ಲೋಕದರ್ಶನ ವರದಿ
ಗೋಕಾಕ 14: ಮಾನವನ ಬದುಕಿನಲ್ಲಿ ಕಿಶೋರಾವ್ಯವಸ್ಥೆ ಅತ್ಯಂತ ಮಹತ್ವದ ಘಟ್ಟ ಅನೇಕ ಮಾನಸಿಕ ದೈಹಿಕ ಹಾಗೂ ಸಾಮಾಜಿಕ ಬದಲಾವಣೆಗಳು ಈ ಹಂತದಲ್ಲಿ ಆಗುವುದರಿಂದ ಎಚ್ಚರದ ಹೆಜ್ಜೆ ಇಡಬೇಕಾಗುತ್ತದೆ. ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಅನೈತಿಕ ಸಾಗಾಣಿಕೆಗೆ ಒಳಗಾಗುವುದು, ಬಾಲಕಾಮರ್ಿಕ ಪದ್ಧತಿ, ಮುಂತಾದ ಸಮಸ್ಯೆಗಳಿಗೆ ಕಿಶೋರಿಯರು ತುತ್ತಾಗುವ ಸಾಧ್ಯತೆ ಇದೆ. ಕಾರಣ ಉತ್ತಮ ಶಿಕ್ಷಣ ಮತ್ತು ಸಂಸ್ಕಾರಗಳನ್ನು ಪಡೆದು ಕಿಶೋರಾವ್ಯವಸ್ಥೆಯನ್ನು ಯಶಸ್ವಿಯಾಗಿಸಬೇಕೆಂದು ಜಿಲ್ಲಾಗ್ರಾಹಕ ಮಾಹಿತಿ ಕೇಂದ್ರದ ಸಂಯೋಜಕ ಎಂ ಎಂಗಡಗಲಿ ಕಿಶೋರಿಯರಿಗೆ ಕರೆ ನೀಡಿದರು.
ಹೈದರಾಬಾದ್ ಮೈ ಚಾಯ್ಸ್ ಫೌಂಡೇಶನ್, ಆಪರೇಶನ್ ರೆಡ್ಅಲರ್ಟ ಯೋಜನೆ, ಮಹಿಳಾ ಕಲ್ಯಾಣ ಸಂಸ್ಥೆ, ಹಾಗೂ ಉಜ್ಜಲಾ ಮಹಿಳೆಯರ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಬೆಳಗಾವಿ ಜಂಟಿಯಾಗಿ ಆಯೋಜಿಸಿದ್ದ ಮಾನವ ಕಳ್ಳ ಸಾಗಾಣಿಕೆತಡೆಕುರಿತು ಸರಕಾರಿ ಪ್ರೌಢ ಶಾಲೆ ಜೋಕಾನಟ್ಟಿ ಕಿಶೋರಿಯರಿಗೆ ಆಯೋಜಿಸಿದ್ದ ಕೌಶಲ್ಯ ವೃದ್ಧಿ ತರಬೇತಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಂಗಾತಿ ಕೌಟುಂಬಿಕ ಸಲಹಾ ಕೇಂದ್ರದ ಸಲಹಾಗಾರ ಸಂತೋಷ ಬಡಿಗೇರ ಮಾತನಾಡಿ ಸಮಸ್ಯೆಗಳ ನಿವಾರಣೆಗೆ ಜಾಗೃತಿ ಅಗತ್ಯ ಅಂಗಾಗಳ ಮಾರಾಟ, ಭಿಕ್ಷಾಟಣೆ, ವೈಶ್ಯಾವಾಟಿಕೆ, ಬಡತನ ಮುಂತಾದ ಕಾರಣಗಳಿಗಾಗಿ ಮಕ್ಕಳನ್ನು ಅಪಹರಿಸಿ ಮಾರಾಟ ಮಾಡಲಾಗುತ್ತಿದೆ. ಗ್ರಾಮೀಣ ಪರಿಸರದಲ್ಲಿಇನ್ನೂ ಬಾಲ್ಯವಿವಾಹ, ಬಾಲಕಾಮರ್ಿಕ ಸಮಸ್ಯೆಗಳು ಜೀವಂತವಾಗಿವೆ. ಸಮಾಜದ ಪ್ರತಿಯೊಬ್ಬರು ಇಂತಹ ಸಮಸ್ಯೆಗಳ ನಿವಾರಣೆಗೆ ಕೈ ಜೋಡಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯೋಪಾಧ್ಯ ಬಸವರಾಜ ನಾಡಗೇರಿ ಮಾತನಾಡಿ ವಿದ್ಯಾಥರ್ಿಗಳಿಗೆ ಇಂತಹ ವಿಷಯಗಳ ಜಾಗೃತಿ ಮೂಡಿಸುವದು ಇಂದಿನ ಅಗತ್ಯತೆಯಾಗಿದೆ. ಪಾಲಕರು ಕಷ್ಟಪಟ್ಟು ಮಕ್ಕಳನ್ನು ಬೆಳಿಸಿ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ ಅವುಗಳನ್ನು ಸರಿಯಾದ ದಾರಿಯಲ್ಲಿ ಹೋಗಿ ಸಾಕಾರಗೊಳಿಸಬೇಕಾದುದು ಮಕ್ಕಳ ಕರ್ತವ್ಯ ಎಂದರು. ಅನೈತಿಕ ಸಾಗಾಣಿಕೆ ತಡೆ ಕುರಿತು ಬೀದಿ ನಾಟಕ ಮತ್ತು ಕಿರು ಚಲನಚಿತ್ರ ಪ್ರದಶರ್ಿಸಲಾಯಿತು. ಎಚ್.ಎನ್. ಜೋಕಾನಟ್ಟಿ ನಿರೂಪಿಸಿ ಎಚ್. ಡಿ ಪಂಚಾಳ ವಂದಿಸಿದರು.