ನಂದಿಹಳ್ಳಿಯಲ್ಲಿ ಸಂಭ್ರಮದ ಜೋಡಿ ಪಲ್ಲಕ್ಕಿ ಉತ್ಸವ

ನಂದಿಹಳ್ಳಿಯಲ್ಲಿ ಸಂಭ್ರಮದ ಜೋಡಿ ಪಲ್ಲಕ್ಕಿ ಉತ್ಸವ  A festive pair palanquin festival in Nandihalli

ಹೂವಿನ ಹಡಗಲಿ 13: ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ  ಮೂರನೇ  ಮಂಗಳವಾರ ಸೋಗಿ ವೀರಭದ್ರೇಶ್ವರಸ್ವಾಮಿ ಮತ್ತು ಕಂಠಿ ಬಸವೇಶ್ವರ ಸ್ವಾಮಿಯ ಜೋಡು ಪಲ್ಲಕ್ಕಿ  ಉತ್ಸವವು ಸಡಗರ ಸಂಭ್ರಮದಿಂದ  ಜರುಗಿತು. 

ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಬಂದ ಭಕ್ತರು ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ​‍್ಿಸಿದರು. ಹೂವುಗಳಿಂದ ಸಿಂಗಾರಗೊಂಡ ಪಲ್ಲಕ್ಕಿ ಉತ್ಸವದಭವ್ಯ ಮೆರವಣಿಗೆಯಲ್ಲಿ ಸಮಾಳ, ನಂದಿಕೋಲು, ಮಂಗಳ ವಾದ್ಯಗಳು ಮೆರಗು ತಂದವು. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಡೊಳ್ಳು ಕುಣಿತ ಜನರನ್ನು ಆಕರ್ಷಿಸಲಾಯಿತು.    

ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಡು ಪಲ್ಲಕ್ಕಿ ಉತ್ಸವದ ಮೆರವಣಿಗೆ ಜರುಗಿತು. ಶ್ರಾವಣಮಾಸದ ಮೂರನೇ  ಸೋಮವಾರ ಸಂಜೆ ಸೋಗಿ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಬರಮಾಡಿಕೊಳ್ಳಲಾಯಿತು. ಬೆಳಿಗ್ಗೆ ಕಂಠಿ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಗ್ರಾಮದ ಸುತ್ತಮುತ್ತಲಿನಿಂದ ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು. ದೇಗುಲದ ಪದಾಧಿಕಾರಿಗಳು ಉತ್ಸವದ ಉಸ್ತುವಾರಿ ವಹಿಸಿಕೊಂಡಿದ್ದರು.