ಮನರೇಗಾ ನೆರವಿನಿಂದ ಶಿಥಿಲವಾಗಿದ್ದ ಅಂಗನವಾಡಿ, ನೂತನ ಅಂಗನವಾಡಿಯಾಗಿ ನಿರ್ಮಾಣ
A dilapidated Anganwadi was rebuilt as a new Anganwadi with the help of Manrega.
ಲೋಕದರ್ಶನ ವರದಿ
ಮನರೇಗಾ ನೆರವಿನಿಂದ ಶಿಥಿಲವಾಗಿದ್ದ ಅಂಗನವಾಡಿ, ನೂತನ ಅಂಗನವಾಡಿಯಾಗಿ ನಿರ್ಮಾಣ
ಕಾರವಾರ 03: ಅದು ಹೆಚ್ಚೆಂದರೆ 50 ಮನೆಗಳಿರುವ ಪುಟ್ಟ ಗ್ರಾಮ. ಮಲೆನಾಡ ಪ್ರದೇಶ. ಸುತ್ತಲೂ ದಟ್ಟಾರಣ್ಯ. ಹೀಗೆ ಸುತ್ತಲು ಹಚ್ಚಹಸಿರನ್ನೆ ಹೊದ್ದು ನಿಂತಿರುವ ಹಳ್ಳಿಯಲ್ಲಿ ಈಗತಾನೇ ಚಿಗುರೊಡೆದು ಬೆಳೆಯುತ್ತಿರುವ ಚಿಕ್ಕ ಮಕ್ಕಳಿಗೆ ಮೊದಲ ಪಾಠಶಾಲೆಯಾಗಬೇಕಾದ ಅಂಗನವಾಡಿ ಕೇಂದ್ರದ ಕಥೆ ಕೇಳಿದರೆ ಮನಸ್ಸಿಗೆ ಬೇಸರವಾಗುತ್ತದೆ. ಮುರಿದು ಬಿದ್ದ ಹಂಚಿನ ಸೂರು, ಶಿಥಿಲಗೊಂಡ ಗೋಡೆಗಳು, ಆವರಣದ ತುಂಬ ಆಳೇತ್ತರಕ್ಕೆ ಬೆಳೆದು ನಿಂತ ಕಸ-ಕಂಠಿ. ಹೀಗೆ ಪಾಳು ಬಿದ್ದ ಹಳೆಯ ಶಾಲಾ ಕೊಠಡಿಯೇ ಮಕ್ಕಳ ಪಾಲಿಗೆ ಜ್ಞಾನ ದೇಗುಲ.! ಅಲ್ಲಿಯೇ ಭವಿಷ್ಯದ ಕನಸು ಹೊತ್ತು ಅಕ್ಷರಾಭ್ಯಾಸದಲ್ಲಿ ನಿರತ ಪುಟ್ಟ ಕಂದಮ್ಮಗಳು. ಅಸಹಾಯಕ ಸ್ಥಿತಿಯಲ್ಲಿ ಕರುಳು ಕಿವುಚಿ ನಿಂತ ಪಾಲಕರು. ಇಂತಹ ಕರುಣಾಜನಕ ಕಥೆಗೆ ಇತಿಶ್ರೀ ಹಾಡಲು ಮುಂದೆ ಬಂದದ್ದೂ ಮಾತ್ರ ಮಹಾತ್ಮ ಗಾಂಧಿ ನರೇಗಾ ಯೋಜನೆ.!
ಹೌದು., ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಬೆಡಸಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಕ್ಕೋಡ ಗ್ರಾಮದಲ್ಲಿ ಕಲಿಕೆಯ ಮೊದಲ ಮೆಟ್ಟಿಲಾಗಬೇಕಾದ ಅಂಗನವಾಡಿ ಕೇಂದ್ರ ಅವ್ಯವಸ್ಥೆಯ ಆಗರವಾಗಿತ್ತು. ಹೀಗೆ ಗ್ರಾಮದಲ್ಲಿ ಮಕ್ಕಳ ಕಲಿಕೆಗೆ ಬೇಕಾದ ಅಂಗನವಾಡಿ ಕಟ್ಟಡ ದುಸ್ಥಿತಿಯಲ್ಲಿದೆ ಎಂಬುದನ್ನು ತಿಳಿಯುತ್ತಿದ್ದ ಹಾಗೆಯೇ ಮಹಾತ್ಮ ಗಾಂಧಿ ನರೇಗಾ ಯೋಜನೆ ನೆರವಿಗೆ ಧಾವಿಸಿತು.
ಕ್ರಿಯಾಯೋಜನೆ ತಯಾರಿಸಿ ಮನರೇಗಾ ಯೋಜನೆಯಡಿ ಅಂದಾಜು 4.20 ಲಕ್ಷ ರೂ. ಅನುದಾನದ ಜೊತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿಯಿಂದ ತಲಾ 5 ಲಕ್ಷ ರೂ. ಅನುದಾನ ಪಡೆದು ಒಗ್ಗೂಡಿಸುವಿಕೆಯಡಿ ಒಟ್ಟು 14.20 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸುವ ಯೋಜನೆ ರೂಪಿಸಲಾಯಿತು. ನೂತನ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳುವ ಮೂಲಕ ಮಕ್ಕಳ ಭವಿಷ್ಯಕ್ಕೆ ಭದ್ರ ಭುನಾದಿ ಹಾಕಲಾಯಿತು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಅಧಿಕಾರಿಗಳು ಹಾಗೂ ಮನರೇಗಾ ತಾಂತ್ರಿಕ ಸಿಬ್ಬಂದಿಗಳ ನಿರಂತರ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಲ್ಲಿ ಸುಸಜ್ಜಿತ ಕಟ್ಟಡ ತಲೆ ಎತ್ತಿ ನಿಲ್ಲುವಂತಾಯಿತು.
