ನಿಸ್ವಾರ್ಥದಿಂದ ಸಂಘಟನೆಯಲ್ಲಿ ತೊಡಗಿಕೊಂಡಾಗ ಸಂಘಟನೆಗೆ ಒಳ್ಳೆಯ ಹೆಸರು: ಯಮನಕ್ಕನವರ

A good name for organization when selflessly engaged in organization: Yamanakkanavara

ನಿಸ್ವಾರ್ಥದಿಂದ ಸಂಘಟನೆಯಲ್ಲಿ ತೊಡಗಿಕೊಂಡಾಗ ಸಂಘಟನೆಗೆ ಒಳ್ಳೆಯ ಹೆಸರು: ಯಮನಕ್ಕನವರ

ಬ್ಯಾಡಗಿ 30: ನಿಸ್ವಾರ್ಥದಿಂದ ವಾಲ್ಮೀಕಿ ಸಮಾಜ ಸಂಘಟನೆಯಲ್ಲಿ ತೊಡಗಿಕೊಂಡಾಗ ಸಂಘಟನೆಗೆ ಒಳ್ಳೆಯ ಹೆಸರು ಬರಲಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್‌.ಎನ್‌. ಯಮನಕ್ಕನವರ ಹೇಳಿದರು.ಅವರು ಪಟ್ಟಣದ ಮಹರ್ಷಿ ವಾಲ್ಮೀಕಿ ಸಭಾಭವನದಲ್ಲಿ ನಡೆದ ತಾಲೂಕಾ  ವಾಲ್ಮೀಕಿ ಯುವ ಘಟಕ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ತಾಲೂಕಿನಲ್ಲಿ ಯುವಕರು ವಾಲ್ಮೀಕಿ ಸಂಘಟನೆಯನ್ನು ಯಾವುದೇ ಸಂಘರ್ಷವಿಲ್ಲದೇ ಅಧ್ಬುತವಾಗಿ ಕಟ್ಟುವ ಜೊತೆಗೆ ಸಮಾಜಕ್ಕೆ ಮಾದರಿ ಸಂಸ್ಥೆಯಾಗುವಂತೆ ಪ್ರತಿಯೊಬ್ಬರೂ ನಡೆದುಕೊಳ್ಳಬೇಕಾಗಿದೆ. ವ್ಯಕ್ತಿ ನಡೆತೆಯಿಂದ  ನೀತಿಯಿಂದ ದೊಡ್ಡವನಾಗುತ್ತಾನೆ. ನಮ್ಮೊಳಗಿರುವ ರಾಗದ್ವೆಷ ಅಸುಯೆ ಗುಣ ಬದಿಗೊತ್ತಿ ಉತ್ತಮ ಸಂಸ್ಥೆ ಕಟ್ಟಬೇಕಾಗಿದೆ. ವಾಲ್ಮೀಕಿ ಸಂಘಟನೆಯತ್ತ ಹೆಚ್ಚು ಯುವಕರನ್ನ ಸೆಳೆಯಲು ಸಂಘಟನೆ ಮಾಡಿ,ಯುವಕರು ಹೆಚ್ಚಿನ ರೀತಿ ಒಲವು ತೋರಿಸುವಂತೆ  ಸಂಘಟನೆಗೆ ಒತ್ತು ನೀಡಿ, ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಯುವಕರು  ಈ ಸಂಸ್ಥೆಯತ್ತ ಬರುವಂತೆ  ಸಂಘಟನೆ ಮಾಡಿ ಎಂದು ಕರೆ ನೀಡಿದರುಪುರಸಭೆ ಸದಸ್ಯ ರಾಮಣ್ಣ ಕೋಡಿಹಳ್ಳಿ ಮಾತನಾಡಿ ಸಮಾಜ ಸಂಘಟನೆಗೆ ಸಮಯ ಪ್ರಜ್ಞೆ, ಶಿಸ್ತು ಮುಖ್ಯವಾಗಿದೆ. 

 ವಾಲ್ಮೀಕಿ ಜನಾಂಗವು ಶೆಕ್ಷ ಣಿಕ, ಆರ್ಥಿಕವಾಗಿ ಇನ್ನೂವರೆಗೂ ಸದೃಢವಾಗಿಲ್ಲ. ಊರು, ತಾಲೂಕು, ಜಿಲ್ಲೆಗೆ ಮಾತ್ರ ಸೀಮಿತವಾಗದೇ ರಾಜ್ಯ ವ್ಯಾಪಿ ಸಂಘಟನಾತ್ಮಕವಾಗಿ  ವಾಲ್ಮೀಕಿ, ನಾಯಕ, ತಳವಾರ ಸಮಾಜ ಒಗ್ಗೂಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷ ಣ, ಸಂಸ್ಕಾರ, ವಾಲ್ಮೀಕಿ ತತ್ವದ ಹಾದಿ ತಿಳಿಸುವುದು ಅಗತ್ಯವಾಗಿದೆ. ಬರುವ ದಿನಗಳಲ್ಲಿ ವಾಲ್ಮೀಕಿ ಸಮಾಜ ಇತರರಿಗೆ ಮಾದರಿಯಾಗಬೇಕು.ವಾಲ್ಮೀಕಿ ಸಮುದಾಯಕ್ಕೆ ಸರಕಾರದಿಂದ ವಿಶೇಷ ಸೌಲಭ್ಯಗಳಿವೆ. ಅವುಗಳನ್ನು ಸಮರ​‍್ಕವಾಗಿ ಬಳಸಿಕೊಳ್ಳಬೇಕು. ಸಂಘಟನೆ ಮೂಲಕ ವಾಲ್ಮೀಕಿ ಸಮಾಜ ಸೇವೆಗೆ ಮುಂದಾಗಬೇಕೆಂದರು.  

ಈ ಸಂದರ್ಭದಲ್ಲಿ ರಮೇಶ ಓಲೇಕಾರ, ಹೂನ್ನೂರ​‍್ಪ ಕಾಡಶಾಲಿ,  ಮಲ್ಲೇಶಪ್ಪ, ನಾಗಲಿಂಗಪ್ಪ ತಳವಾರ, ಪರಶುರಾಮ ಓಲೇಕಾರ, ಮೋಹನಕುಮಾರ ಸಿ ಹುಲ್ಲತ್ತಿ, ಹನುಮಂತಪ್ಪ ಮ್ಯಾಗೇರಿ, ಬಿದ್ದಾಡೆಪ್ಪ, ಮಂಜುನಾಥ ತುಮರಿಕೂಪ್ಪ,ನಿಂಗಪ ಕೂಡಿಹಳ್ಳಿ, ನಾಗರಾಜ್ ರಾಮಣ್ಣನವರ ಇದ್ದರು.