ನೆಲದ ಸಂಸ್ಕೃತಿಗೆ ಜೀವ ತುಂಬಿದ ಜಾನಪದ ವೈವಿಧ್ಯಮಯ ಕಾರ್ಯಕ್ರಮ

ನೆಲದ ಸಂಸ್ಕೃತಿಗೆ ಜೀವ ತುಂಬಿದ ಜಾನಪದ ವೈವಿಧ್ಯಮಯ ಕಾರ್ಯಕ್ರಮ A folk variety show that brought life to the culture of the land Open in Google Translate • Feedback

ನೆಲದ ಸಂಸ್ಕೃತಿಗೆ ಜೀವ ತುಂಬಿದ ಜಾನಪದ ವೈವಿಧ್ಯಮಯ ಕಾರ್ಯಕ್ರಮ

ಧಾರವಾಡ 27:  ಸಾಹಿತಿ ಮಾರ್ತಾಂಡಪ್ಪ ಕತ್ತಿ“ಜಾನಪದ ಕಲೆಗಳು ನಮ್ಮ ಸಂಸ್ಕೃತಿಯ ಬೇರು ಹಾಗೂ ನಮ್ಮ ನೆಲದ ಆತ್ಮವಾಗಿದ್ದು, ಇವುಗಳನ್ನು ಉಳಿಸಿ ಬೆಳೆಸುವುದು ಮುಂದಿನ ತಲೆಮಾರಿನ ಜವಾಬ್ದಾರಿ ಅಲ್ಲದೇ  ಯುವಜನರು ಜಾನಪದ ಕಲೆಯನ್ನು ಅರ್ಥಮಾಡಿಕೊಂಡು ಮುಂದುವರಿಸಬೇಕು ಎಂದು ಸಾಹಿತಿ ಮಾರ್ತಾಂಡಪ್ಪ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಸಾಂಸ್ಕೃತಿಕ ಲೋಕ ಆರ್ಟ್‌ ್ಘ  ಕಲ್ಚರಲ್ ಅಕಾಡೆಮಿ ಧಾರವಾಡ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಇವರ ಸಹಯೋಗದಲ್ಲಿ ಕೋರ್ಟ್‌ ಸರ್ಕಲ್ ಹತ್ತಿರದ ಎಸ್‌. ಲೋಕ ಭವನದಲ್ಲಿ ಹಮ್ಮಿಕೊಂಡ ಜಾನಪದ ವೈವಿಧ್ಯಮಯ ಕಾರ್ಯಕ್ರಮದ ಅಡಿಯಲ್ಲಿ ಭರತನಾಟ್ಯ, ಜಾನಪದ ನೃತ್ಯ, ಡೊಳ್ಳು ಕುಣಿತ, ಸಂಗೀತ, ವೀರಗಾಸೆ, ಕಂಸಾಳೆ, ಪ್ರಶಸ್ತಿ ಪ್ರಧಾನದಂತಹ ವೈವಿಧ್ಯಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಕಾರ್ಯಕ್ರಮದಲ್ಲಿ ಜಾನಪದ ಕಲೆ, ಸಾಹಿತ್ಯ, ಸಂಗೀತ ಮತ್ತು ನೃತ್ಯಗಳ ಸೊಗಡನ್ನು ಒಟ್ಟಾಗಿ ಕಾಣುವ ಅವಕಾಶ ದೊರಕಿತು. ಹಾಗೂ ಜಾನಪದ ಗೀತೆಗಳು, ಜನಪದ ನೃತ್ಯಗಳು, ಕಂಸಾಳೆ, ವೀರಗಾಸೆ, ಲಾವಣಿ ಹಾಗೂ ಕಥನಗಳು ಎಲ್ಲರ ಮನಸ್ಸನ್ನು ಗೆದ್ದಿವೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ನಿವೃತ್ತ ಅಭಿಯಂತರರಾದ ಎಂ. ಎಸ್ ಫರಾಸ್, ಖ್ಯಾತ ಜನಪದ ಕಲಾವಿದರಾದ ಶಿವಾನಂದ ಅಮರಶೆಟ್ಟಿ, ಶಿಕ್ಷಕರಾದ ಸಂತೋಷ್ ಪೂರ್ವಿಮಠ, ಶಿವುಕುಮಾರ ಎನ್ ಮುಖಂಡರಾದ ಶ್ರೀಶೈಲಗೌಡ ಕಮತರ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ  ಮಲ್ಲಮ್ಮ ಯೋ. ಗೌಡರ್ ಮಾತನಾಡಿ ಈ ಜಾನಪದ ವೈವಿಧ್ಯಮಯ ಕಾರ್ಯಕ್ರಮವು ಸಾಂಸ್ಕೃತಿಕ ಜಾಗೃತಿಗೆ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಕು.ಆಯಿಷ ಅತ್ತಾರ, ಕಾರ್ತಿಕ ಗೋಸಾವಿ, ಪ್ರೀತಿ ಗೌಡರ ಈ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.ಅಕಾಡೆಮಿಯ ಅಧ್ಯಕ್ಷರಾದ ಸೈಯದ ಎ ಎಮ್ ನಿರೂಪಿಸಿದರು. ಕಲಾವಿದ ವಿದ್ಯಾರ್ಥಿನಿ ಮಂಜುನಾಥ ಪ್ರಾರ್ಥಿಸಿದರು. ವೆಂಕಟೇಶ ಸ್ವಾಗತಿಸಿದರು. ಅಪರ್ಣಾ ಗೌಡರ ವಂದಿಸಿದರು.ನಂತರ ನಡೆದ ಜಾನಪದ ಗೀತೆಗಳು, ಜನಪದ ನೃತ್ಯಗಳು, ಕಂಸಾಳೆ, ವೀರಗಾಸೆ, ಲಾವಣಿ ಹಾಗೂ ಕಥನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಗ್ರಾಮೀಣ ಬದುಕಿನ ್ಯ್ಝ್ದೂಹಿ್ಚ್ತ್ಝ್ದೂ, ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರದರ್ಶನಗಳು ಎಲ್ಲರ ಮನಸೂರೆಗೊಂಡವು.ಮಾರ್ತಾಂಡಪ್ಪ ಎಮ್ ಕತ್ತಿಶ್ರೀವಿಜಯ ಸಾಹಿತ್ಯ ಪ್ರಶಸ್ತಿ ಪುರಸ್ಕೃತರುಧಾರವಾಡ9844127466