ಲೋಕದರ್ಶನ ವರದಿ
ರಾಯಬಾಗ 19: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹತ್ತಿರದ ವಿದ್ಯುತ್ ಕಂಬಕ್ಕೆ ಕಬ್ಬು ತುಂಬಿದ ಟ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಬಾಗಿದ್ದು, ಹೆಚ್ಚಿನ ಅನಾಹುತತಪ್ಪಿದೆ.
ಬುಧವಾರ ಬೆಳಿಗ್ಗೆ ಟ್ಯಾಕ್ಟರ್ ಚಾಲಕ ಕಬ್ಬು ತುಂಬಿದ ಟ್ಯಾಕ್ಟರ್ನ್ನು ರಸ್ತೆ ಪಕ್ಕ ನಿಲ್ಲಿಸಿ ಚಹಾ ಕುಡಿಯಲು ಹೋದ ಸಂದರ್ಭದಲ್ಲಿ ನ್ಯೂಟ್ರಲ್ದಲ್ಲಿ ಇದ್ದಟ್ಯಾಕ್ಟರ್ ಆಸ್ಪತ್ರೆ ಎದುರು ಇರುವ ವಿದ್ಯುತ್ ಕಂಬಿಗೆ ಡಿಕ್ಕಿ ಹೊಡೆದಿರುವುದಾಗಿ ಪ್ರತ್ಯಕ್ಷದಶರ್ಿಗಳು ತಿಳಿಸಿದ್ದಾರೆ. ತಕ್ಷಣ ವಿದ್ಯುತ್ ಸಬರಾಜನ್ನು ಕಡಿತಗೊಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಈ ಸಂಬಂಧವಾಗಿ ರಾಯಬಾಗ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣದಾಖಲಾಗಿಲ್ಲ.