ಧಾರವಾಡ 21: ಕೃಷಿಮೇಳದಲ್ಲಿ ಸ್ಥಾಪಿಸಲಾಗಿರುವ ಸಮಗ್ರ ಕೃಷಿ ಪದ್ಧತಿಯ ಮಾದರಿಯು ಬಹಳಷ್ಟು ರೈತರನ್ನು ಆಕರ್ಷಿ ಸಿತು. ಈ ಮಾದರಿಯನ್ನು ವೀಕ್ಷಿಸಲು ರೈತರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡು ಬಂದಿತು
ಇತ್ತೀಚಿನ ದಿನಗಳಲ್ಲಿ ರೈತರು ಏಕ ಬೆಳೆ ಪದ್ಧತಿಯಿಂದ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸಮಗ್ರ ಕೃಷಿ ಉತ್ಪಾದನೆಯ ಮೂಲಕ ರೈತರ ಆರ್ಥಿ ಕ ಪರಿಸ್ಥಿತಿ ಹಾಗೂ ಜೀವನಮಟ್ಟ ಸುಧಾರಿಸಲು ಸಮಗ್ರ ಕೃಷಿ ಪದ್ಧತಿಗಳು ತುಂಬಾ ಸಹಕಾರಿಯಾಗಿದೆ. ಅನಿಶ್ಚಿತ ಮಳೆ, ಹವಾಮಾನ ವೈಪರಿತ್ಯಗಳಿಂದ ಕೃಷಿ ಉತ್ಪಾದನೆಯ ಸುಸ್ಥಿರತೆಯನ್ನು ಕಳೆದುಕೊಳ್ಳುತ್ತಿದ್ದು, ಕೃಷಿ ಬೆಳೆಗಳಿಂದ ಮಾತ್ರ ಬರುತ್ತಿರುವ ಉತ್ಪಾದನೆಯು ಹಾಗೂ ಆದಾಯ ಕುಂಠಿತಗೊಳ್ಳುತ್ತಿದೆ. ಸಮಗ್ರ ಕೃಷಿ ಪದ್ಧತಿ ಮೂಲಕ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸುಂದರವಾಗಿ ಮಾದರಿ ತಯಾರಿಸಿದ್ದರು.
ಈ ಮಾದರಿಯಲ್ಲಿ ಬೆಳೆಗಳ ಜೊತೆಗೆ ಕೃಷಿ ಅವಲಂಬಿತ ಉಪಕಸುಬುಗಳ ಸೂಕ್ತ ಸಂಯೋಜನೆಯಿಂದ ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಸುಸ್ಥಿರ ಉತ್ಪಾದನೆ ಪಡೆದು ಆದಾಯವನ್ನು ಉತ್ತಮಪಡಿಸುವುದರ ಜೊತೆಗೆ ವರ್ಷ ಪೂತರ್ಿ ರೈತರ ಕುಟುಂಬಕ್ಕೆ ಉದ್ಯೋಗ ಸೃಷ್ಟಿಸಿ ಸ್ವಾವಲಂಬಿ ಜೀವನೋಪಾಯ ನಡೆಸಲು ಸಾಧ್ಯವಿದೆ. "ಸಮಗ್ರ ಕೃಷಿ ಪದ್ಧತಿ"ಯ ರೈತನ ಮುಖ್ಯ ಆದಾಯದ ಮೂಲ ಎಂದು ತಿಳಿಸಲಾಯಿತು.
ಬೆಳೆ ಆಧಾರ ಸಮಗ್ರ ಕೃಷಿ ಪದ್ಧತಿಯಲ್ಲಿ ಬೆಳೆ ಉತ್ಪಾದನೆ ಮುಖ್ಯ ಗುರಿಯಾಗಿದ್ದು, ಇತರೆ ಪದ್ಧತಿಗಳು ಬೆಳೆ ಉತ್ಪಾದನೆಗೆ ಪೂರಕವಾಗಿರುತ್ತವೆ. ಜಾನುವಾರು ಸಾಕಾಣಿಕೆಯೇ ಮುಖ್ಯವಾಗಿದ್ದು ಕುಟುಂಬದ ಒಟ್ಟು ಆದಾಯಕ್ಕೆ ಇದರಿಂದ ಹೆಚ್ಚಿನ ಪಾಲು ದೊರೆಯುತ್ತದೆ. ಬೆಳೆ ಉತ್ಪಾದನೆಯು ದನಕರುಗಳಿಗೆ ಮೇವನ್ನು ಒದಗಿಸಲು ಸಹಾಯಕಾರಿಯಾಗುತ್ತದೆ ಎಂಬ ಅಂಶಗಳನ್ನು ವಿವರಿಸಲಾಗುತ್ತಿದೆ.
ವಿವಿಧೋದ್ದೇಶ ಮರಗಳನ್ನು ಬೆಳೆದು ಅವುಗಳಿಂದ ಮೇವು, ಕಟ್ಟಿಗೆ ಮತ್ತು ಉರುವಲುಗಳನ್ನು ಪಡೆಯಬಹುದು. ತೋಟಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿಯಲ್ಲಿ ಹಣ್ಣಿನ ಗಿಡಗಳು, ತರಕಾರಿಗಳು ಮತ್ತು ಹೂ ಬೆಳೆಗಳು ಮುಖ್ಯ ಪಾತ್ರವಹಿಸುತ್ತವೆ. ರೇಷ್ಮೆ ಕೃಷಿಯಿಂದ ಹೆಚ್ಚು ಆದಾಯ ಪಡೆಯುವಲ್ಲಿ ಸಫಲವಾಗಿದ್ದು, ಈ ಪದ್ಧತಿಯಲ್ಲಿ ಮೀನು ಸಾಕಾಣಿಕೆ ಒಂದು ಮುಖ್ಯ ಕಸುಬಾಗಿದ್ದು, ಹೆಚ್ಚು ಆದಾಯ ನಿರೀಕ್ಷಿಸಬಹುದು ಎಂಬ ಮಾಹಿತಿ ನೀಡಲಾಗುತ್ತಿದೆ.
ಆಯಾ ಪ್ರದೇಶದ ಹವಾಗುಣ, ಲಭ್ಯವಿರುವ ಇತರ ಪರಿಕರಗಳ ಮೇಲೆ ಅವಲಂಬಿತವಾಗಿರುವ ಸಮಗ್ರ ಕೃಷಿ ಪದ್ಧತಿಯನ್ನು ಕೃಷಿ ವಲಯ ಆಧಾರಿತ ಮತ್ತು ನೀರಾವರಿ ಆಧಾರಿತ ಪದ್ಧತಿಗಳಾಗಿ ವಿಂಗಡಿಸಿ ಮಾದರಿಗಳನ್ನು ತಯಾರಿಸಲಾಗಿತ್ತು.