ಇಂದು ಎಂಇಎಸ್ ಪುಂಡಾಟಿಕೆ ಖಂಡಿಸಿ ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರಿನಲ್ಲಿಉಗ್ರ ಪ್ರತಿಭಟನೆಗೆ ನಿರ್ಧಾರ

A decision has been made to hold a violent protest in Ranebennur, the gateway to North Karnataka, to

ಇಂದು ಎಂಇಎಸ್ ಪುಂಡಾಟಿಕೆ ಖಂಡಿಸಿ ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರಿನಲ್ಲಿಉಗ್ರ ಪ್ರತಿಭಟನೆಗೆ ನಿರ್ಧಾರ

ರಾಣೇಬೆನ್ನೂರು 21: ಎಂ.ಇ.ಎಸ್‌. ಪುಂಡಾಟಿಕೆ ಖಂಡಿಸಿ 22 ರಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರಿನಲ್ಲೂ ಉಗ್ರ ಪ್ರತಿಭಟನೆಗೆ ನಿರ್ಧರಿಸಲಾಯಿತು.  

ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್‌. ಪಾಟೀಲರ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಈ ಸಂಬಂಧ ವಿವಿಧ ಕನ್ನಡಪರ, ರೈತಪರ, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿ ಚರ್ಚಿಸಿ ಅಂತಿಮವಾಗಿ ವಾಣಿಜ್ಯ ನಗರಿ ರಾಣೇಬೆನ್ನೂರಿನ ಕೆ.ಇ.ಬಿ. ಗಣೇಶ ದೇವಸ್ಥಾನದಿಂದ ಬೆಳಗೆ 11 ಘಂಟೆಗೆ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಕೇಂದ್ರ ಬಸ್ ನಿಲ್ದಾಣದ ಹತ್ತಿರ ರಸ್ತೆತಡೆ ಮಾಡಿಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಎಂ.ಇ.ಎಸ್‌. ಸಂಘಟನೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮನವಿ ಅರ​‍್ಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.ಸಭೆಯಲ್ಲಿ ಮಾತನಾಡಿದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಗಣೇಶ ಕೆ.ಗೋಣೆಮ್ಮನವರ, ಕರುನಾಡಕಾರ್ಮಿಕರಜಿಲ್ಲಾಧ್ಯಕ್ಷ ಮಂಜುನಾಥಕೋಲಕಾರ, ನಾಳೆಯ ಪ್ರತಿಭಟನೆಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿದ್ದು ನಗರದ ಪ್ರತಿಯೊಬ್ಬ ನಾಗರಿಕರು ಈ ಪ್ರತಿಭಟನೆಯಲ್ಲಿ ಬಂದು ಭಾಗವಹಿಸಬೇಕು, ವ್ಯಾಪಾರಸ್ಥರುಅಂಗಡಿ, ಹೊಟೇಲ್ ಮುಗ್ಗಟುಗಳ ಮಾಲೀಕರುಎಲ್ಲಾ ಸಂಘಟನೆಗಳು, ನ್ಯಾಯವಾದಿಗಳು ಬೆಂಬಲಿಸಬೇಕೆಂದು ಮನವಿ ಮಾಡಿದರು.  

      ಸಭೆಯಲ್ಲಿ ಮಂಜುನಾಥದುಗ್ಗತ್ತಿ, ಕೊಟ್ರೇಶಪ್ಪಎಮ್ಮಿ, ನಾಗರಾಜ ಮಡಿವಾಳರ, ಮಾಂತೇಶ ಸಾರಂಗಮಠ, ಮಲ್ಲಿಕಾರ್ಜುನ ಸಾವಕ್ಕಳವರ, ಶಿದ್ದ್ದಾರೂಡ ಗುರುಂ, ರಿಯಾಜ್‌ಅಹ್ಮದದೊಡ್ಡಮನಿ, ಪರಮೇಶ ಅರಳಿಕಟ್ಟಿ, ಸಂಜೀವರಡ್ಡಿ ಸೋಮರಡ್ಡಿ, ಭಾಷಾಸಾಬ ಪಂಪಾಪಟ್ಟಣ, ಪ್ರಭಾಕರ ಬಸನಾಳ, ಕಿರಣ ಗುಳೇದ, ರೇಣುಕಾ ಲಮಾಣಿ, ಐಶ್ವರ್ಯ ಮಡಿವಾಳರ, ಪರಶುರಾಮಕುರುವತ್ತಿ, ಅಣ್ಣಪ್ಪ ಜೆ.ಸಿ, ಮಂಜುನಾಥ ಸಂಬೋಜಿ, ಎಂ.ಡಿ. ಮಳಲಿ ಮುಂತಾದ ನೂರಾರು ಮುಖಂಡರು ಭಾಗಹಿಸಿದ್ದರು.