ಈ ವೇಳೆ 155 ಮಾನವ ದಿನಗಳ ಸೃಜನೆಯೊಂದಿಗೆ 54,037 ರೂ. ಕೂಲಿ ಮೊತ್ತ ಹಾಗೂ 3,55,963 ರೂ. ಸಾಮಗ್ರಿ ಮೊತ್ತ ಪಾವತಿಸಲಾಯಿತು. ಆ ಮೂಲಕ ಗ್ರಾಮದಲ್ಲಿರುವ ಅಕುಶಲ ಕಾರ್ಮಿಕರಿಗೂ ಸ್ಥಳೀಯವಾಗಿ ಉದ್ಯೋಗ ಅವಕಾಶ ಕಲ್ಪಿಸಿ ಅನುಕೂಲ ಮಾಡಿಕೊಡಲಾಯಿತು. ಕಟ್ಟಡದ ಒಳಗೆ ಮತ್ತು ಹೊರಗೆ ಮಕ್ಕಳನ್ನು ಆಕರ್ಷಿಸಲು, ಕಲಿಕೆಗೆ ಪ್ರೋತ್ಸಾಹಿಸಲು ಮಕ್ಕಳ ಸ್ನೇಹಿ ಚಿತ್ತಾರ ಬಿಡಿಸಲಾಯಿತು. ಉತ್ತಮ ಗಾಳಿ, ಬೆಳಕು, ನೀರಿನ ವ್ಯವಸ್ಥೆ, ದಾಸ್ತಾನು ಕೊಠಡಿ, ಅಡುಗೆ ಕೋಣೆ, ಕಲಿಕಾ ಕೊಠಡಿ ಜೊತೆಗೆ ಆಟದೊಂದಿಗೆ ಪಾಠ ಎಂಬ ಪರಿಕಲ್ಪನೆಯಲ್ಲಿ ಆಟಿಕೆ ಮತ್ತು ಕಲಿಕಾ ಸಾಮಗ್ರಿಯನ್ನು ಒದಗಿಸಲಾಯಿತು.
ಪ್ರಸ್ತುತ 12 ಚಿಕ್ಕ ಕಂದಮ್ಮಗಳ ಭವಿಷ್ಯವನ್ನು ನೂತನ ಕಟ್ಟಡದಲ್ಲಿ ರೂಪಿಸಲಾಗುತ್ತಿದೆ. ಉತ್ತಮ ವ್ಯವಸ್ಥೆಯನ್ನು ಒಳಗೊಂಡ ಅಂಗನವಾಡಿ ಕೇಂದ್ರದಲ್ಲಿ ಉತ್ಸಾಹದಿಂದ ಮಕ್ಕಳು ಕಲಿಯುತ್ತಿರುವುದನ್ನು ನೋಡಿ ಪಾಲಕರು ಸಂತಸಗೊಂಡಿದ್ದಾರೆ ಮತ್ತು ಇವೆಲ್ಲಕ್ಕೂ ಮುಖ್ಯ ಕಾರಣವಾದ ಮಹಾತ್ಮ ಗಾಂಧಿ ನರೇಗಾ ಯೋಜನೆಗೆ ಮನಃಪೂರ್ವಕವಾಗಿ ಧನ್ಯವಾದ ಅರ್ಿಸುತ್ತಿದ್ದಾರೆ.
“ಮುಂಚೆ ಹಳೆಯ ಕಟ್ಟಡದಲ್ಲಿ ಪಾಠ ಮಾಡುವಾಗ ತುಂಬ ಹೆದರಿಕೆಯಾಗುತ್ತಿತ್ತು. ಮಕ್ಕಳ ಸುರಕ್ಷತೆ ಬಗ್ಗೆ ಆತಂಕವಾಗುತ್ತಿತ್ತು. ಮನರೇಗಾ ಯೋಜನೆ ಮತ್ತು ಇತರೆ ಅನುದಾನದಡಿ ನಮಗೆ ಹೊಸ ಕಟ್ಟಡ ನಿರ್ಮಿಸಿಕೊಟ್ಟಾಗಿನಿಂದ ಆತಂಕ ದೂರವಾಗಿದೆ. ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ.” ಅಂಗನವಾಡಿ ಶಿಕ್ಷಕಿ ರಾಧಾ ಬಿ ನಾಯ್ಕ.
“ಬೆಕ್ಕೋಡ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ಅವಶ್ಯಕತೆ ಇದೆ ಎಂದು ಗಮನಕ್ಕೆ ಬರುತ್ತಿದ್ದಂತೆ ಅಗತ್ಯ ಅನುದಾನ ಹೊಂದಿಸಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೊಸ ಕಟ್ಟಡ ನಿರ್ಮಿಸಿಕೊಡಲಾಗಿದೆ. ಮಕ್ಕಳ ಶಿಕ್ಷಣಕ್ಕೆ ಬೇಕಾದ ಪೂರಕ ಮೂಲಸೌಕರ್ಯ ವೃದ್ಧಿಗೆ ಸೂಕ್ತ ಕ್ರಮಕೈಗೊಳ್ಳಲಾಗಿದೆ.” ಟಿ.ವಾಯ್. ದಾಸನಕೊಪ್ಪ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್, ಮುಂಡಗೋಡ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 