ಮಹಾಶಿವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು

A cultural program on the occasion of Mahashivratri attracted attention

ಮಹಾಶಿವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು 

ಕೊಪ್ಪಳ 01: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ”ಸಾಂಸ್ಕೃತಿಕ ಮಹೋತ್ಸವ " ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು. ವಿವಿಧ ಶಾಲೆಗಳಿಂದ ಮಕ್ಕಳು ಆಗಮಿಸಿ ಸಂಗೀತ, ನೃತ್ಯ, ರೂಪಕಗಳ ಮೂಲಕ ಜನಮನ ಸೆಳೆದರು. ಸಾರ್ವಜನಿಕರು ಮಕ್ಕಳ ಅದ್ಭುತ ಪ್ರತಿಭೆಯನ್ನು ನೋಡಿ ಮಂತ್ರಮುಗ್ಧರಾದರು. ಬ್ರಹ್ಮಕುಮಾರಿ ಯೋಗಿನಿ ಅಕ್ಕ ಮಕ್ಕಳಿಗೆ ಶುಭ ಹಾರೈಸುತ್ತಾ ಪ್ರತಿ ಮಗು ಪ್ರತಿಭೆಗಳ ಪುಂಜ ಆ ಪ್ರತಿಭೆಯನ್ನು ಹೊರೆ ತರಲು ಒಳಗೆ ಸೂಪ್ತವಾಗಿರುವ ಕಲೆ, ಸಂಸ್ಕಾರ ರೂಪದಲ್ಲಿರುವ ಕಲೆ ಪ್ರತಿಭೆಯನ್ನು ರೂಪದಲ್ಲಿ ಹೊರಬರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಶಿಕ್ಷಕರು, ಪಾಲಕರು, ಪೋಷಕರು ಪ್ರೋತ್ಸಾಹಿಸಬೇಕು ಪ್ರಶಂಸಿಸಬೇಕು. ನೊಂದ ಮನಗಳಿಗೆ ಮುದ ನೀಡುವ ಶಕ್ತಿ ಸಂಗೀತಕ್ಕಿದೆ.  

ಬೇಸರಗೊಂಡ ಮನಕ್ಕೆ ಖುಷಿಯನ್ನು ನೀಡುವ ಶಕ್ತಿ ನೃತ್ಯಕ್ಕಿದೆ. ಜೀವನವೇ ಒಂದು ಕಲಾ ಸೌಂದರ್ಯದ ಪುಂಜ ನಮ್ಮ ನಾಡಿನ ಕಲೆ ಸಾಹಿತ್ಯ ಸಂಗೀತಕ್ಕೂ ಆಧ್ಯಾತ್ಮಕ್ಕೂ ಅನ್ಯೋನ್ಯ ಸಂಬಂಧವಿದೆ ಕಲೆ, ಸಾಹಿತ್ಯ, ಸಂಸ್ಕೃತಿಯ ಆಶ್ರಯ ತಾಣವೇ ದೇವಾಲಯ. ಇಲ್ಲಿ ಶಿಲ್ಪಕಲೆ, ಸಂಗೀತ ಕಲೆ, ನೃತ್ಯ ಕಲೆ ಇದೆ. ಯಾವುದೇ ಕಲೆ ಸಾಹಿತ್ಯ ಸಂಗೀತ ಜನರ ಜೀವನದಲ್ಲಿ ಮೌಲ್ಯ ಬಿತ್ತುವಂತಾಗಿರಬೇಕು ಜನರ ಅಂತರಂಗವನ್ನು ಅರಳಿಸುವಂತದ್ದಾಗಿರಬೇಕು. ಚಂಚಲ ಮನಸ್ಸನ್ನು ಪರಮಾತ್ಮನ ಕಡೆಗೆ ಕೊಂಡೊಯ್ಯುವಂತದ್ದಾಗಿರಬೇಕು. ಇಂತಹ ಸಂಗೀತ, ನೃತ್ಯಕ್ಕೆ ಪ್ರೋತ್ಸಾಹಿಸಿದಾಗ ಸಮಾಜದಲ್ಲಿ ನೈತಿಕ ಮೌಲ್ಯಗಳು ಜಾಗೃತವಾಗುತ್ತವೆ. ಸಚ್ಚಾರಿತ್ರ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು. ವಿವಿಧ ಶಾಲೆಗಳಿಂದ ಬಂದ ಮಕ್ಕಳಿಗೆ ಪಾಲಕ, ಪೋಷಕರಿಗೆ, ಶಿಕ್ಷಕರಿಗೆ ಈಶ್ವರೀಯ ಉಡುಗೊರೆ ನೀಡಲಾಯಿತು. ಮಕ್ಕಳು ಅತ್ಯಂತ ಹರ್ಷ ವ್ಯಕ್ತಪಡಿಸಿದರು.  

ಮಾರ್ಚ್‌ 1 ರಿಂದ ಒಂದು ವಾರದವರೆಗೆ ಈಶ್ವರ ಗುಡಿ ಆವರಣದಲ್ಲಿ ಸಂಜೆ 6:30 ರಿಂದ 7:30ರ ವರೆಗೆ ನಡೆಯುವ ಮನಶಾಂತಿಗಾಗಿ ಶಿವಧ್ಯಾನ ಶಿಬಿರ ಲಾಭ ಪಡೆಯಲು ಬಿಕೆ ಸ್ನೇಹಕ್ಕೆ ಕರೆ ನೀಡಿದರು.