ಬಿ.ಎಲ್‌.ಓಗಳಿಗೆ ಅಗತ್ಯ ದಾಖಲೆ ನೀಡಿ ಸಹಕಾರ ನೀಡಿ : ಭರತ ಬೊಮ್ಮಾಯಿ

ಬಿ.ಎಲ್‌.ಓಗಳಿಗೆ ಅಗತ್ಯ ದಾಖಲೆ ನೀಡಿ  ಸಹಕಾರ ನೀಡಿ : ಭರತ ಬೊಮ್ಮಾಯಿ  Provide necessary documents to BLOs and cooperate: Bharat Bommai

ಲೋಕದರ್ಶನ ವರದಿ 

ಶಿಗ್ಗಾವಿ  01:  ನಿಮ್ಮ ಮನೆಗೆ ಆಗಮಿಸುವ ಬಿ.ಎಲ್‌.ಓ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಂಪೂರ್ಣ ಸಹಕಾರ ನೀಡಿ ಎಂದು ಭಾಜಪ ಮುಖಂಡ ಭರತ ಬೊಮ್ಮಾಯಿ ಹೇಳಿದರು.  ಪಟ್ಟಣದಲ್ಲಿ ಬಿ.ಎಲ್‌.ಓ ಅವರಿಗೆ ಮಾಹಿತಿ ನೀಡಿ ಮಾತನಾಡಿದ ಅವರು ರಾಜ್ಯಾದ್ಯಂತ ಇಂದಿನಿಂದ ಜುಲೈ 29ರವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಮನೆ-ಮನೆ ಸಮೀಕ್ಷೆ ನಡೆಯುತ್ತಿದೆ ಚುನಾವಣಾ ಆಯೋಗದಿಂದ ನಿಯುಕ್ತರಾದ ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಸಲ್ಲಿಸಿ, ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ  ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹಾಗೂ ವಿವರಗಳು ನಿಖರವಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯ ನಿಖರ ಮತದಾರರ ಪಟ್ಟಿಯಲ್ಲಿದೆ. ಆದ್ದರಿಂದ ಈ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿ ಗೋಳಿಸೋಣ ಎಂದರು.