ಗಮನ ಸೆಳೆವ, ಮಾಹಿತಿ ನೀಡುವ ಛಾಯಾಚಿತ್ರ ಪ್ರದರ್ಶನ

ಗದಗ 24: ರಾಜ್ಯ ಸಕರ್ಾರ  ಮೊದಲಿನ ನೂರು ದಿನಗಳಲ್ಲಿ ಎದುರಿಸಿದ ನೈಸಗರ್ಿಕ ವಿಪತ್ತಿನ ಭೀಕರ ನೆರೆ ಸಮಸ್ಯೆ ಅದನ್ನು ಸಮರ್ಥವಾಗಿ ಎದುರಿಸಿದ ಹಾಗೂ ಜನತೆಯ ಅಭಿವೃದ್ಧಿಗಾಗಿ ಕೈಕೊಂಡ ಯೋಜನೆ ಸಾಧನೆ,  ಮುಂತಾದ  ಕಾರ್ಯಕ್ರಮಗಳ ಪಕ್ಷಿನೋಟ ನೀಡಿ ಬಗ್ಗೆ ಜನರಿಗೆ ಮಾಹಿತಿ ನೀಡಲು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮೂರು ದಿವಸಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಸ್ಥಳೀಯ ಜಿಲ್ಲಾಡಳಿತ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇತರ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿದೆ.

ಕನರ್ಾಟಕ ಹಿಂದೆಂದೂ ಕಂಡರಿಯದ ನೆರೆಹಾವಳಿಯನ್ನು ಮಾನ್ಯ ಮುಖ್ಯ ಮಂತ್ರಿಗಳ ಮಾರ್ಗದರ್ಶನದಲ್ಲಿ  ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದವರೆಗೂ ಸಮರ್ಥವಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ದುಃಖಕ್ಕೆ ಸ್ಪಂದಿಸಿದೆ. 

ನೆರೆಹಾವಳಿಯಿಂದಾಗಿ  ಜನರು ಕಳೆದುಕೊಂಡ ಮನೆಗಳ ಪುನರ್ ವಸತಿ ವ್ಯವಸ್ಥೆ, ರಸ್ತೆ ಸಮಸ್ಯೆ, ಶಾಲೆಗಳ ಪುನರ್ ವಸತಿ ಮತ್ತು ದುರಸ್ಥಿ ಮುಂತಾದ ಸಮಸ್ಯೆಗಳಿಗೆ ಸಮರ್ಥವಾಗಿ, ವಿಪತ್ತು ನಿರ್ವಹಣೆ ಪರಿಹಾರಕ್ಕಿಂತಲೂ ಹೆಚ್ಚಿನ ಪ್ರಮಾಣದ ಹಣಕಾಸು ಪ್ರರಿಹಾರ ಘೋಷಿಸಿ ಸಂತ್ರಸ್ತರ ನೋವಿಗೆ  ಸ್ಪಂದಿಸಿದ ಅವರ ಪುನರ್ವಸತಿಗೆ ಮುಂದಾಗಿರುವದನ್ನು ಇಲ್ಲಿ ಕಾಣಬಹುದು. ಇದರ ಜೊತೆಗೆ ರಾಜ್ಯದ ಸರ್ವಜನ ಅಭಿವೃದ್ಧಿ ದೃಷ್ಟಿಯಿಂದ ಜಾರಿಗೋಳಿಸದ ಮಹತ್ವದ ಯೋಜನೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಯ ಯೋಜನೆ ಸೌಲಭ್ಯ. ಪ್ರಧಾನಮಂತ್ರಿ ರೈತ ಸಮಾನ ಯೋಜನೆಯ ಕೇಂದ್ರದ ಪಾಲಿನ ಹಣಕಾಸು ಸೌಲಭ್ಯಕ್ಕೆ ರಾಜ್ಯ ಸರ್ಕಾರ  ಪ್ರತಿ ಫಲಾನುಭವಿ ರೈತರಿಗೆ ಹೆಚ್ಚುವರಿಯಾಗಿ ವಾಷರ್ಿಕ 4 ಸಾವಿರ ರೂ. ನೀಡುವ ಸೌಲಭ್ಯ, ನೇಕಾರರ, ಮೀನುಗಾರರ ಸಾಲಮನ್ನ, ಐ.ಟಿ. ಬಿಟಿ ಅಭಿವೃದ್ಧಿ ಅವಿಷ್ಕಾರ ಪ್ರಾಧಿಕಾರದ ರಚನೆ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಉತ್ತೇಜನ ಮೂಲಕ ಉದ್ಯೋಗವಕಾಶಗಳ ಸೃಷ್ಟಿಗೆ ಯತ್ನ, ಕಲ್ಯಾಣ ಕನರ್ಾಟಕ ಅಭಿವದ್ಧಿಗೆ ಹೆಚ್ಚಿನ ಒತ್ತು,ಮುಂತಾದ ಸಕರ್ಾರದ ಹಲವು ಹತ್ತು ಹಲವು ಜನಪರ ಕಾರ್ಯಕ್ರಮಗಳ ರಾಜ್ಯದ ಕಿರುಮಾಹಿತಿ ಇಲ್ಲಿ ಪ್ರದರ್ಶಿಸಲಾಗಿದೆ. ರಾಜ್ಯ ಎದುರಿಸಿದ ಭೀಕರ ನೆರೆ ಹಾಗೂ ರಾಜ್ಯ ಸಕರ್ಾರ ಜಾರಿಗೆ ತಂದ ಜನಹಿತದ ಯೋಜನೆಗಳ ಕಿರುಚಿತ್ರವನ್ನು  ಛಾಯಾಚಿತ್ರ ಪ್ರದರ್ಶನದಲ್ಲಿ ಅಳವಡಿಸಿದ ಟಿವಿಯಲ್ಲಿ ಸದಾ ಪ್ರಸಾರವಾಗುತ್ತಿರುವುದನ್ನು ನೋಡಬಹುದಾಗಿದೆ.                             

ಗದಗ ಜಿಲ್ಲೆ: ಗದಗ ಜಿಲ್ಲೆಯು ಕೂಡಾ ಭೀಕರ ಪ್ರವಾಹಕ್ಕೆ ತುತ್ತಾಗಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಗದಗ ಜಿಲ್ಲಾಡಳಿತ ತ್ವರಿತ ಸ್ಪಂದನ ಮೂಲಕ ಕಾರ್ಯನಿರ್ವಹಿಸಿದ, ಮಾನ್ಯ ಮುಖ್ಯಮಂತ್ರಿಗಳು ಪ್ರವಾಹ ಪ್ರದೇಶಕ್ಕೆ, ಸಂತ್ರಸ್ತರ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಧೈರ್ಯ ಹೇಳಿದ್ದನ್ನು ನೆರೆ ಸಂಕಷ್ಟದಲ್ಲೂ ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಕೈಕೊಂಡ ಕ್ರಮಗಳ ಪಕ್ಷಿನೋಟ ಇಲ್ಲಿದೆ.