ದುರ್ಗಾದೇವಿ ಜಾತ್ರೆಯಲ್ಲಿ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

ದುರ್ಗಾದೇವಿ ಜಾತ್ರೆಯಲ್ಲಿ ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ A crowd of devotees thronged the Bhandara during the Durga Devi fair

ಲೋಕದರ್ಶನ ವರದಿ 

ಪಾಲಬಾವಿ 07 : ಗ್ರಾಮದ ಆರಾಧ್ಯದೇವತೆ ಜಗನ್ಮಾತೆ ದುರ್ಗಾದೇವಿ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವು ಎರಡು ದಿನಗಳವರೆಗೆ ಸಡಗರ ಸಂಭ್ರಮದಿಂದ ಸಂಪನ್ನಗೊಂಡಿತು. ಸೋಮವಾರ ಮುಂಜಾನೆ 6ಗಂಟೆಗೆ ದುರ್ಗಾದೇವಿ ಕರ್ತೃಗದ್ದುಗೆಗೆ ಅರ್ಚಕ ಮುತ್ತಪ್ಪ ಮಾದರ ಇವರಿಂದ ವಿಶೇಷ ಪೂಜೆ ನೆರವೇರಿತು. ಮುಂಜಾನೆ 7ಗಂಟೆಗೆ ದುರ್ಗಾದೇವಿ ದೇವಸ್ಥಾನದ ಪ್ರಭಾಮಂಡಲದಲ್ಲಿ ನಾವಲಗಿ ಗ್ರಾಮದ ಸಿದ್ದಲಿಂಗಯ್ಯ ಈರಯ್ಯ ಕಾಡದೇವರ ಇವರಿಂದ ಹೋಮ, ಹವನ, ವಿಶೇಷ ಪೂಜೆಜರುಗಿತು.. ರಾತ್ರಿ 8ಗಂಟೆಗೆ ಶಂಕರ ಮೇತ್ರಿ, ಅರ್ಜುನ ಮೇತ್ರಿ ಇವರಿಂದ ದೇವಿಯ ಪಾದ ಹೊಲಿಯುವ ಧರ್ಮಕಾರ್ಯವು ನೆರವೇರಿತು. ದುರ್ಗಾದೇವಿ ಸಭಾಭವನದಲ್ಲಿ 9 ಗಂಟೆಗೆ ಮುಧೋಳ ತಾಲೂಕು ಯಡಹಳ್ಳಿ ಗ್ರಾಮದ ಗಜಾನನ ಗಾಯನ ಸಂಘ ಹಾಗೂ ಮುಧೋಳ ಪಟ್ಟಣದ ರೇಣುಕಾದೇವಿ ಗಾಯನ ಸಂಘದ ಸುಪ್ರಸಿದ್ಧ ಕಲಾವಿದರಿಂದ ತುರುಸಾ- ತುರುಸಿನ ಹರದೇಶಿ -ನಾಗಶಿ ಚೌಡಕಿ ಪದಗಳ ಹಾಡುಗಾರಿಕೆ ಜರುಗಿತು.  

ಮಂಗಳವಾರ ಮುಂಜಾನೆ 6ಗಂಟೆಗೆ ದೇವಿಯ ಮೂರ್ತಿಗೆ ವಿಶೇಷ ಪೂಜೆ ನೆರವೇರಿತು. ದಿ.5ರಂದು ಮುಂಜಾನೆ 11ಗಂಟೆಗೆ ದುರ್ಗಾದೇವಿಯ ಪಲ್ಲಕ್ಕಿ ಹಾಗೂ ಭಾವಚಿತ್ರದ ಭವ್ಯ ಮೆರವಣಿಗೆ ಯುಗ್ರಾಮದ ಪ್ರಮುಖ ಬೀದಿಗಳಲ್ಲಿ  ಸಂಚರಿಸಿ ಭಕ್ತರೆಲ್ಲರೂ ಭಂಡಾರದಲ್ಲಿ ಮಿಂದೆದ್ದರು ಮಧ್ಯಾಹ್ನ 3 ಗಂಟೆಗೆ ಬರಲಿಂಗೇಶ್ವರ ದೇವಸ್ಥಾನದ ದಾಸೋಹ ಮಹಾಮನೆಯಲ್ಲಿ ಅನ್ನ ಸಂತರೆ​‍್ಣ ನೆರವೇರಿತು. ಸಂಜೆ 6ಗಂಟೆಗೆ ದುರ್ಗಾದೇವಿ ದೇವಸ್ಥಾನದ ಮುಂಭಾಗದಲ್ಲಿ ನಿಗಿನಿಗಿ ಉರಿಯುವ ಬೆಂಕಿಯಕೆಂಡದ ಮೇಲೆ ಅರ್ಚಕ ಮುತ್ತಪ್ಪ ಮಾದರ, ಪಲ್ಲಕ್ಕಿ ಹೊತ್ತ ಭಕ್ತರು, ಸೇರಿದಂತೆ ಹರಕೆ ಹೊತ್ತ ಭಕ್ತರು ಅಗ್ನಿಪ್ರವೇಶ ಮಾಡಿದರು ಮಿಂದೆದ್ದ ಭಕ್ತರು.