ಲೋಕದರ್ಶನ ವರದಿ
ಶೇಡಬಾಳ 22: ಉಗಾರ ಬುದ್ರುಕದಿಂದ ಉಗಾರ ಖುರ್ದ ಪಟ್ಟಣಕ್ಕೆ ಹೋಗುವ 2 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ರಸ್ತೆಯ ತುಂಬ ದೊಡ್ಡ ದೊಡ್ಡ ಹೊಂಡಗಳು ನಿಮರ್ಾಣವಾಗಿವೆ. ಈ ಹೊಂಡಗಳನ್ನು ತಪ್ಪಿಸಲು ಹೋಗಿ ಹಲವಾರು ಅಪಘಾತಗಳು ಸಂಭವಿಸಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ರಸ್ತೆಯು ಈ ಅವಸ್ಥೆಯನ್ನು ಹೊಂದಿದ್ದರು ಕೂಡ ಸಂಬಂದಪಟ್ಟ ಇಲಾಖೆಯವರು ಈ ರಸ್ತೆಯನ್ನು ರಿಪೇರಿ ಮಾಡದೇ ಇರುವುದು ಸೋಜಿಗದ ಸಂಗತಿಯಾಗಿದೆ. ಇನ್ನಾದರೂ ಅಧಿಕಾರಿಗಳು ಈ ರಸ್ತೆಯನ್ನು ರಿಪೇರಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟು ಅಮೂಲ್ಯ ಜೀವಗಳ ಪ್ರಾಣಹಾನಿವನ್ನು ತಪ್ಪಿಸುವಂತೆ ಶಾಲೆಗೆ ಹೋಗುವ ಮುದ್ದು ಮಕ್ಕಳು, ವಿದ್ಯಾಥರ್ಿಗಳು, ಸಾರ್ವಜನಿಕರು ಸಕರ್ಾರವನ್ನು ಒತ್ತಾಯಿಸಿದ್ದಾರೆ.
ಉಗಾರ ಬುದ್ರುಕದಿಂದ ಉಗಾರ ಖುರ್ದ ಪಟ್ಟಣಕ್ಕೆ ಹೋಗುವ 2 ಕಿ.ಮೀ. ರಸ್ತೆಯು ಕಾಗವಾಡ-ಜಮಖಂಡಿ ರಾಜ್ಯ ಹೆದ್ದಾರಿಯಾಗಿದ್ದು, ಈ ರಸ್ತೆಯ ಮೂಲಕ ದಿನಾಲೂ ಸಾವಿರಾರು ವಾಹನಗಳು ಮಿರಜ, ಸಾಂಗಲಿ, ಕೊಲ್ಹಾಪೂರ, ಪುಣೆ, ಮುಂಬೈ, ಕುಷ್ಟಗಿ, ಇಳಕಲ್ಲ, ಬಳ್ಳಾರಿ, ಜಮಖಂಡಿ, ಬಾಗಲಕೋಟ, ಬದಾಮಿ, ಮುಧೋಳ, ಮಹಾಲಿಂಗಪೂರ ಮೊದಲಾದ ನಗರಗಳಿಗೆ ಸಂಚರಿಸುತ್ತಿವೆ.
ಆದರೆ ಉಗಾರ ಬುದ್ರುಕದಿಂದ ಉಗಾರ ಖುರ್ದ ಪಟ್ಟಣಕ್ಕೆ ಹೋಗುವ 2 ಕಿ.ಮೀ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯ ತುಂಬೆಲ್ಲಾ ದೊಡ್ಡ ದೊಡ್ಡ ಹೊಂಡಗಳು ನಿಮರ್ಾಣಗೊಂಡಿವೆ. ಈ ರಸ್ತೆಯ ಮೇಲಿಂದ ಉಗಾರ ಬುದ್ರುಕ ಗ್ರಾಮದಿಂದ ಉಗಾರ ಖುರ್ದ, ಐನಾಪೂರ, ಕುಡಚಿ ಪಟ್ಟಣಗಳಿಗೆ ಮುದ್ದು ಮಕ್ಕಳು ಶಾಲಾ ವಾಹನಗಳ ಮೂಲಕ ದಿನಾಲೂ ಸಂಚರಿಸುತ್ತಾರೆ. ಈ ರಸ್ತೆಯ ಮೂಲಕ ಸಂಚರಿಸುವಾಗ ಮುದ್ದು ಮಕ್ಕಳು ತಮ್ಮ ಜೀವವನ್ನೇ ಕೈಯಲ್ಲಿ ಹಿಡಿದು ಮನದಲ್ಲಿ ದೇವರ ನೆನೆಸುತ್ತಾ ಸಂಚರಿಸುವ ಪರಿಸ್ಥಿತಿ ಬಂದೊದಗಿದೆ.
