ಶಿರಹಟ್ಟಿ 07: ಪಟ್ಟಣದ ವರವಿ ರೋಡ ಹತ್ತಿರ ಜಮೀನಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ನಷ್ಟ ವಾಗಿದೆ. ಜಗನ್ನಾಥ ಹಣಗಿ ಎಂಬು ರೈತರ ಜಮೀನು ಅಗಿದೆ.
ಹಿಂಗಾರು ಬೆಳೆ ಬಿಳಿ ಜೋಳವನ್ನು ನಾಲ್ಕು ಎಕರೆ ಬಿತ್ತನೆ ಮಾಡಿಲಾಗಿತ್ತು. ಕಟಾವು ಮಾಡಿ ಸಂಗ್ರಹಿಸಿದ ತೆನೆ ಸಹಿತ ಬಿಳಿಜೋಳಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಜಮೀನು ಸಹಿತ ಬೆಳೆವು ಬೆಂಕಿಗೆ ಅಹುತಿಯಾಗಿದೆ.
ಜಮೀನಿನಲ್ಲಿ ಇರುವ ಕೊಳವೆ ಬಾವಿಯ ಮೀಟರ್ ಬೋರ್ಡ್ , ಪೈಪ್ ಗಳು,ವೈಯರ್, ಮತ್ತು 20 ಗಿಂತ ಹೆಚ್ಚಿನ ಪೇರಲ್ ಗಿಡಗಳು ಬೆಂಕಿ ಬಿದ್ದ ಸಂಪೂರ್ಣ ನಾಶವಾಗಿದೆ. ಎರಡು ಲಕ್ಷ ರೂಪಾಯಿ ಮೌಲ್ಯದ ಬೆಳೆ ಮತ್ತು ವಸ್ತುಗಳ ಬೆಂಕಿ ಕೆನೆಗೆ ಅಹುತಿಯಾಗಿವೆ.
ತಕ್ಷಣ ತಿಳಿದು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಶಿರಹಟ್ಟಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಎಸ್ ಬಿ ಶೇಗುಣಸಿ , ಪ್ರಮುಖ ಅಗ್ನಿಶಾಮಕ ದಳ ನಾಗರಾಜ್ ರಾಜಪೂರ,ವಾಹನ ತಂತ್ರಜ್ಞಾನದಳ ಎಚ್ ವಿ ಉದಯಕುಮಾರ್,ವಾಹನ ಚಾಲಕರು ಸುರೇಶ್ ನಾರಗಲ್ಲು, ಪ್ರೇಮಾನಂದ ಹಡಪದ್, ಎಂ ಸಿ ಜಗದೀಶ್, ವಾಲಿಕಾರ ಮೆಹಬೂಬ್ ಅಲಿ ಸನದಿ ಇತರರಿದ್ದರು.