ಧಾರವಾಡ 29: ಇಲ್ಲಿಯ ದೇಸಾಯಿ ಗಲ್ಲಿಯ ವಿಠ್ಠಲ ಮಂದಿರದಲ್ಲಿ ಗುರುವಾರ 28 ರಂದು ಸಂಭ್ರಮ ಸಡಗರದಿಂದ ವಿಠ್ಠಲ ಸ್ಮರಣೆಯ ಭಜನೆಯೊಂದಿಗೆ ಕಾರ್ತೀಕಮಾಸದ ವಾರ್ಷೀಕ ದೀಪೋತ್ಸವ ನೆರವೇರಿತು.
ಕಾರ್ತಿಕ ದೀಪೋತ್ಸವದ ಅಂಗವಾಗಿ ಹುಬ್ಬಳ್ಳಿಯ ಶ್ರೇಷ್ಠ ಕಲಾವಿದರಾದ ಅಶೋಕ ಕುಲಕರ್ಣಿಯವರು ದೇಣಿಗೆಯಾಗಿ ನೀಡಿದ ದಾಸಪರಂಪರೆಯ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರಿಂದ ಪ್ರಾರಂಭವಾದ ನಂತರ ಬಂದ ಎಲ್ಲ ದಾಸರ ಭಾವಚಿತ್ರವನ್ನು ಡಾ. ಶ್ರೀಧರ ಕುಲಕರ್ಣಿಯವರು ಅನಾವರಣಗೊಳಿಸಿದರು ಹಾಗೂ ವಾರ್ಷಿಕ ಕಾರ್ತಿಕೋತ್ಸವವನ್ನು ಬೆಂಗಳೂರಿನ ಪಂ. ರಘೋತ್ತಮಾಚಾರ್ಯ ಗಂಗೂರ ಅವರು ಉದ್ಘಾಟನೆ ನಡೆಯಿಸಿಕೊಟ್ಟರು. ಮಾಳಮಡ್ಡಿಯ ಕೃಷ್ಣ ಭಜನಾ ಮಂಡಳಿ, ದೇಸಾಯಿ ಗಲ್ಲಿಯ ಲಕ್ಷ್ಮೀವೆಂಕಟೇಶ ಭಜನಾ ಮಂಡಳಿ, ಕಾಮನಕಟ್ಟಿಯ ರುಕ್ಮಿಣೀ ಪಾಂಡುರಂಗ ಭಜನಾ ಮಂಡಳಿ ಭಾಗವಹಿಸಿದ್ದವು. ವಿಠ್ಠಲಮಂದಿರವನ್ನು ವಿದ್ಯುತ್ತಲಂಕಾರದಿಂದ ಅಲಂಕರಿಸಲಾಗಿತ್ತು. ಬಂದ ಎಲ್ಲ ಭಕ್ತಾದಿಗಳಿಗೆ ಅಲ್ಪೋಪಹಾರದ ವ್ಯವಸ್ಥೆಯನ್ನು ವಿಶ್ತ ಸಮೀತಿಯ ಪರವಾಗಿ ಮಾಡಲಾಗಿತ್ತು. ಗೌ. ಅಧ್ಯಕ್ಷ ಎಸ್. ಬಿ. ಗುತ್ತಲ, ಅರ್ಚಕರಾದ ಎಚ್. ವಾದಿರಾಜಾಚಾರ್ಯ, ಇಂಜಿನಿಯರ ಸಂಜಯ ಪಾಟೀಲ, ಪ್ರೋ ಆರ್.ಬಿ. ಗುತ್ತಲ, ವಿವೇಕ ಏರಿ, ಶ್ರೀಧರ ಕುಲಕರ್ಣಿ ದಂಪತಿಗಳು ಪಿ. ಬಿ. ಗುತ್ತಲ, ಭಾರತಿ ಮಾನ್ವಿ, ಶ್ರೀ ಎಸ್.ಬಿ. ದ್ವಾರಪಾಲಕ ದಂಪತಿಗಳು, ಅರುಂಧತಿ ಸಿದ್ಧಾಂತಿ, ಕೋಲ್ಹಾರ, ವೀಣಾ ವಾದಿರಾಜಾಚಾರ್ಯ ಮುಂತಾದ ಅನೇಕ ಭಕ್ತರು ಭಾಗವಹಿಸಿ ಶೋಭೆ ತಂದರು.
ಎಲ್ಲ ಭಕ್ತಾದಿಗಳಿಂದ ಶ್ರೀ ವಿಠ್ಠಲ ನಾಮಸ್ಮರಣೆಯನ್ನು ಡಾ. ಶ್ರೀಧರ ಕುಲಕರ್ಣಿ ನಡೆಯಿಸಿಕೊಟ್ಟರು. ಎಸ್. ಬಿ. ಗುತ್ತಲ ಅವರ ವಂದನಾರೆ್ಣಯೊಂದಿಗೆ ಮುಕ್ತಾಯವಾಯಿತು.