ಲೋಕದರ್ಶನ ವರದಿ
ಒಳ್ಳೆ ವಿಚಾರದಿಂದ ಮನಸ್ಸನ್ನು ಶಾಂತಗೊಳಿಸಲು ಸಾಧ್ಯ
ರಾಯಬಾಗ 28: ಒಳ್ಳೆ ವಿಚಾರದಿಂದ ಮನಸ್ಸನ್ನು ಶಾಂತಗೊಳಿಸಲು ಸಾಧ್ಯ. ಅದಕ್ಕಾಗಿ ಒಳ್ಳೆ ಚಿಂತನೆಗಳನ್ನು ಬೋಧಿಸುವ ಆಧ್ಯಾತ್ಮಕ ಕೇಂದ್ರಗಳಿಗೆ ಭೇಟಿ ನೀಡಬೇಕೆಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಐನಾಪೂರ ಸೇವಾಕೇಂದ್ರದ ಸಂಚಾಲಕಿ ಶಶಿಕಲಾ ಅಕ್ಕನವರು ಕರೆ ನೀಡಿದರು.
ಗುರುವಾರ ಸಾಯಂಕಾಲ ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯ ರಾಯಬಾಗ ಕೇಂದ್ರ ವತಿಯಿಂದ 89ನೇ ತ್ರಿಮೂರ್ತಿ ಶಿವರಾತ್ರಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿವನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಪ ಕರ್ಮಗಳಿಂದ ಮುಕ್ತಿ ಹೊಂದಲು ಜಾಗೃತಿ ಆಗಿರುವುದೇ ಜಾಗರಣೆಯ ಅರ್ಥವಾಗಿದ್ದು, ಪರಮಾತ್ಮನಾಗಿರುವ ಶಿವನ ಧ್ಯಾನದಿಂದ ಮನುಷ್ಯ ಶಾಂತಿ ಹೊಂದಲು ಸಾಧ್ಯ ಎಂದರು.
ಸಿದ್ದೇಶ್ವರ ದೇವಸ್ಥಾನದ ಅರ್ಚಕ ವೇದಮೂರ್ತಿ ಬಸಯ್ಯಾ ನಿಶಾನಿಮಠ ಮಾತನಾಡಿ, ಮನುಷ್ಯ ಸನ್ಮಾರ್ಗದಲ್ಲಿ ನಡೆಯಲು ಗುರುವಿನ ಮಾರ್ಗದರ್ಶನ ಅವಶ್ಯವಾಗಿದೆ. ಮನುಷ್ಯ ಪೂರ್ಣತ್ವ ಪಡೆಯಲು ಪ್ರಯತ್ನ ಮಾಡಬೇಕೆಂದರು.
ಲೇಖಕ, ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಯಬಾಗ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ.ಪುಷ್ಪಾ ಅಕ್ಕನವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಮಕ್ಕಳಿಂದ ಸಾಂಸ್ಕೃತಿಕ ಶಿವನೃತ್ಯ ಕಾರ್ಯಕ್ರಮ ಜರುಗಿತು.
ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಪ್ರಶಾಂತ ಬಿರಾಜ, ಡಿ.ಎಲ್.ಮಿರ್ಜೆ, ಅನೀಲ ಕುಸ್ತಿಗಾರ, ಎ.ಬಿ.ಮಂಗಸೂಳೆ, ಲಗಮಣ್ಣ ಪಾಟೀಲ, ಸಂಗಣ್ಣ ದತ್ತವಾಡೆ, ಅಪ್ಪಾಸಾಬ ಮುಗಳಖೋಡ, ಬಿ.ಎಮ್.ಮಾಳಿ, ಅಮೋಘ ನಾಯಿಕ, ಮಹೇಶ ಹವಾಲ್ದಾರ ಸೇರಿ ಅನೇಕ ಭಕ್ತಾದಿಗಳು ಇದ್ದರು.
ಫೋಟೊ: 28 ರಾಯಬಾಗ 1
ಫೋಟೊ ಶೀರ್ಷಿಕೆ: ರಾಯಬಾಗ: ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿವನೃತ್ಯ ಕಾರ್ಯಕ್ರಮವನ್ನು ಲೇಖಕ, ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಉದ್ಘಾಟಿಸಿದರು. ಪುಷ್ಪ ಅಕ್ಕ, ಶಶಿಕಲಾ ಅಕ್ಕ, ಅಶೋಕ ಅಂಗಡಿ, ಡಿ.ಎಲ್.ಮಿರ್ಜೆ, ಪ್ರಶಾಂತ ಬಿರಾಜ, ಅನೀಲ ಕುಸ್ತಿಗಾರ ಇದ್ದರು.