ಶಾಲೆಗೆ ಹೋಗಿ ಮುಟ್ಟಿದ ನಂತರ ಪಾಲಕರಿಗೆ ದೂರವಾಣಿಯ ಮೂಲಕ ಹೋಗಿ ಮುಟ್ಟಿರುವ ವಿಷಯವನ್ನು ತಿಳಿಸುವ ಪರಿಸ್ಥಿತಿ ಈ ರಸ್ತೆಯಿಂದಾಗಿದೆ. ಶಾಲೆಯಿಂದ ಮನೆಗೆ ಬರುವ ಮಕ್ಕಳು ಮನೆ ಸೇರುವವರೆಗೂ ಪಾಲಕರು ಜಾತಕ ಪಕ್ಷಿಗಳಂತೆ ತಮ್ಮ ಮಕ್ಕಳ ದಾರಿವನ್ನು ಕಾಯುವಂತಾಗಿದೆ. ಮಕ್ಕಳು ಮನೆಗೆ ಬಂದು ಶಾಲಾ ವಾಹನದಿಂದ ಕೆಳಗೆ ಇಳಿಯುವಾಗ ನಿಟ್ಟುಸಿರು ಬಿಡುವಂತಾಗಿದೆ.
ರಸ್ತೆ ಮೇಲಿಂದ ಹೋಗುವ ಬೈಕ್ ಸವಾರರು ಒಂದು ಹೊಂಡವನ್ನು ತಪ್ಪಿಸಲು ಹೋಗಿ ಇನ್ನೊಂದು ಹೊಂಡಕ್ಕೆ ಬಿದ್ದು ಅಪಘಾತಗಳು ಸಂಭವಿಸುತ್ತಿವೆ. ಮಳೆಯಾದರಂತು ಈ ರಸ್ತೆಯ ಮೇಲಿರುವ ಹೊಂಡಗಳಲ್ಲಿ ನೀರು ತುಂಬಿ ಹೊಂಡದ ಆಳ ಅರಿಯದೇ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಅನೇಕ ಅಮೂಲ್ಯ ಜೀವಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಲ್ಲಿಯವರೆಗೆ ಈ ರಸ್ತೆಯ ಮೇಲೆ ಅನೇಕ ಅವಘಡಗಳು ಸಂಭವಿಸಿದ್ದರು ಕೂಡ ಸಂಬಂಧಪಟ್ಟ ಇಲಾಖೆಯವರು ಕ್ಯಾರೇ ಅನ್ನುತ್ತಿಲ್ಲ.
ಕಳೆದ 10 ವರ್ಷಗಳಿಂದ ಈ ರಸ್ತೆ ಅವಸ್ಥೆ ಇದಾಗಿದ್ದರೂ ಕೂಡ ಸಂಬಂಧಪಟ್ಟ ಇಲಾಖೆಯವರಾಗಲಿ, ಜನ ಪ್ರತಿನಿಧಿಗಳಾಗಲಿ ಇತ್ತ ಕಡೆ ಗಮನ ಹರಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ.
ಕಾರಣ ಇನ್ನು ಮುಂದಾದರೂ ಸಂಬಂಧಪಟ್ಟ ಇಲಾಖೆಯವರು ಈ ರಸ್ತೆಯನ್ನು ರಿಪೇರಿಗೊಳಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.