ಯರಗಟ್ಟಿ 02: ಸಮೀಪದ ಸತ್ತಿಗೇರಿ ಗ್ರಾಮದ ಅಯ್ಯಪ್ಪಸ್ವಾಮಿ ಸೇವಾ ಸಮೀತಿಯಿಂದ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನು ಸಂತರೆ್ಣ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಸತ್ತಿಗೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದ ಅವರು ಅಯ್ಯಪ್ಪನನ್ನು ಧರ್ಮಶಾಸ್ತಾ ಮತ್ತು ಮಣಿಕಂಠ ಎಂದೂ ಕರೆಯುತ್ತಾರೆ, ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಹಿಂದೂ ದೇವತೆ, ಅವನನ್ನು ಸಾಕಾರವಾಗಿ ಪರಿಗಣಿಸಲಾಗಿದೆ. ಧರ್ಮ, ಸತ್ಯ ಮತ್ತು ಸದಾಚಾರ ಮತ್ತು ಕೆಟ್ಟದ್ದನ್ನು ತೊಡೆದುಹಾಕಲು ಆಗಾಗ್ಗೆ ಕರೆಯುತ್ತಾರೆ. ಅಯ್ಯಪ್ಪನ ಮೇಲಿನ ಭಕ್ತಿಯು ದಕ್ಷಿಣ ಭಾರತದಲ್ಲಿ ಮೊದಲು ಪ್ರಚಲಿತದಲ್ಲಿದ್ದರೂ, ಅವನ ಜನಪ್ರಿಯತೆಯು 20 ನೇ ಶತಮಾನದ ಉತ್ತರಾರ್ಧದಲ್ಲಿ ಮಾತ್ರ ಹೆಚ್ಚಾಯಿತು ಹಿಂದೂ ಧರ್ಮಶಾಸ್ತ್ರದ ಪ್ರಕಾರ, ಅವನು ಹರಿಹರ (ವಿಷ್ಣು ಮೋಹಿನಿ, ಮತ್ತು ಶಿವನ ಮಗ). ಅಯ್ಯಪ್ಪನನ್ನು ಅಯ್ಯಪ್ಪ, ಸಾಸ್ತಾವು, ಹರಿಹರಸುಧನ್, ಮಣಿಕಂದನ್, ಶಾಸ್ತಾ ಅಥವಾ ಧರ್ಮ ಶಾಸ್ತಾ ಮತ್ತು ಶಬರಿನಾಥ ಎಂದೂ ಕರೆಯಲಾಗುತ್ತದೆ. 48 ದಿನಗಳ ಕಾಲ ಕಠಿಣ ವೃತಮಾಡಿ ಶಬರಿಮಲೆಗೆ ತೆರಳಿ ಮಕರಜ್ಯೋತಿ ಪುನೀತರಾಗುತ್ತಾರೆ.
ಈ ಸಾಲಹಳ್ಳಿ ರುದ್ರಗೌಡ ಗುರುಸ್ವಾಮಿ, ಕಟಕೋಳ ಚಂದ್ರಕಾತ ಗುರುಸ್ವಾಮಿ, ಸತ್ತಗೇರಿ ಈರಣ್ಣಾ ಗುರುಸ್ವಾಮಿ, ಕೋಡ್ಲಿವಾಡ ನಿಂಗಪ್ಪ ಗುರುಸ್ವಾಮಿ, ಸೊಪ್ಪಡ್ಲ ಮಹಾಂತೇಶ ಗುರುಸ್ವಾಮಿ, ತಲ್ಲೂರು ಪ್ರಶಾಂತ ಗುರುಸ್ವಾಮಿ, ಅಶೋಕ ಗುರುಸ್ವಾಮಿ,ಯರಗಟ್ಟಿ ಈರಣ್ಣಾ ಗುರುಸ್ವಾಮಿ, ಸ್ಥಳೀಯ ಮಾಲಾ ದಾರಿಗಳಾದ ಬಸನಗೌಡ ಪಾಟೀಲ, ಬಂಗಾರೆಪ್ಪ ಕಟ್ಟಿ, ಈರಣ್ಣಾ ನಾವಿ, ರಾಜು ಹಿರೇಮಠ, ಗುರುನಾಥ ಮಟ್ಟಿ, ಈರಣ್ಣಾ ಮಟ್ಟಿ, ಕುಮಾರ ಮಠಪತಿ, ಸಂತೋಷ ಪಾಟೀಲ, ರಾಮು ಮೇಸ್ತ್ರಿ, ಸೇರಿದಂತೆ ಸುತ್ತಲಿನ ಗ್ರಾಮಗಳ ಗುರುಸ್ವಾಮಿಗಳು ಹಾಗೂ ಮಾಲಾದಾರಿಗಳು ಇದ್ದರು.