ರಾಣೇಬೆನ್ನೂರು ಈದ್ಗಾ ಮೈದಾನದಲ್ಲಿ ಸಂಭ್ರಮದ ರಂಜಾನ್.
ರಾಣೇಬೆನ್ನೂರು 02 : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಪಟ್ಟಣದಲ್ಲಿ ಸೋಮವಾರ ಈದ್ ಉಲ್ ಫಿತ್ ಹಬ್ಬವನ್ನು ಮುಸ್ಲಿ ಬಾಂಧವರು ಸಡಗರ ಸಂಭ್ರಮ ಹಾಗೂ ಶ್ರದ್ದಾ ಭಕ್ತಿಯಿಂದ ಆಚರಿಸಿದರು.ಇಲ್ಲಿನ ಮಾರುತಿನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿ ಬಾಂಧವರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಖತೀಬ ಗಲ್ಲಿಯ ಜಾಮಿಯಾ ಮಸೀದಿಯ ಮೌಲ್ವಿಗಳಾ ಜಾಫರ್ ಖತೀಬ್ ಅವರು ಈದ್ ಉಲ್ ಫಿತ್ರೆ ಕುರಿತು ತಮ್ಮ ಸಂದೇಶವನ್ನು ನೀಡಿದರು. ಆವರಣದ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ಕುಡಿಯುವ ನೀರು, ಬೋಂದೇ ಉಂಡೆ ಮತ್ತು ತಂಪು ಪಾನೀಯಗಳನ್ನು ವಿತರಿಸಲಾಯಿತು.ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲ ಹೊಸ ಬಟ್ಟೆ ಧರಿಸಿದ್ದರು. ಎಲ್ಲ ಕಡೆ ಬಡವರಿಗೆ ಧಾನ, ಧರ್ಮ ಮಾಡುವುದು ಕಂಡು ಬಂದಿತು. ಅಲ್ಲಲ್ಲಿ ಸೌಹಾರ್ದ ಇಪ್ತಾರ್ಕೂಟ ಆಯೋಜಿಸಲಾಗಿತ್ತು. ಹಿಂದೂ ಸಮುದಾಯದವರನ್ನು ಕೂಡ ಮನೆಗೆ ಕರೆದು ಪಾಯಸ ( ಸಿರಕುಂಬಾ) ವಿತರಿಸಿದರು. ಸಂಭ್ರಮಿಸಿದರು.ತಾಲ್ಲೂಕಿನ ತುಮ್ಮಿನಕಟ್ಟಿ, ಮೇಡೇರಿ, ಹಲಗೇರಿ, ಐರಣಿ, ಅಸುಂಡಿ, ಚಳಗೇರಿ ಮುಂತಾದ ಗ್ರಾಮಗಳಲ್ಲೂ ಮುಸ್ಲಿ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಶಾಸಕ ಪ್ರಕಾಶ ಕೋಳಿವಾಡ, ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎಚ್.ಎಫ್. ಬಿದರಿ, ಈದ್ಗಾ ಕಮಿಟಿಯ ಅಧ್ಯಕ್ಷ, ಮಾಜಿ ಅಧ್ಯಕ್ಷ ಇಜಾಜ್ಖಾನ್ ಸೌದಾಗಾರ, ಮೆಹಬೂಬ್ ಕಿಲ್ಲೇದಾರ, ನಗರಸಭೆ ಸದಸ್ಯರಾದ ಹಬೀಬುಲ್ಲಾ ಕಂಬಳಿ, ನೂರುಲ್ಲಾ ಖಾಜಿ, ರಫೀಕ್ ಬಳ್ಳಾರಿ, ಇರ್ಫಾನ ದಿಡಗೂರ, ಶೇರುಖಾನ್ ಕಾಬೂಲಿ, ನೂರುಲ್ಲಾಖಾನ ಬ್ಯಾಡಗಿ, ರಫೀಕ ಮೆಣಸಿನಕಾಯಿ, ಜಬೀ ದಾವಣಗೇರಿ, ಇಮ್ರಾನ್ ಶಿರೇದ, ದಾವಣಗೆರೆ ರಫೀಕ್, ವಾಹಬ್ ಶಾಫಿ, ನೂರುಲ್ಲಾ ಖಾಜಿ, ನೂರುಲ್ಲಾಸಾಬ್ ಹಲಗೇರಿ, ಭಾಷಾಸಾಬ್ ಕಾಟೇನಹಳ್ಳಿ, ಸಲೀಂ ಜವಳಿ , ರಫೀಕ್ ಬಳ್ಳಾರಿ, ಇರ್ಫಾನ್ ದಿಡಗೂರ, ಮಸ್ತಕ್ ಅಹ್ಮದ್ ದಾರೂಗಾರ, ಮಜೀದ್ ಅಹ್ಮದ್ ಹರಪನಹಳ್ಳಿ, ಕಾಶೀಮ್ಸಾಬ್ ದೊಡ್ಡಮನಿ, ಖತೀಬ್ ಸೇರಿದಂತೆ ಸಾವಿರಾರು ಮುಸ್ಲಿ ಬಾಂಧವರು ಭಾಗವಹಿಸಿದ್ದರು. ನಗರ ಠಾಣೆಯ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.ರಾಣೇಬೆನ್ನೂರಿನ ಮಾರುತಿ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಭಾಂದವರು ಈದ್ ಉಲ್ ಫಿತ್ರ ( ರಂಜಾನ್ ) ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶಾಸಕ ಪ್ರಕಾಶ ಕೋಳಿವಾಡ, ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಶೇರುಖಾನ್ ಖಾಬೂಲಿ ಇದ್ದರು. ಮತ್ತು ಮುಸ್ಲಿಂ ಬಾಂಧವರು ಇದ್ದರು.