ರತಿದಿನವೂ ವಿವಿಧ ಹೆಸರಾಂತ ಸ್ವಾಮೀಜಿ ಹಾಗೂ ಚಿಂತಕರಿಂದ ಪ್ರವಚನ ಹಾಗೂ ಆಶೀರ್ವಚನ ನಡೆಯಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 