ಧಾರವಾಡ 10: ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವರು, ಮಾಜಿ ರಾಜ್ಯಪಾಲರು ಆಗಿದ್ದ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಇಂದು ಕರ್ನಾಟಕ ವಿವಿ ಗಾಂಧಿ ಭವನದಲ್ಲಿ ಸಭೆ ಸೇರಿ ತೀವ್ರ ಸಂತಾಪ ಸಲ್ಲಿಸಲಾಯಿತು.
ಕುಲಸಚಿವ ಡಾ.ಎ.ಚೆನ್ನಪ್ಪ ಅವರು ಮಾತನಾಡಿ, ‘ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ವಿದೇಶಾಂಗ ಸಚಿವರಾಗಿ ದೇಶಕ್ಕೆ ಎಸ್.ಎಂ.ಕೃಷ್ಣ ಅವರ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು, ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾಗದ ಹಾನಿಯಾಗಿದೆ ಎಂದು ಹೇಳಿದರು.
ಪ್ರಭಾರ ಕುಲಪತಿ ಪ್ರೊ ಎಂ.ಬಿ.ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮೌಲ್ಯಮಾಪನ ಕುಲಸಚಿವ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ, ವಿತ್ತಾಧಿಕಾರಿ ಪ್ರೊ ಕೃಷ್ಣಮೂರ್ತಿ,ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶಕ ಪ್ರೊ.ಎಸ್.ಕೆ.ಪವಾರ, ಜಿಮ್ಖಾನಾ ಅಧ್ಯಕ್ಷ ಪ್ರೊ.ಈಶ್ವರ ಬೈದರೆ, ಡಾ,ಚೇತನ,ಡಾ.ಪುಷ್ಪಾ ಹೊಂಗಲ್, ಪ್ರೊ.ವಿಶ್ವನಾಥ ಎಂ, ಪ್ರೊ.ಅರವಿಂದ ಮೂಲಿಮನಿ, ಪ್ರೊ.ಜೆ.ಎಂ.ಚಂದುನವರ ಉಪಸ್ಥಿತರಿದ್ದರು. ಮೃತರ ಗೌರವಾರ್ಥ ಎರಡು ನಿಮಿಷ ಮೌನಾಚರಣೆ ಆಚರಿಸಲಾಯಿತು.