ಲೋಕದರ್ಶನವರದಿ
ರಾಣೇಬೆನ್ನೂರು: ಜೂ.3: ರಾಜ್ಯದ ಹಾಲುಮತ ಸಮಾಜದ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಸಿದ್ಧರಾಮಯ್ಯ ಅವರ ಬಗ್ಗೆ ವಿಡಿಯೋ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿರುವ ಬೆಂಗಳೂರಿನ ನಿವಾಸಿ ಎಂದು ಹೇಳಲಾಗಿರುವ ಪುನೀತ್ ಕೆರೆಹಳ್ಳಿ ಇವನನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಆಗ್ರಹಿಸಿ ಬುಧವಾರ ಸ್ಥಳೀಯ ಹಾಲುಮತ ಮಹಾಸಭಾ ತಾಲೂಕಾ ಕುರುಬರ ಸಂಘದ ಯುವಮುಖಂಡರು ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ನ್ಯಾಯವಾದಿ ಮೃತ್ಯುಂಜಯ ಗುದಿಗೇರ ಅವರು ಪುನೀತ್ ಕೆರೆಹಳ್ಳಿ ಅವರು ಸಾಮಾಜಿಕ ಜಾಲತಾಣದ ತಮ್ಮ ಪೇಸ್ಬುಕ್ ಪ್ರೋಪೈಲ್ನಲ್ಲಿ ಗುರುತಿಸಿಕೊಂಡಿದ್ದು, ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಅವಹೇಳನಕಾರಿ " ಏ ಸಿದ್ಧರಾಮಯ್ಯ ಯಾರ ಬಗ್ಗೆ ಮಾತನಾಡಿದ್ದೀಯ" ಅಂತಾ ಯೋಚನೆ ಮಾಡಿ ಪ್ರಜ್ಞೆ ಇಟ್ಟುಕೊಂಡು ಮಾತಾಡಲೇ ಎಂಬ ಮಾತುಗಳನ್ನು ಮುಂದುವರೆಸುತ್ತಾ " ನಿನ್ನ ತಾಯಿಯ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಬಿಡುತ್ತೇನೆ" ಎನ್ನುವ ಮಾತುಗಳು ಹರಿಬಿಟ್ಟಿದ್ದಾನೆ. ಇದರಿಂದ ಸಮುದಾಯಕ್ಕೆ ನೋವುಂಟಾಗಿದೆ. ಕೂಡಲೇ ಈತನನ್ನು ಬಂಧಿಸಬೇಕು.
ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ಹಾಲುಮತ ಮಹಾಸಭಾದ ಅಧ್ಯಕ್ಷ ಮರಿಯಪ್ಪ ಪೂಜಾರ, ತಾಲೂಕಾ ಕುರುಬ ಸಂಘದ ಕಾರ್ಯದಶರ್ಿ ಮೃತ್ಯುಂಜಯ ಗುದಿಗೇರ, ನ್ಯಾಯವಾದಿ ಮಹೇಶ್ ಕಂಬಳಿ, ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ, ಆನಂದ ಹುಲಬನ್ನಿ, ಕಿರಣ್ ಗುಳೇದ್, ರಾಕೇಶ್ ಮೇಡ್ಲೇರಿ, ಚಂದ್ರಪ್ಪ ಕಂಬಳಿ, ಸಂಜೀವ ಬಿ.ಕೆ., ಕೋಟೆಪ್ಪ ಚಳಗೇರಿ, ನಾಗರಾಜ ತೊಣ್ಣೇರ, ಭರಮಪ್ಪ ಬಾಗಿಲವರ, ರೇವಣ್ಣೆಪ್ಪ ಅಡ್ಡಿ ಸೇರಿದಂತೆ ಸಮಾಜದ ಮತ್ತಿತರ ಗಣ್ಯರು, ಯುವಮುಖಂಡರು ಪಾಲ್ಗೊಂಡಿದ್ದರು.